ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಆ ಕಂಗಳು.. ಆ ನೋಟ.. (ಕವನ ಕಾಲಂ)

ನಾನು ದಿಟ್ಟಿಸಿದೆ
ಆ ಪುಟ್ಟ ಮುಗ್ಧ ಕಂಗಳೂ ಕೂಡ
ಬರೀ ನೋಟವಲ್ಲವದು;
ಕನಸುಗಳ ಎಳೆಗಳಿದ್ದ ನೋಟ!
ಹರುಷ ತುಂಬಿರಬೆಕಿದ್ದ ಆ ಕಂಗಳಲ್ಲಿ
ಹಸಿವಿನ ಆಕ್ರಂದನವಿತ್ತು
ಬಿಸಿಲ ಉರಿ ಇತ್ತು
ಬಳಲಿಕೆಯ ಗುರುತಿತ್ತು

ನೋಟ ಬದಲಿಸದೆ ದಿಟ್ಟಿಸುತ್ತಿದ್ದೆ;
ಆ ಕಂಗಳು ಆ ನೋಟ ನೊಂದು ನುಡಿಯಿತು
'ನಮ್ಮದು ಬೀದಿ ಬದುಕು
ಬೆಳಕೇ ಇಲ್ಲದ ಕತ್ತಲ ಬಾಳು'

'ಇಲ್ಲಿ ತುತ್ತಿಗೂ ಪರದಾಟ
ಕ್ಷಣ ಕ್ಷಣಕ್ಕೂ ನೋವು, ಸಂಕಟ
ಈ ಗೋಳಿನ ಬಾಳಿನಲಿ ಏನಿದೆ?
ಬರೀ ಶೂನ್ಯ.. ಹೀನ..!'

ನಾನು ದಿಟ್ಟಿಸುತ್ತಲೇ ಇದ್ದೆ
ಬೀದಿ ಬದಿಯಲ್ಲಿ ಬೆಳೆದ, ಕಳೆಗುಂದಿದ
ಆ ಕಂಗಳನು ಎವೆಯಿಕ್ಕದೆ
ನೋಡುತ್ತಲೇ ಇದ್ದೆ

ನೋಡು ನೋಡುತ್ತಿದ್ದಂತೆಯೇ
ಆ ಕಂಗಳಲಿ ಹನಿತುಂಬಿಕೊಳ್ಳುತ್ತಿತ್ತು
ಮತ್ತೆ ಕಾಣಿಸಲಿಲ್ಲ ಆ ಕಂಗಳು
ಕಣ್ಣು ತುಂಬಿಬಂದು ಮಬ್ಬಾಗಿತ್ತು..

-ಸದಾ ಸಕಲೇಶಪುರ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು