ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್‌ಫಿಶ್ (ಈ ಜಗ-ಸೋಜಿಗ!)

ವಿಕಾರ-ವಿಚಿತ್ರ ರೂಪದ ರೂಪದ ಮನುಷ್ಯರ ಬಗ್ಗೆಯೋ, ಪ್ರಾಣಿಗಳ ಬಗ್ಗೆಯೋ ಆಗಾಗ ಕೇಳುತ್ತಿರುತ್ತೇವೆ. ಪಕ್ಷಿಗಳೂ ಸೇರಿದಂತೆ ಅನೇಕ ಜೀವಿಗಳು ವೈವಿಧ್ಯತೆಯಿಂದ, ವಿಚಿತ್ರ ರೂಪದಿಂದ ನೋಡಿದೋರಿಗೆ ಅಚ್ಚರಿ ಮೂಡಿಸೋದಿದೆ. ಅಂತದ್ದೇ ವಿಚಿತ್ರ ಜೀವಿಗಳಲ್ಲಿ ಬ್ಲಾಬ್ ಫಿಶ್ ಕೂಡ ಬಂದು. ಅಂದ್ಹಾಗೇ ಇದೊಂದು ವಿಧದ ಮೀನಾದರೂ ನೋಡಲಿಕ್ಕೆ ಥೇಟ್ ಹಲ್ಲುದುರಿದ ಹಣ್ಣು ಮುದುಕನ ಹಾಗೆಯೇ ಕಾಣುತ್ತದೆ. 

ಎರಡರಿಂದ ನಾಲ್ಕು ಸಾವಿರ ಅಡಿಯಷ್ಟು ಆಳದ ಸಮುದ್ರದಲ್ಲಿ ಸಾಮಾನ್ಯವಾಗಿ ಈ ಮೀನುಗಳು ಕಾಣಸಿಗುತ್ತವೆ. 12 ಇಂಚು ಮಾತ್ರ ಸಾಮಾನ್ಯವಾಗಿ ಬೆಳೆಯುತ್ತವೆ. ವಿಶೇಷವೆಂದರೆ ಈ ಮೀನು ಹೊರಳಿದಾಗ, ಚಲಿಸಿದಾಗ ಇದರ ಮುಖಚಹರೆ ಬದಲಾಗುತ್ತದೆ. ಲೋಳೆಯಿಂದ ಮೀನಿನ ದೇಹ ರಚನೆಯಾಗಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ ಮೀನಿನ ಮುಖವಂತೂ ನಿಮ್ಮ ಕಣ್ಣಿಗೆ ಬಿದ್ದರೆ ಹಲ್ಲುದುರಿದ ಮುದುಕ ಮುಖ ಕಣ್ಣೆದುರು ಸಿಕ್ಕಂತಾಗಿ ನೀವೊಮ್ಮೆ ಹೌಹಾರಿದರೂ ಅಚ್ಚರಿಯಿಲ್ಲ. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು