ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಗೊತ್ತಾ ವಿಷ್ಯಾ?!: ‘ಹ್ಯಾಂಗರ್’ ಹ್ಯಾಂಗಾಯ್ತು?!


ನೆಯ ಅಂದವನ್ನು ಕಾಪಾಡುವಲ್ಲಿ ‘ಹ್ಯಾಂಗರ್’(ತೂಗುಕೊಕ್ಕೆ)ಗಳ ಪಾತ್ರವೂ ಮಹತ್ವದ್ದು. ಒಪ್ಪ-ಓರಣವಾಗಿ ಮನೆ ಕಾಣಿಸಬೇಕೆಂದಿದ್ದರೆ ಹ್ಯಾಂಗರ್ಗಳ ಸಹಾಯ ಪಡೆದು ಬಟ್ಟೆಗಳನ್ನು ನೀಟಾಗಿ ಜೋತುಹಾಕಬಹುದು. ಹ್ಯಾಂಗರ್ಗಳು ಬಟ್ಟೆ ಚೆಲ್ಲಾಪಿಲ್ಲಿಯಾಗೋದನ್ನು ತಪ್ಪಿಸುತ್ತದೆಯಾದ್ರಿಂದ ಮನೆ ಸೊಗಸಾಗಿಕಾಣುತ್ತದೆ. ಅಂದ್ಹಾಗೆ ಸಿಂಪಲ್ಲಾಗಿರೋ ಈ ಬಟ್ಟೆದೋಸ್ತ್ ಗೂ ಶತಮಾನದ ತಿಹಾಸವಿದೆ ಅನ್ನೋದು ಗೊತ್ತೇ? 

ಥೇಟ್ ಮನುಷ್ಯರ ಭುಜವನ್ನೇ ಹೋಲುವ ಹ್ಯಾಂಗರ್ಗಳು ಇವೆಯಲ್ಲ? ಅವು ರೂಪ ತಳೆದದ್ದು 1903ನೇ ಇಸವಿಯಲ್ಲಿ. ಅಮೆರಿಕದ ಮಿಷಿಗನ್‌ನ ಜ್ಯಾಕ್ಸನ್‌ನಲ್ಲಿ ‘ಟಿಂಬರ್‌ಲೇಕ್‌ ವೈರ್‌ ಅಂಡ್‌ ನಾವೆಲ್ಟಿ ಕಂಪೆನಿ’ ಎಂಬ ಯಂತ್ರೋಪಕರಣಗಳ ನಿರ್ಮಾಣ ಕಾರ್ಖಾನೆಯೊಂದು ಕಾರ್ಯ ನಿರ್ವಹಿಸುತ್ತಿತ್ತು. ಆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ತಾವು ಧರಿಸಿದ್ದ ಕೋಟುಗಳನ್ನು ಗೋಡೆಯ ಮೇಲಿನ ಕೊಕ್ಕೆಗೆ ತೂಗು ಹಾಕುತ್ತಿದ್ದರು. ಹೀಗೆ ತೂಗು ಹಾಕುತ್ತಿದ್ದ ಕೋಟುಗಳು ನೋಡೋದಕ್ಕೆ ಅಸ್ತವ್ಯಸ್ತವಾಗಿ ಕಾಣುತ್ತಿದ್ದುದು ಮಾತ್ರವಲ್ಲ ಜಾಸ್ತಿ ಜಾಗವನ್ನೂ ತಿನ್ನುತ್ತಿದ್ದವು. ಬರಬರುತ್ತಾ ಕಾರ್ಖಾನೆ ನೌಕರರಿಗೆ ಬಟ್ಟೆಹಾಕಲು ಜಾಗವೇ ಇಲ್ಲದಾಯಿತು. ನೌಕರರು ಈ ಬಗ್ಗೆ ಕಂಪೆನಿಯ ಗಮನಕ್ಕೂ ತಂದರು.

ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆಲ್ಬರ್ಟ್‌ ಜೆ. ಪಾರ್ಕ್‌ ಹೌಸ್‌ ಎಂಬೊಬ್ಬನಿಗೆ ಈ ಸಮಸ್ಯೆಗೊಂದು ಐಡಿಯಾ ಹೊಳೆಯಿತು. ಕಾರ್ಖಾನೆಯಲ್ಲೇ ಇದ್ದ ತಂತಿಯನ್ನು ಮಾನವನ ಭುಜಗಳನ್ನು ಹೋಲುವಂತೆ ವಿನ್ಯಾಸಗೊಳಿಸಿ, ಮೇಲ್ಭಾಗದಲ್ಲಿ ಕೊಕ್ಕೆಯ ರಚನೆಯನ್ನು ಮಾಡಿ ಅದರಲ್ಲಿ ಕೋಟನ್ನು ತೂಗು ಹಾಕಿಬಿಟ್ಟ. ಈ ತಂತಿ ತೂಗು ಕೊಕ್ಕೆಗೆ ಬೇಕಾಗಿದ್ದು ಸ್ವಲ್ಪವೇ ಜಾಗ. ಪಾರ್ಕ್‌ ಹೌಸ್‌ನ ಈ ಸರಳ ಉಪಾಯ ಟಿಂಬರ್‌ ಲೇಕ್‌ ನೌಕರರ ಸಮಸ್ಯೆಯನ್ನೇ ಶಾಶ್ವತವಾಗಿ ಬಗೆಹರಿಸಿತು.

ಈ ತಂತಿ ತೂಗುಕೊಕ್ಕೆ ಜಗತ್ತಿನ ಮೊದಲ ಹ್ಯಾಂಗರ್‌ ಆಯಿತು. ಆಲ್ಬರ್ಟ್‌ ಜೆ. ಪಾರ್ಕ್‌ಹೌಸ್‌ ಅದರ ಸೃಷ್ಟಿಕರ್ತ ಎಂಬ ಗೌರವಕ್ಕೂ ಪಾತ್ರನಾದ. ಮಾಹಿತಿಯನ್ನು ಕೆದಕಿದರೆ ಹ್ಯಾಂಗರ್ ನ ಮೂಲ ಹುಟ್ಟು 1969ರಲ್ಲಿ ನ್ಯೂ ಬ್ರಿಟನ್ ನ ಒ.ಎ. ನಾರ್ತ್ ಅವರಿಂದ ಆಯಿತು ಎನ್ನಲಾದರೆ ಮತ್ತೊಂದೆಡೆ 1876ರಲ್ಲಿ ಬೋಸ್ಟನ್ ಯೂನಿವರ್ಸಿಟಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಕ್ರಿಸ್ಟೋಫರ್ ಕ್ಯಾನ್ ಅವರಿಂದ ಆಯಿತು ಎನ್ನುವ ವಾದರೂ ಇದೆ. ಇತಿಹಾಸಕಾರರು ಅಮೆರಿಕಾದ ಪ್ರೆಸಿಡೆಂಟ್ ಆಗಿದ್ದ ಥಾಮಸ್ ಜೆಫರ್ಸನ್ ಅವರು ಹ್ಯಾಂಗರ್ ನ ಹುಟ್ಟಿಗೆ ಕಾರಣ ಎನ್ನುತ್ತಾರೆ. ಆದರೆ ಹ್ಯಾಂಗರ್ ಹ್ಯಾಂಗಾಯ್ತು ಅನ್ನೋದಕ್ಕೆ ಪಾರ್ಕ್ ಹೌಸ್ ಅವರೇ ಹೆಚ್ಚು ಜನಪ್ರಿಯರಾಗಿ ನಿಲ್ಲುತ್ತಾರೆ. 

ಈಗಿನ ದಿನಗಳಲ್ಲಿ ಹ್ಯಾಂಗರ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯಾದರೂ, ಅದರ ಮೂಲ ವಿನ್ಯಾಸ ಈಗಲೂ ಅದೇ ರೀತಿಯಲ್ಲೇ ಇದೆ. ಬೇಕಾದರೆ ನೀವು ಹಳ್ಳಿಗಳಿಗೆ ಭೇಟಿಕೊಟ್ಟಾಗ ಗಮನಿಸಿ. ಅಲ್ಲಿ ಒಬ್ಬನಾದರೂ ಅಜ್ಜ ಹಳೆಯ ತಂತಿಯನ್ನೇ ಹ್ಯಾಂಗರ್ ನಂತೆ ಬಾಗಿಸಿ ಅದಕ್ಕೆ ಅಂಗಿ ಜೋತುಹಾಕಿರುತ್ತಾನೆ. ಹುಡುಕಿದರೆ ಹಳ್ಳಿಗಳಲ್ಲಿ ಈಗಲೂ ಒಬ್ಬನಲ್ಲೊಬ್ಬ ಆಲ್ಬರ್ಟ್‌ ಜೆ. ಪಾರ್ಕ್‌ಹೌಸ್‌ ಕಾಣಿಸುತ್ತಾನೆ. ಅಲ್ಲಲ್ಲಿ ಹ್ಯಾಂಗರ್ ನ ಮೂಲರೂಪವೂ ಕಾಣಸಿಗೋದಿದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು