ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಕನಸು ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲ (ಪ್ಲಸ್ ಪಾಯಿಂಟ್)

ಖ್ಯಾತ ಬರಹಗಾರ, ಬೆಳಗೆರೆಯವರು ಕನಸಿನ ಬಗೆಗೊಂದು ಚಂದದ ಸಾಲು ಬರೀತಾರೆ. 'ವಯಸ್ಸಿಗೆ ತಕ್ಕಂತೆ ಬದಲಾಗುವ, ವ್ಯಕ್ತಿತ್ವಕ್ಕೆ ತಕ್ಕಂತೆ ರೂಪುಗೊಳ್ಳುವ, ಅಭಿರುಚಿಗೆ ತಕ್ಕಂತೆ ಆಕಾರ ಪಡೆದುಕೊಳ್ಳುವ, ಕೇವಲ ನಮ್ಮ ಪ್ರಯತ್ನ ಮತ್ತು ಪರಿಶ್ರಮ, ಶ್ರದ್ಧೆಗಳಿಂದ ಮಾತ್ರ ಸಾಕಾರಗೊಳ್ಳುವ ಅತಿದೊಡ್ಡ ಸುಖದ ಹೆಸರೇ ಕನಸು' ಅಂತ. ಕನಸೆಂದರೆ ಹೀಗೆಯೆ. ಅದು ಸಾಧನೆಗೆ ಬೇರು. ಛಲಕ್ಕೆ ನೆಪ. ಪರಿಶ್ರಮಕ್ಕೆ ಪ್ರೇರಣೆ. ಗೆಲುವಿಗೆ, ಸ್ಫೂರ್ತಿಗೆ ಇರುವ ಅದ್ಭುತ ಟಾನಿಕ್ಕು!

ಅಪ್ಪಟ ಕನಸುಗಾರ ಇರುವ ರೀತಿಯೇ ಹಾಗೆ. ಅವನಿಗೆ ಹೊಟ್ಟೆಯ ಬಗ್ಗೆ ಕಾಳಜಿ ಇರಲಾರದು. ನಿದ್ದೆಯ ಬಗ್ಗೆ ಚಿಂತೆಯೇ ಬಾರದು. ಅಷ್ಟೇ ಯಾಕೆ ಮೈಕೈ ಮೆತ್ತಗಾಗುವಷ್ಟು ದುಡಿದು ಬಂದ ಕನಸುಗಾರ ಇನ್ನೊಂದಿಷ್ಟು ಕೆಲಸಗಳನ್ನು ಮೇಲೆಳೆದು ಅದರಲ್ಲಿ ತಲ್ಲೀನನಾಗಿ ಹೋಗುತ್ತಾನೆಯೇ ವಿನಹ, ಅವನ ಬಳಿ ಶ್ರಮದ ನೆರಳೂ ಕೂಡ ಸುಳಿಯಲಾರದು!

ಮೈ ಸೋತು, ಕಾಲು ಕುಸಿದು ಬಿದ್ದಾಗಲೂ ಕನಸಿನ ಬೆನ್ನು ಬೀಳೋಕೆ, ಹೊನ್ನಿನ ಕನಸನ್ನು ನನಸು ಮಾಡೋಕೆ ತಾನೇ ಚೈತನ್ಯದ ಹೆಗಲು ಹಿಡಿದು ಮತ್ತೆ ಎದ್ದು ನಿಲ್ಲುತ್ತಾನೆ ನೋಡಿ, ಆತ ನಿಜವಾದ ಕನಸುಗಾರ! ನಾವೂ ಅಂತ ಕನಸುಗಾರನಾಗಬೇಕು, ಕನಸಿನ ಬೆನ್ನು ಬೀಳಬೇಕು. ಹಾಗೆ ಕನಸಿನ ಬೆನ್ನು ಬಿದ್ದು ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ತುಳಿದು ಸಂಭ್ರಮಿಸಬೇಕು. ಸಾಧಿಸಿ ತೋರಿಸಬೇಕು.

-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು