ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಗೊತ್ತಾ ವಿಷ್ಯಾ?!: ಅಥೆನ್ಸ್‌ನಲ್ಲಿದೆ ಕಲ್ಲುಬಂಡೆಗಳ ಬೆಟ್ಟ ಅಕ್ರೋಪೊಲಿಸ್

ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ಪಟ್ಟಣದ ನಡುವೆ ಅಕ್ರೋಪೊಲಿಸ್ ಎಂಬ ಕಲ್ಲು ಬಂಡೆಗಳ ಬೆಟ್ಟ ಇದೆ. ಪ್ರಾಚೀನ ಗ್ರೀಕರು ಇದನ್ನು ಪವಿತ್ರ ಬಂಡೆ ಎಂದು ಕರೆಯುತ್ತಿದ್ದರು. ಪುರಾತನ ಕಾಲದಲ್ಲಿ ಇಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಅಥೆನಾ ದೇವತೆಯ ಗೌರವಾರ್ಥವಾಗಿ 'ಪ್ಯಾನಾಥೇನಿಯಾ' ಎಂಬ ಭರ್ಜರಿ ಉತ್ಸವ ನಡೆಯುತ್ತಿತ್ತು (ಚಿತ್ರ ಕೃಪೆ: ಗ್ರೀಕಾ ಡಾಟ್ ಕಾಮ್).

ಅಕ್ರೋಪೊಲೀಸ್ ಎಂದರೆ ಬೆಟ್ಟದ ಮೇಲಿನ ಪಟ್ಟಣ ಎಂದು ಅರ್ಥ. ಕ್ರಿಸ್ತಪೂರ್ವ 5ನೆಯ ಶತಮಾನದಲ್ಲಿ ಪೆರಿಕ್ಲಿಸ್ ಎಂಬಾತ ಇಲ್ಲಿ ಮೊದಲ ಬಾರಿಗೆ ಪಾರ್ತೆನಾನ್, ಪ್ರೋಪಿಲಾಯಾ ಮತ್ತು ಅಥೆನಾ ದೇವತೆಯ ದೇವಾಲಯಗಳನ್ನು ಕಟ್ಟಿಸಿದ್ದ. ಈ ಕಟ್ಟಡಗಳು ಪ್ರಾಚೀನ ಗ್ರೀಕ್ ನಾಗರೀಕತೆಯ ವಾಸ್ತುಶಿಲ್ಪ ಕೌಶಲ್ಯದ ಅದ್ಭುತ ಮಾದರಿಯಾಗಿವೆ.

ಹಾಳುಬಿದ್ದಿದ್ದ ಈ ಕಟ್ಟಡಗಳನ್ನು ಇಂದು ನವೀಕರಿಸಲಾಗಿದೆ. ಇದನ್ನು ಯುರೋಪಿನ ಮುಖ್ಯ ಚಾರಿತ್ರಿಕ ಮತ್ತು ಪಾರಂಪರಿಕ ಬಳುವಳಿಯಾಗಿ ಪರಿಗಣಿಸಲಾಗುತ್ತಿದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು