ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಇಲ್ಲೊಬ್ಬಳು ಪೋಕ್‌ಮನ್‌ನಿಂದ ಅತ್ಯಾಚಾರ ಆಗಿದ್ದಳಂತೆ!

ಪಾಶ್ಚಾತ್ಯ ದೇಶಗಳಲ್ಲಿ ಹುಟ್ಟಿಕೊಂಡ ಮಾಂತ್ರಿಕ ಗೇಮ್ ಪೋಕ್‌ಮನ್‌ ಬಗ್ಗೆ ನೀವು ಕೇಳಿರಬಹುದು. ಈ ಆಟದ ಬಗ್ಗೆ ಇಲ್ಲ ಸಲ್ಲದ ಗಾಸಿಪ್‌ಗಳೂ ಕೇಳಿಬಂದಿದ್ದವು. ರಷ್ಯಾದ ಮಹಿಳೆಯೊಬ್ಬಳು ತಾನು ಪೋಕ್‌ಮನ್‌ ಪಾತ್ರಧಾರಿಯಿಂದ ಅತ್ಯಾಚಾರಕ್ಕೊಳಗಾಗಿರುವುದಾಗಿ ದೂರು ನೀಡಿದ್ದಳು. ಈ ದೂರನ್ನು ನೋಡಿದ ಪೊಲೀಸರು ಒಮ್ಮೆ ದಂಗಾಗಿ ಆಮೇಲೆ ಬಾಯ್ಬಾಯಿ ಬಡಕ್ಕೊಂಡರಂತೆ. 

ಹಿಂದಿನ ದಿನ ರಾತ್ರಿ ಮಲಗುವವರೆಗೆ ತಾನು ಪೋಕ್‌ಮನ್‌ ಗೇಮ್ ಆಡಿರುವುದಾಗಿ ಹೇಳಿಕೊಂಡಿರುವ ಆ ಮಹಿಳೆ ಬೆಳಿಗ್ಗೆ ಎದ್ದಾಕ್ಷಣ ತನ್ನೊಂದಿಗೆ ಪೋಕ್‌ಮನ್‌ ಕೂಡ ಮಲಗಿರುವುದನ್ನು ಕಂಡಿದ್ದಾಳೆ. ಆ ಪಾತ್ರಧಾರಿ ರಾತ್ರಿವೇಳೆ ತನ್ನ ಮೇಲೆ ಅತ್ಯಾಚಾರ ಮಾಡಿದೆ ಎಂದು ಆರೋಪಿಸಿದ್ದಾಳೆ. ಹಾಸಿಗೆಯಿಂದೆದ್ದು ನೋಡಿದರೆ ಪೋಕ್‌ಮನ್‌ ಪಾತ್ರಧಾರಿ ಮಾಯವಾಗಿತ್ತು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾಳೆ.


ಆ ಆಟದಲ್ಲಿ ಪೋಕ್‌ಮನ್‌ ಹಲವಾರು ದಿನಗಳಿಂದ ತನ್ನ ಮನೆಯ ಆಸುಪಾಸಿನಲ್ಲೇ ಸುಳಿದಾಡುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದೂ ಆಕೆ ಹೇಳಿದ್ದಾಳೆ. ಈಕೆಯ ದೂರು ಪಡೆದುಕೊಂಡು ಕಂಗಾಲಾಗಿರುವ ಪೊಲೀಸರು ಸಾಧ್ಯವಾದಷ್ಟು ಬೇಗ ಮನಶಾಸ್ತ್ರಜ್ಞರನ್ನು ಭೇಟಿಯಾಗಲು ಆಕೆಗೆ ಸಲಹೆ ನೀಡಿದ್ದರಂತೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು