ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಗ್ಯಾಸ್ ಸ್ಟವ್‌ ಜ್ವಾಲೆ ಬೆಳಕನ್ನೇಕೆ ಬೀರುವುದಿಲ್ಲ ಗೊತ್ತೇ?

ನೀವೀಗ ಕಿಚನ್‌ಲ್ಲಿ ಸ್ಟವ್ ಹಚ್ಚಿಟ್ಟುಕೊಂಡು ನಿಂತಿದ್ದೀರಿ ಅಂತಿಟ್ಟುಕೊಳ್ಳಿ. ಕೆಇಬಿಯವರ ಕೃಪೆಯಿಂದ ಸಡನ್ನಾಗಿ ಕೆರೆಂಟ್ ಹೋಗ್ಬಿಟ್ತು ಅನ್ನಿ. ಸ್ಟವ್ ಉರಿಯುತ್ತಿದ್ದರೂ ಕಿಚನ್ ತುಂಬಾ ಕತ್ತಲು ಆವರಿಸಿಬಿಡುತ್ತದೆ. ಮತ್ತೆ ಕಿಚನ್‌ಗೆ ಬೆಳಕು ಹಬ್ಬಲು ನೀವೊಂದು ಮೋಂಬತ್ತಿ ಹಚ್ಚಿಡಬೇಕಷ್ಟೆ. ಯಾಕೆ ಹೀಗೆ?!

ಹೀಗಾಗುವುದರ ಹಿಂದೊಂದು ವೈಜ್ಞಾನಿಕ ಕಾರಣವಿದೆ. ಅದೇನೆಂದರೆ, ಅನಿಲ ರೂಪದಲ್ಲಿರುವ ಯಾವುದೇ ಇಂಧನ ಉರಿಯುವಾಗ ಜ್ವಾಲೆ ಉಂಟಾಗುತ್ತದೆ. ಹಾಗೆಯೇ ಗ್ಯಾಸ್ ಸ್ಟವ್ವಿನಲ್ಲಿ ಇಂಧನವಾಗಿರುವ ಪ್ರೋಪೇನ್ ಅನಿಲ ಉರಿಯುವಾಗ, ಇಂಗಾಲ ಮತ್ತು ಇಂಗಾಲಕ್ಕೆ ಸಂಬಂಧಪಟ್ಟ ಅನೇಕ ರಾಸಾಯನಿಕ ವಸ್ತುಗಳನ್ನು ಅದು ಬಿಡುಗಡೆ ಮಾಡುತ್ತದೆ. ಆ ವಸ್ತುಗಳು ಹೆಚ್ಚಿನ ಉಷ್ಣತೆಯ ಜ್ವಾಲೆಯಲ್ಲಿ ಸಂಪೂರ್ಣವಾಗಿ ದಹಿಸಿ ಹೋಗುವಾಗ ಅದರಿಂದ ಹೊರಸೂಸಿದ ವಿಕಿರಣಗಳು ನೀಲಿ ಬಣ್ಣದ ಬೆಳಕನ್ನು ಹರಡುತ್ತವೆ. ಆ ನೀಲಿ ಬಣ್ಣದ ಬೆಳಕನ್ನು ಅಡುಗೆ ಮನೆಯ ಗೋಡೆಗಳು ಅಷ್ಟಾಗಿ ಪ್ರತಿಫಲಿಸಲು ಸಾಧ್ಯವಿಲ್ಲ.


ಆದರೆ ಮೋಂಬತ್ತಿಗಳಲ್ಲಿ ಹಾಗಲ್ಲ. ಮೋಂಬತ್ತಿಗಳನ್ನು ಪ್ಯಾರಾಫಿನ್ ಮೇಣದಿಂದ ತಯಾರಿಸುತ್ತಾರೆ. ರಾಸಾಯನಿಕವಾಗಿ ಹೇಳುವುದಾದರೆ ಪ್ಯಾರಾಫಿನ್ ಒಂದು ಹೈಡ್ರೋಕಾರ್ಬನ್ ಸಂಯುಕ್ತ ವಸ್ತುವಾಗಿದೆ. ಮೋಂಬತ್ತಿ ಉರಿಯುವಾಗ ಜಲಜನಕ (ಹೈಡ್ರೋಜನ್) ಉರಿದು ಹೋಗುತ್ತದೆ. ಆದರೆ ಇಂಗಾಲದ ಸಾಕಷ್ಟು ಕಣಗಳು ಪೂರ್ತಿಯಾಗಿ ಉರಿಯದೆ ಕೆಂಡದಂತೆ ಹೊರಬರುತ್ತದೆ. ಕಡಿಮೆ ಶಾಖದಲ್ಲಿ ಈ ಕಣಗಳು ಹಳದಿ ಬೆಳಕಿನ ಪ್ರಕಾಶವನ್ನು ಪ್ರದರ್ಶಿಸುತ್ತವೆ. ಮೋಂಬತ್ತಿಯಿಂದ ಬೆಳಕು ಹಬ್ಬವುದರ ಮರ್ಮ ಇದೇ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು