ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

(ಗೊತ್ತಾ ವಿಷ್ಯಾ?!) ವರ್ಷವಿಡೀ ನಿಂತುಕೊಂಡೇ ತಪಸ್ಸಾಚರಿಸುವ ವಿಚಿತ್ರ ಸಾಧುಗಳಿವರು!

ಹೆಚ್ಚೂಂದ್ರೆ ನಾವೆಷ್ಟು ಹೊತ್ತು ನಿಂತುಕೊಂಡಿರಬಹುದು ಹೇಳಿ? 1ಗಂಟೆ? 4 ಗಂಟೆ? 10 ಗಂಟೆ? 12ಗಂಟೆಗಳ ಕಾಲ ಹೆಂಗೋ ಹಟಕ್ಕೆ ಬಿದ್ದವರ ಹಾಗೆ ನಿಂತುಕೊಂಡೇ ಬಕ ಪಕ್ಷಿಯ ಹಾಗೆ ಅವುಡುಗಚ್ಚಿ ಒಂದು ತಪಸ್ಸು ಮಾಡಿಬಿಡಬಹುದು. 

ಆದರೆ ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಅಷ್ಟೇಯಾಕೆ ವರ್ಷಗಟ್ಟಲೆ ನಿಂತೇ ಕಾಲ ಕಳೆಯುವ, ತಪಸ್ಸು ಮಾಡುವವರ ಬಗ್ಗೆ ಕೇಳಿದ್ರೆ ನೀವೇನು ಅಂದುಕೊಳ್ತೀರೋ ಏನೋ!

ಹಗಲು-ರಾತ್ರಿ ಎನ್ನದೆ ಯಾವಾಗಲೂ ನಿಂತುಕೊಂಡೇ ಇರುವ ಬಾಬಾಗಳು ಇದ್ದಾರೆ. ಇವರು ಹಿಂದೂ ಸಾಧುಗಳ ಒಂದು ಪಂಥಕ್ಕೆ ಸೇರಿದ್ದು, ಇವರನ್ನು ಖರೇಶ್ವರಿಗಳು ಅನ್ನುತ್ತಾರೆ. ಆಧ್ಯಾತ್ಮಿಕ ಜ್ಞಾನವನ್ನು ಪಡೆಯುವುದಕ್ಕೋಸ್ಕರ ತಮಗೆ ತಾವೇ ವಿಧಿಸಿಕೊಳ್ಳುವ ಈ ದೈಹಿಕ ಶಿಕ್ಷೆಯನ್ನು ಅವರು ತಪಸ್ಸೆಂದು ಪಾಲಿಸುತ್ತಾರೆ.


ಈ ಪ್ರತಿಜ್ಞೆಯ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಕೆಲವು ಖರೇಶ್ವರರು ತಪಸ್ಸನ್ನು 12 ವರ್ಷಗಳ ಕಾಲ ಪಾಲಿಸಿದರೆ ಇನ್ನು ಕೆಲವರ ಪ್ರತಿಜ್ಞೆಗೆ ನಿರ್ದಿಷ್ಟ ಅವಧಿಯಿಲ್ಲ. ಹಿಂದೆಲ್ಲಾ ಖರೇಶ್ವರರು ಬಯಲಿನಲ್ಲಿ ವೃಕ್ಷದ ಕೆಳಗೆ ನಿಂತುಕೊಂಡು ಈ ತಪಶ್ಚರ್ಯನ್ನು ಕೈಗೊಳ್ಳುತ್ತಿದ್ದರು. ಯೋಗದ ವೃಕ್ಷಾಸನದಲ್ಲಿ ಇದರ ಸಂಬಂಧ ಇರಬಹುದು ಎನ್ನಲಾಗುತ್ತದೆ. 
-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು