ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಕನಸುಗಳನ್ನು ಹೆರುವಾಸೆಗೆ ಕಣ್ಣಾಗುತ್ತೀಯಾ ಪ್ಲೀಸ್? (ಒ'ಲವ್‌'ವಿನ ಓಲೆ)

ಯ್ ಕೋತಿ,
'ಕ್ಯಾ...ಮಿಸ್ಟ್ರಿ...ಹುಡ್ಗೀ..' ಅಂತ ನೀನು ರೇಗಿಸುವಾಗೆಲ್ಲಾ ರೇಗುವ ನಾಟಕವಾಡುತ್ತೇನಾದರೂ ಒಳಗೊಳಗೆ ಅದೆಷ್ಟು ಹಿಗ್ಗುತ್ತೇನೆ ಗೊತ್ತಾ? ನಂಗೆ ನೀ ಕರೆವ 'ಕ್ಯಾಮಿಸ್ಟ್ರಿ' ಪದ ಇಷ್ಟ. ನನ್ನೀ ಎಂಎಸ್ಸಿ ಕೆಮಿಸ್ಟ್ರಿ ಸಬ್ಜೆಕ್ಟಿನಲ್ಲಿ ಆಗಾಗ ಬಂದುಹೋಗೋ ಈ ಕೆಮಿಸ್ಟ್ರಿಗೆ ಬದಲಾಗಿ 'ಕ್ಯಾಮಿಸ್ಟ್ರಿ' ಪದವೇ ಇರಬಾರದಿತ್ತೇ ಅಂತ ಎಷ್ಟೋಸಾರಿ ಅನ್ನಿಸಿದ್ದೂ ಇದೆ. ಮೊನ್ನೆ ಲ್ಯಾಬಿನಲ್ಲಿ ರಾಸಾಯನಿಕ ದ್ರವವನ್ನು ಒಂದಕ್ಕೊಂದು ಸೇರಿಸಿ ರಿಯಾಕ್ಷನ್ ನೋಡುವಾಗ್ಲೂ ನೀನವತ್ತು 'ನಮ್ಮಿಬ್ಬರ ಕೆಮಿಸ್ಟ್ರಿ ಹ್ಯಾಗಿದೆ?' ಅಂತ ಕೇಳಿದ್ದನ್ನು ನೆನಪು ಮಾಡಿಕೊಂಡು ಮೈ ಮರೆತು ನಕ್ಕು ಮ್ಯಾಮ್ ಕೈಲಿ ಬೈಸಿಕೊಂಡೆ ಗೊತ್ತಾ? 


ಮಾತೆತ್ತಿದಾಗೆಲ್ಲಾ ನಂಗೆ ಡಝನ್ ಮಕ್ಳನ್ನು ಹೆತ್ಕೊಟ್ಬಿಡು ಸಾಕು ಅಂತ ಪೋಲಿ ರಿಕ್ವೆಸ್ಟ್ ಮಾಡ್ಕೋತೀಯಲ್ಲ ಪಾಪಿ!. ಮಕ್ಕಳಿರಬೇಕು ಮನೆತುಂಬ ಅಂತ ನಂಗೂ ಆಸೇನೆ, ಆದ್ರೆ ಹಾಗೆ ವರುಷಕ್ಕೊಂದರಂತೆ ಡಝನ್ ಮಕ್ಳನ್ನು ಹೆತ್ತು ಕೈಗಿಡೋದು ನನ್ನೀ ಸಣಕಲು ದೇಹಕ್ಕೆ ಸಾಧ್ಯಾನ ಹುಚ್ಚಪ್ಪಾ!?

ಅದ್ಯಾಕೋ ಗೊತ್ತಿಲ್ಲ, ನಂಗೂ ಇತ್ತೀಚೆಗೆ ಡಝನ್‌ಗಟ್ಟಲೆ ಹೆರುವ ಆ(ಕಾ)ತುರ ಹೆಚ್ಚಾಗ್ತಿದೆ. ಅದ್ಕೆ ಇವತ್ ಒಂದ್ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಮೆಡಿಕಲ್ ಕಾಲೇಜಿಗೆ ಸೇರಿ ಚೆನ್ನಾಗಿ ಓದಬೇಕು. ನಾಳೆ ಡಾಕ್ಟರ್ ಅಂತ ಕರೆಸಿಕೊಳ್ಳಬೇಕು. ಬಡ ಅವ್ವಂದಿರು ಅತ್ತುಕೊಂಡು ಎತ್ತಿಕೊಂಡು ಬರುವ ಕಂದಂಮ್ಮಗಳಿಗೆಲ್ಲ ಅಕ್ಕರೆಯ ಟ್ರೀಟ್ಮೆಂಟ್ ನೀಡಬೇಕು, ಬಡವರಿಗೆಲ್ಲಾ ನೆರವಾಗಬೇಕು. ಕಣ್ಣಿಲ್ಲದವರಲ್ಲೂ ಕನಸುಗಳನ್ನು ಬಿತ್ತಬೇಕು. ಬಡವರೆಲ್ಲರಲ್ಲಿ ಹಾರೈಸಿಕೊಂಡು ಲೆಕ್ಕವಿಲ್ಲದಷ್ಟುಸಾರಿ ಖುಷಿಯಲ್ಲಿ ಕಣ್ಣು ತೋಯಿಸಿಕೊಳ್ಳಬೇಕು. ಟ್ರೀಟ್ಮೆಂಟ್ ನೆಪದಲ್ಲಿ ಬಡವರನ್ನು ದೋಚಿ ವಂಚಿಸುವ ಅರ್ಥಪಿಶಾಚಿ ಡಾಕ್ಟರ್‌ಗಳ ಸಾಲಿಗೆ ಸೇರದೆ, ವೈದ್ಯಕೀಯ ಸೇವೆಯನ್ನು ದೇವರು ತಲೆದೂಗುವ ಕೆಲಸಗಳ ಸಾಲಿಗೆ ತಂದು ನಿಲ್ಲಿಸಬೇಕು ಎಂದೆಲ್ಲಾ ನನ್ನೊಳಗೆ ಸಾಲು ಸಾಲು ಕನಸುಗಳಿವೆ. ಆ ಮನದ ಬಸಿರಿನ ಒಳಗಿರುವ ಕನಸುಗಳನ್ನೆಲ್ಲಾ ಒಂದೊಂದಾಗಿ ಹೆರಬೇಕು. ಹೆತ್ತ ಆ ಕನಸಿನ ಕೂಸುಗಳಿಗೆಲ್ಲಾ ನನಸು-1, ನನಸು-2, ನನಸು-3.... ಹೀಗೆ ಸಾಲಾಗಿ ಹೆಸರಿಡಬೇಕೆಂದುಕೊಂಡಿದ್ದೇನೆ, ಪ್ರೋತ್ಸಾಹಿಸುತ್ತೀಯಾ? ಡಾಕ್ಟರ್ ಆಗಬೇಕನ್ನೋ ನನ್ ಹಂಬಲವನ್ನು ಕೈ ಹಿಡಿದು ಮುನ್ನಡೆಸುತ್ತೀಯಾ? ಸಾಧನೆಯ ಕನಸುಗಳನ್ನು ಹೆರುವ ನನ್ನಾಸೆಗೆ ಕಣ್ಣಾಗುತ್ತೀಯಾ ಗೆಳೆಯಾ ಪ್ಲೀಸ್...


-ಪ್ರವುಶಿ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು