ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಪರಿಸರದೊಳಗಿನ ಅಚ್ಚರಿಗಳ ಹೊತ್ತಿಗೆ 'ವಿಸ್ಮಯ 2' (Book Rack)

ಣ್ಣಿನ ನೆಲಕ್ಕೆ ಬಿದ್ದ ಬೀಜವೊಂದು ಮೆಲ್ಲಗೆ ಟಿಸಿಲೊಡೆದು ಕೊಂಚ ಕೊಂಚವೇ ತಲೆಯೆತ್ತಿ ಹೆಮ್ಮರವಾಗಿ ಎದ್ದು ನಿಲ್ಲುವವರೆಗೆ ಜೀವವಿಜ್ಞಾನ, ಪರಿಸರ ವಿಜ್ಞಾನದ ಅನೇಕ ಸಂಗತಿಗಳು ಕೆಲಸಮಾಡಿರುತ್ತವೆ. ಜೀವ ವಿಜ್ಞಾನ, ಪರಿಸರ ವಿಜ್ಞಾನಗಳು ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನೊಳಗೊಂಡಿರುತ್ತದೆ. ಆ ಕೌತುಕಗಳ ಅರಿವಾಗಬೇಕಾದರೆ ನಮಗೆ ಕುತೂಹಲದ ಕಣ್ಣುಗಳು ಬೇಕಷ್ಟೆ. ಇಂಥ ಕುತೂಹಲಿಗರಿಗಾಗಿ, ಪ್ರಕೃತಿ ವಿಸ್ಮಯದ ಜಾಡಿನೊಳಗೊಂದು ಇಣುಕು ನೋಟ ಹರಿಸಬೇಕೆನ್ನುವವರಿಗಾಗಿ ಇರುವ ಅದ್ಭುತ ಕೃತಿ ವಿಸ್ಮಯ 2. 

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆಯವರು ಅನುವಾದಿಸಿರುವ ಪರಿಸರವೆಂಬ ವಿಶ್ವರೂಪದೊಳಗಿನ ಅಚ್ಚರಿಗಳ ಹೊತ್ತಿಗೆಯಿದು. ಪುಟ ತೆರೆದಂತೆಲ್ಲಾ ಅಚ್ಚರಿಯ ಒಂದೊಂದೇ ಎಳೆ ಬಿಡಿಸಿಕೊಂಡು ಹೋಗುತ್ತವೆ. ಒಂದೆಡೆ ಜೀವವೈವಿಧ್ಯತೆಗಳ ಸೃಷ್ಠಿ, ಜೈವಿಕ ಬದುಕಿನ ಪರಿ ಗಮನಸೆಳೆದರೆ, ಮತ್ತೊಂದೊಡೆ ನವೀನ ಆವಿಷ್ಕಾರಗಳು ಪರಿಸರಕ್ಕೆ ಎರವಾದ ಸಂಗತಿಗಳು ದಿಗಿಲು ಹುಟ್ಟಿಸುತ್ತವೆ. ಒಟ್ಟಿನಲ್ಲಿ ನಾಳಿನ ನಮ್ಮ ಆಧುನಿಕ ಬದುಕು ಮಾಲೀನ್ಯತೆಯ ಹೊಡೆತಕ್ಕೆ ಸಿಕ್ಕು ಹೇಗಾಗಬಹುದು ಅನ್ನುವ ಕಲ್ಪನೆ ಸಿಗಬೇಕಾದರೆ, ಮಾನವನ ಉಗಮಕ್ಕೂ ಮುಂಚಿನ ಜೀವ ಸಂಕುಲ, ಪರಿಸರದ ಬೆರಗುಗಳು ನಮ್ಮರಿವಿಗೆ ಸಿಕ್ಕಬೇಕಾದರೆ ವಿಸ್ಮಯ2ರಂಥ ಕೃತಿಗಳು ಸತ್ಯವನ್ನು ತೆರೆದಿಡುತ್ತವೆ.

ಡೈನೋಸರ್ ಯುಗದ ಚಿತ್ರಣದಿಂದ ಅಧ್ಯಾಯ ಆರಂಭವಾಗುವ ವಿಸ್ಮಯ2 ಕೃತಿಯಲ್ಲಿ ಸಹಸ್ರಾರು ವರ್ಷಗಳ ಹಿಂದಿನ ಜೀವವೈವಿಧ್ಯಗಳು, ಪಾರಿಸಾರಿಕ ಕೌತುಕಗಳು ಮುಂದಿಡಿಯಿಡುತ್ತಾ ಹೋಗುತ್ತವೆ. ಪುಟ ಮುಗಿಯುತ್ತಾ ಬಂದಂತೆ ವಿಕಿರಣ, ವಿಷಾನಿಲಗಳು ಜೀವ ಸಂಕುಲಕ್ಕೆ, ಮಾನವನ ಬದುಕಿಗೆ ಯಮಪಾಶವಾದ ಬಗ್ಗೆ ವಿವರಗಳು ಸಿಕ್ಕುತ್ತವೆ. ಅಧ್ಯಾಯಗಳಿಗೆ ತಕ್ಕಂತ ಸಚಿತ್ರ ವಿವರಗಳೂ ಕೃತಿಯಲ್ಲಿ ಅಲ್ಲಲ್ಲಿ ಇಣುಕುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಳೆದೋದು ಕೃತಿಯ ಅನುವಾದ. ವೈಜ್ಞಾನಿಕ ಸಂಗತಿಗಳನ್ನು ಕನ್ನಡಕ್ಕೆ ಅನುವಾದಿಸಿ ಓದುಗರಿಗೆ ರುಚಿಸುವಂತೆ ಕೃತಿ ರಚಿಸೋದು ಸುಲಭವಲ್ಲ. ಆದರೆ ವಿಸ್ಮಯ2ರಂಥ ಕೃತಿಗಳು ಗೊಂದಲಕ್ಕೆ ಎಡೆಗೊಡದಂತ ನಾಜೂಕು ಅನುವಾದದಿಂದ ಓದುಗರಿಗೆ ಇಷ್ಟವಾಗುತ್ತದೆ. ತೇಜಸ್ವಿಯವರೋ ಇಲ್ಲವೆ ಪ್ರದೀಪ ಕೆಂಜಿಗೆಯವರೋ ಸಹಸ್ರಾರು ವರ್ಷಗಳ ಹಿಂದಕ್ಕೆ ಹೋಗಿ ಪಾರಿಸಾರಿಕ ಅಚ್ಚರಿಗಳ ನಡುವೆ ಓಡಾಡಿ ಬರೆದಂತಿರುವುದಕ್ಕೇ ವಿಸ್ಮಯ2 ಹೊತ್ತಿಗೆ ಹೆಚ್ಚು ಮೌಲ್ಯಯುತವಾಗಿದೆ.

ಪುಸ್ತಕ ಪ್ರಕಾಶನ ಹೊರತಂದಿರುವ ಇಕಾಲಜಿಯನ್ನು ಸರಳವಾಗಿ ವಿವರಿಸುವ ವಿಸ್ಮಯ1, ವಿಸ್ಮಯ2, ವಿಸ್ಮಯ3 ಕೃತಿಗಳು ವೈಜ್ಞಾನಿಕ ಸಂಗತಿಗಳ ಅರಿವನ್ನು ಹಂಬಲಿಸುವವರಿಗೆ ಉತ್ತಮ ಹೊತ್ತಿಗೆ. ಸಿಕ್ಕರೆ ಒಮ್ಮೆ ಓದಿನೋಡಿ; ಇಲ್ಲಿ ಬರೆದಿರುವುದಕ್ಕಿಂತ ಹೆಚ್ಚು ಓದಿಸಿಕೊಂಡು ಹೋಗುವ ಸಂಗತಿಗಳು 'ವಿಸ್ಮಯ2'ರಲ್ಲಿದೆ!

-ಸದಾ ಸಕಲೇಶಪುರ. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು