ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ರೆಟ್ರೋ ವಾಲ್ ಪೇಂಟಿಂಗ್ಸ್

ಸುಮ್ಮನೆ ಖಾಲಿಬಿಟ್ಟ ಗೋಡೆಗಿಂತ ಚಂದದ್ದೊಂದು ಚಿತ್ರ, ಫೋಟೋ ತೂಗು ಹಾಕಿದ ಮನೆಯ ಗೋಡೆ ನೋಡೋಕೆ ಅಂದ. ವಾಲ್ ಪೇಂಟಿಂಗ್ಸ್ ಮನೆಯ ಅಂದ ಹೆಚ್ಚಿಸೋದಷ್ಟೇ ಅಲ್ಲ, ಅವರವರ ಅಭಿರುಚಿಗೆ ತಕ್ಕಂತೆ ಭಾವನಾತ್ಮಕವಾಗಿಯೂ ತಾಕಿ, ಮನಸ್ಸನ್ನು ಹಿತಗೊಳಿಸುತ್ತವೆ
ಸಾಮಾನ್ಯ ವಾಲ್ ಪೇಂಟಿಂಗೂ ರೆಟ್ರೋ ವಾಲ್ ಪೇಂಟಿಂಗೂ ಅಂಥ ಹೆಚ್ಚಿನ ಭಿನ್ನತೆಯೇನೂ ಇಲ್ಲ. ಆದರೂ ವಿಂಟೇಜ್ ಪೇಂಟಿಂಗ್ ಗಳು ಅದರದ್ದೇ ಧಾಟಿಯಲ್ಲಿ ಸೆಳೆಯುತ್ತವೆ. ಮಾಡರ್ನ್ ಪೇಂಟಿಂಗ್ ಗಳನ್ನು ತೂಗು ಹಾಕಿದ್ದ ಮನೆಗಳಿಗೆ ಭೇಟಿ ಕೊಟ್ಟವರು ರೆಟ್ರೋ ಪೇಂಟಿಂಗ್ ತೂಗು ಹಾಕಿದ್ದ ಮನೆಗೆ ಭೇಟಿ ಕೊಟ್ಟಾಗ ಆ ಪೇಂಟಿಂಗ್ ಗಳು ಎಂಥದ್ದೋ ರೀತಿಯಲ್ಲಿ ಸೆಳೆಯುತ್ತವೆ; ರಾಕ್ ಮ್ಯೂಸಿಕ್ ಗಳನ್ನು ಕೇಳಿ ಕೇಳಿ ಒಂದಿನ ಮಹಮ್ಮದ್ ರಫೀ, ಪಿಬಿ ಶ್ರೀನಿವಾಸ್, ಬೇಂದ್ರೆ ಭಾವಗೀತೆಗಳನ್ನು ಕೇಳುವಾಗಿನ ಹಿತದ ಹಾಗೆ
ಸ್ಪೆಶಾಲಿಟಿ
ಮಾಮೂಲಿ ಪೇಂಟಿಂಗ್ ಗಳಿಗಿಂತ ಕೊಂಚವೇ ಭಿನ್ನವಾದ ಥೀಂಗಳು ರೆಟ್ರೋ ವಾಲ್ ಪೇಂಟಿಂಗ್ ಗಳು ಸಿಕ್ಕುತ್ತವೆ. ಯಾವುದೋ ಹಕ್ಕಿ, ಪ್ರಾಣಿ, ಮನುಷ್ಯನ ಮುಖ, ಮರದ ರೆಂಬೆ, ವಿಚಿತ್ರ ಹೂಗಳು, ಎಂದತ್ತೋ ಕತೆ ಉಸುರುವ ಬಣ್ಣದ ರೇಖೆಗಳು, ಸುಮ್ಮನೆ ತೆಗೆದ ಹಳೆ ಕಾರಿನ ಚಿತ್ರ ಹೀಗೆ ಎಲ್ಲವೂ ಮನಸ್ಸಿಗೆ ಹಿಡಿಸುವ ಹಾಗೆ ರೆಟ್ರೋ ವಾಲ್ ಪೇಂಟಿಂಗ್ ಗಳಿರುತ್ತವೆ. ಮತ್ತೆ ರೆಟ್ರೋ ಪೇಂಟಿಂಗ್ ಹಳೆ ಕೈಗಳು ಬರೆದಂತವು. ಹಾಗಾಗೇ ಅವು ಈಗಿನ ವಾಲ್ ಪೇಂಟಿಂಗ್ ಗಳಿಗಿಂತ ಕೊಂಚ ಭಿನ್ನತೆಯನ್ನು ಹಿಡಿದಿಟ್ಟುಕೊಂಡಿರುತ್ತವೆ.
ಸೈಕಾಲಾಜಿಕಲ್ ಇಶ್ಯು 
ವಾಲ್ ಪೇಂಟಿಂಗ್ ಗಳಿಗೆ ಮನಸ್ಸನ್ನು ಉಲ್ಲಾಸಿತಗೊಳಿಸೋ ಶಕ್ತಿಯಿದೆ. ರೆಟ್ರೋ ವಾಲ್ ಪೇಂಟಿಂಗ್ ಗಳಲ್ಲೂ ಸೈಕಾಲಾಜಿ ರಿಲೇಟೆಡ್ ಥೀಂಗಳಿವೆ. ಮನಸ್ಸು ರಿಲಾಕ್ಸ್ ಗೊಳಿಸಬಲ್ಲ ಭಿನ್ನ ಪೇಂಟಿಂಗ್ ಗಳು, ಇನ್ಸ್ಪೈರೇಷನಲ್ ಬರಹಗಳು, ರೇಖೆಗಳ ಪೇಂಟಿಂಗ್ ಗಳು ಮನಸ್ಸಿಗೆ ಮುದ ನೀಡುತ್ತವೆ. ಹಾಗಾಗಿ ಮನೆ-ಮನಸ್ಸಿನ ಹಿತಕ್ಕಾಗಿ ರೆಟ್ರೋ ಪೇಂಟಿಂಗ್ ಗಳತ್ತವೊಮ್ಮೆ ಇಣುಕಿ ನೋಡಬಹುದು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು