ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಉಗಿ ಇಂಜಿನ್ ಉರುಳೋಕೆ ಶುರುವಿಟ್ಟ ಕುತೂಹಲಕಾರಿ ಕತೆ!


ರೈಲಿಗೆ ಉಗಿಯಂತ್ರ ಅಂತ ಕರೀತಾರೆ ಅನ್ನೋ ಸಂಗತಿ ನಿಮಗೆ ಗೊತ್ತೇಯಿದೆ. ರೈಲು ಚಲಿಸೋದೇ ಹಬೆ ಶಕ್ತಿಯಿಂದ. ಈಗ ಕೆಲವೆಡೆ ಎಲೆಕ್ಟ್ರಿಕ್ ಸಹಾಯದಿಂದಲೂ ರೈಲುಗಳು ಸಾಗೋದಿದೆ. ಆದರೆ ಆರಂಭದ ದಿನಗಳಲ್ಲಿ ರೈಲು ಚಲಿಸುತ್ತಿದ್ದು ಹಬೆಯ ಸಹಾಯದಿಂದಲೇ. 

ಈಗ ಸುಮ್ಮನಾದರೂ ಊಹಿಸಿಕೊಳ್ಳಿ; ಅಷ್ಟಗಲದ, ಮಾರುದ್ದದ ರೈಲು ಗಾಡಿಯನ್ನು ಬರೀ ಉಗಿಶಕ್ತಿ ಮುನ್ನಡೆಸುತ್ತದೆ ಅಂದರೆ ಅಚ್ಚರಿ ಅನ್ನಿಸೋದಿಲ್ವೆ? ವೈಜ್ಞಾನಿಕ ಜಗತ್ತೇ ಹಾಗೆ. ಕುತೂಹಲದ ಬೆನ್ನು ಬಿದ್ದರೆ ವೈಜ್ಞಾನಿಕ ಜಗತ್ತಿನ ಅಚ್ಚರಿಯ ಅನೇಕ ಸಂಗತಿಗಳು ಅನಾವರಣಗೊಳ್ಳುತ್ತವೆ.

ಅಂದಹಾಗೆ ನೀರಿನಲ್ಲೂ ಶಕ್ತಿಯಿದೆ. ನೀರನ್ನು ಬಿಸಿ ಮಾಡಿದಾಗ, ನೀರು ಕುದಿಬಿಂದು ತಲುಪಿದಾಗ ಅದರಲ್ಲಿರುವ ಶಕ್ತಿ ಜಾಗೃತಗೊಂಡು ಹೊರಹೊಮ್ಮುತ್ತದೆ. ರೈಲು ಗಾಡಿಯನ್ನು ಮುನ್ನಡೆಸೋದು ಈ ಶಕ್ತಿಯೇ. ಹಾಗಾದರೆ ಚುಕುಬುಕು ರೈಲು ಉರುಳೋಕೆ ಶುರುವಿಟ್ಟ ಕಾಲದೆಡೆಗೊಂದು ಸಣ್ಣ ಪಯಣ ಹೋಗಿ ಬರೋಣವೇ?

ಕ್ರಿ.ಶ. 1ನೇ ಶತಮಾನದಲ್ಲಿ ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾ ನಗರದಲ್ಲಿದ್ದ ಹೀರೋ ಎಂಬಾತ ಉಗಿ ಇಂಜಿನ್ ನ ಪ್ರಥಮ ನಿರ್ಮಾಪಕ ಎಂದು ಇತಿಹಾಸ ಹೇಳುತ್ತದೆ. ಉಗಿ ಇಂಜಿನ್ ತಂತ್ರಜ್ಞಾನ ಹೊಳೆದದ್ದು ಒಂದು ಕೌತುಕವೇ ಸರಿ. ನೀರು ಕುದಿಯುತ್ತಿದ್ದ ಪಾತ್ರೆಯೊಂದರ ಮುಚ್ಚಳ ಹಾರಿ ಹೋಗುವ ಹಾಗೆ ಅಲುಗಾಡುತ್ತಿದ್ದುದನ್ನು ನೋಡುತ್ತಿದ್ದಂತೆ ಬಿಸಿ ಆವಿಗೂ ಶಕ್ತಿಯಿದೆ ಅನ್ನೋ ಸಂಗತಿ ಹೀರೋಗೆ ಹೊಳೆಯಿತು. ಮುಂದೆ ಉಗಿ ಶಕ್ತಿಯನ್ನು ಉಪಯೋಗಿಸುವ ಬಗ್ಗೆ ಪ್ರಯತ್ನಗಳು ನಡೆದವು.


ನಮ್ಮ ಹೀರೋ ನಿರ್ಮಿಸಿದ ಸಾಧನ ಉಗಿ ಟರ್ಬೈನ್ ಮಾದರಿಯಲ್ಲಿತ್ತು. ವೃತ್ತಾಕಾರದ ಒಂದು ನೀರಿನ ಪಾತ್ರೆಯ ಎರಡೂ ಪಕ್ಕಗಳಲ್ಲಿ ಎರಡು ಕೊಳವೆಗಳನ್ನು ಎಲ್ ಆಕಾರದಲ್ಲಿ ಜೋಡಿಸಲಾಗಿತ್ತು. ಆ ಪಾತ್ರೆಯ ನೀರನ್ನು ಕಾಯಿಸಿದಾಗ ಅದರಿಂದ ಹೊರಹೊಮ್ಮುವ ಉಗಿ ಎರಡೂ ಕೊಳವೆಗಳ ಮೂಲಕ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೊರ ಹೋಗುತ್ತಿತ್ತು. ಉಗಿ ಹೊರಹೊಮ್ಮುವ ಕ್ರಿಯೆಯಿಂದಾಗಿ ಉಂಟಾದ ಪ್ರತಿಶಕ್ತಿಯು ಆ ಪಾತ್ರೆಯು ತನ್ನ ಅಕ್ಷದಲ್ಲಿ ಸುತ್ತುವಂತೆ ಮಾಡುತ್ತಿತ್ತು.  
ಅನಂತರ ಉಗಿ ಶಕ್ತಿಯ ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಯ್ತು. ಕಾಲ ಕಳೆದ ಹಾಗೆ ಮೆಲ್ಲಗೆ ಉಗಿ ಇಂಜಿನ್ ರೂಪು ತಳೆದೇಬಿಟ್ಟಿತು. ಅಂದ್ಹಾಗೆ, ಉಗಿ ಇಂಜಿನ್ ಅನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಸ್ಕಾಟಿಶ್ ಮೆಕಾನಿಕಲ್ ಇಂಜಿನಿಯರ್ ಜೇಮ್ಸ್ ವ್ಯಾಟ್ ಮತ್ತು ಇಂಗ್ಲಿಷ್ ಇನ್ವೆಂಟರ್ ಥಾಮಸ್ ನ್ಯೂಕಾಮನ್ ಅವರಿಗೆ ಸಲ್ಲುತ್ತದೆ.
 

ಕಾಮೆಂಟ್‌ಗಳು

  1. Of course, there is be} the fun that comes from taking part in} with massive cash. In just one spin, have the ability to|you possibly can} win (or lose!) greater than most people need to work a whole month to earn. However, before you 바카라사이트 place any actual bets, you must to} familiarise your self with online roulette, without taking any threat. To this end, you can to|you possibly can} play the totally different digital roulette variants for free right here on our website.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು