ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು! (ಪ್ಲಸ್ ಪಾಯಿಂಟ್)

ಸ್ಪರ್ಧೆಯಲ್ಲಿ ಸೋತಾಗ, ಪ್ರೇಯಸಿ ಕೈ ಕೊಟ್ಟಾಗ, ನಿರೀಕ್ಷೆಗಳೆಲ್ಲಾ ಸುಳ್ಳಾದಾಗ ಮನಸ್ಸು ಮಂಕಾಗಿ ಕುಳಿತುಬಿಡುತ್ತೆ.

ನನಗೆ 90ಶೇ. ಮಾರ್ಕು ಬರಲಿಲ್ಲ, ನನ್ನ ಪರ್ಸಿನ ತುಂಬ ನೋಟಿನ ಕಂತೆಯಿಲ್ಲ, ಛೆ! ನಾನು ಅವ(ನ/ಳ)ಷ್ಟು ಸ್ಪರದ್ರೂಪಿಯಲ್ಲ, ಅಯ್ಯೋ! ನಂಗೆ ಬರೀ 5 ಸಾವಿರ ಸಂಬಳದ ಜಾಬ್, ಎಂಥಾ ಕೆಲಸವಾಯಿತು; ಇವತ್ತು ಫಸ್ಟ್ ಪ್ರೈಸ್ ಬರ್ಲೇಇಲ್ಲ ನಂಗೆ, ಮನಸಾರೆ ಪ್ರೀತಿಸಿದ್ದೆ; ಆದರಾಕೆ ಇದ್ದಕ್ಕಿದ್ಹಾಗೇ ಕೈ ಕೊಡವಿ ಹೋದಳಲ್ಲ!, ಅವನು ಹ್ಯಾಗೆ ಡ್ಯಾನ್ಸ್ ಮಾಡ್ತಾನೆ; ನಾನೂ ಇದ್ದೀನಿ ಏನಕ್ಕೂ ಬಾರದೋಳು ಅಂತೆಲ್ಲ ಪೆದ್ದು ಪೆದ್ದಾಗಿ ಅಂದುಕೊಂಡು ತಲೆಯಮೇಲೆ ಕೈಹೊತ್ತುಕೊಂಡು ಕೂರೋದಕ್ಕಿಂತ ಬೇರೆ ಮೂರ್ಖತನವಿದೆಯೆ?

ನಮ್ಮ ಆಶೆಬುರುಕ ಮನಸ್ಸೇ ಹಾಗೆ; ಆಕಾಶಕ್ಕೆ ಏಣಿಹಾಕಿ ಲಾಗಹಾಕಲು ರೆಡಿಯಾಗುತ್ತೆ. ಸಿಕ್ಕಿದಷ್ಟೂ ಮತ್ತೂ ಬೇಕೆಂದು ಕೂರೋ ಬಕಾಸುರ ಮನಸ್ಸು ನಮ್ಮದು! ಹೀಗಿರುವಾಗ ಅದು ಸಿಗಲಿಲ್ಲ ಇದು ದೊರಕಲಿಲ್ಲಾಂತ ಕೊರಗಿ ಕೂರೋದ್ಯಾಕಲ್ವ? ನಮ್ಮಲ್ಲೊಂದು ಒಳ್ಳೆತನವಿದ್ದರೆ ನಾಳೆ ನಮಗೆ ಒಳ್ಳೆದಾಗೇ ಆಗುತ್ತೆ. ಸುಮ್ಮ ಸುಮ್ಮನೆ ಕುಂಟುನೆಪ ಹುಡುಕೋದರ ಬದಲು ಹಠತೊಟ್ಟು ಎದ್ದುಕುಂತರೆ, ನಿಷ್ಟೆಯಿಂದ ದುಡಿದರೆ, ಶ್ರಮ ಪಟ್ಟರೆ ಒಲಿಯಲಾರದ್ದು ಯಾವುದಿದೆ?

ನಮ್ಮಳಗೊಂದು ಕಿಚ್ಚು ಇರೋದೇ ಹೌದಾದರೆ, ಶುಭ್ರ ಮನಸ್ಸಿನಿಂದ ಮೈ ಬಗ್ಗಿಸಿ ದುಡಿದದ್ದು ನಿಜವೇ ಆದರೆ ಸಂಭ್ರಮ ನಾಳೆ ನಮ್ಮ ಕೈ ಹಿಡಿದು ನಡೆಸೇ ನಡೆಸುತ್ತೆ ಅನ್ನೋದನ್ನು ನಾವು ಕಂಡುಕೊಳ್ಳಬೇಕು. ಇರುವ ಭಾಗ್ಯವನ್ನೇ ಆದರದಿಂದ ಒಪ್ಪಿಕೊಂಡು ಖುಷೀಲಿ ಹೆಜ್ಜೆಹಾಕಲು ಪ್ರಯತ್ನಿಸಬೇಕು. ಹುಡುಕಿದರೆ ಪ್ರತಿಯೊಬ್ಬರೊಳಗೂ ನೂರು ಕೊರತೆ ಸಿಕ್ಕೀತು. ಆದರೆ ಕೊರತೆಯಿದೆಯಲ್ಲಾಂತ ಕೊರಗುತ್ತಕೂರೋರು ಮೂರ್ಖರಾಗುತ್ತಾರೆ. ಬದುಕೆಷ್ಟು ಹಿಮ್ಮೆಟ್ಟಿಸಿದರೂ ಮತ್ತೆ ಹೆಜ್ಜೆ ಕಿತ್ತಿಟ್ಟು ಮುನ್ನಡೆಯಬೇಕು. ಜಗತ್ತಿನ ಖುಷಿಯೆಲ್ಲಾ ನನ್ನದೇ ಅಂದುಕೊಂದು ಬಾಳದೋಣೀಲಿ ಸಾಗುವ ಜೀವನ ರಸಿಕರಂತಾಗಬೇಕು ನಾವು!

ಭಗವಂತ ಬದುಕೆಂಬ ಬೆಲೆಕಟ್ಟಲಾರದ ಭಾಗ್ಯವೊಂದನ್ನು ಕೊಟ್ಟಿರುವ ನಾವೆಲ್ಲರೂ ಭಾಗ್ಯವಂತರೇ ಅಲ್ಲವೇ? ಇರುವ ಭಾಗ್ಯವನ್ನೇ ನೆನೆದು ಸಾಧನೆಯ ದಾರೀಲಿ ಇನ್ನಷ್ಟು ದೂರ ಸಾಗೋಣ, ಜಗತ್ತಿನ ಖುಷಿಯೆಲ್ಲಾ ನಮ್ಮದೇ ಎಂಬಂತೆ ಬದುಕೋಣ, ಬದುಕನ್ನು ಒಂಚೂರೂ ಬಿಡದೆ ಸವಿಯೋಣ.. 

ಕಾಮೆಂಟ್‌ಗಳು

  1. ಧನ್ಯವಾದಗಳು,ಜೀವನೋತ್ಸಾಹಭರಿತ ಲೇಖನ. ಹೀಗೆ ಬರವಣಿಗೆ ಯಶಸ್ಸಿನಿಂದ ಸಾಗಲಿ....ಶುಭಕಾಮನೆಗಳು!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು