ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಐಪಿಎಲ್ ಹರಾಜು 2022: ಆರ್.ಸಿ.ಬಿ. ತಂಡದ ಆಟಗಾರರ ಸಂಪೂರ್ಣ ಪಟ್ಟಿ!
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಬೆಂಗಳೂರಿನಲ್ಲಿ ಭಾನುವಾರ (ಫೆಬ್ರವರಿ 13) ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಪ್ರತಿಭಾನ್ವಿತ ಆಟಗಾರರನ್ನು ಹೆಕ್ಕಿ ತಮ್ಮ ತಮ್ಮ ತಂಡ ಬಲಿಷ್ಠಗೊಳಿಸಿಕೊಂಡಿವೆ. ಆಕರ್ಷಣೀಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೂಡ ಗಮನಾರ್ಹ ಆಟಗಾರರನ್ನು ತನ್ನ ತಂಡಕ್ಕೆ ತಂದುಕೊಂಡಿದೆ.
ಹರಾಜು ಆರಂಭ ದಿನವಾದ ಫೆಬ್ರವರಿ 12ರಂದು ಆರ್ಸಿಬಿ ತಂಡ ಆಲ್ ರೌಂಡರ್ ಮತ್ತು ಬೌಲರ್ ಗಳತ್ತ ಹೆಚ್ಚು ಗಮನ ಹರಿಸಿ ಪ್ರಮುಖ ಆಟಗಾರರನ್ನು ಖರೀದಿಸಿತ್ತು. 10.75 ಕೋಟಿ ರೂ. ವೆಚ್ಚಕ್ಕೆ ಆರ್ಸಿಬಿ ತಂಡ ಆಲ್ ರೌಂಡರ್ ಹರ್ಷಲ್ ಪಟೇಲ್ ಅವರನ್ನು ಮತ್ತೆ ತನ್ನ ತೆಕ್ಕೆಗೆ ತಂದುಕೊಂಡಿದೆ. ಜೊತೆಗೆ ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ಅವರನ್ನು ಆರ್ಸಿಬಿ 10 ಕೋಟಿ ರೂ.ಗೆ ಖರೀದಿಸಿದೆ.
ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಝಲ್ವುಡ್ ಅವರು 7.75 ಕೋ.ರೂ.ಗೆ ಆರ್ಸಿಬಿ ಪಾಲಾಗಿದ್ದಾರೆ. ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್ ಅವರನ್ನು ಆರ್ಸಿಬಿ 2.40 ಕೋ.ರೂ.ಗೆ ಖರೀದಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಈ ಬಾರಿ 7 ಕೋ.ರೂ.ಗೆ ಆರ್ಸಿಬಿ ಪಾಲಾಗಿದ್ದಾರೆ. ಮತ್ತೊಬ್ಬ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ 5.50 ಕೋ.ರೂ.ಗೆ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.
ನ್ಯೂಜಿಲೆಂಡ್ ನ ಬಲಗೈ ಬ್ಯಾಟ್ಸ್ ಮನ್ ಫಿನ್ ಅಲೆನ್ ಅವರನ್ನು ಆರ್ಸಿಬಿ 80 ಲಕ್ಷ ರೂ.ಗೆ ಖರೀದಿಸಿದೆ. ಇನ್ನು ಆಸ್ಟ್ರೇಲಿಯಾದ ಆಟಗಾರ ಬೆಹ್ರೆಂಡಾರ್ಫ್ ಗೆ 75 ಲಕ್ಷ ರೂ., ಕರ್ಣ್ ಶರ್ಮಾಗೆ 50 ಲಕ್ಷ ರೂ., ಚಾಮ ಮಿಲಿಂದ್ ಗೆ 25 ಲಕ್ಷ ರೂ., ಅನುಜ್ ರಾವತ್ ಗೆ 3.4 ಕೋ.ರೂ., ಆಕಾಶ್ ದೀಪ್ ಗೆ 20 ಲಕ್ಷ ರೂ. ವ್ಯಯಿಸಿ ತಂಡಕ್ಕೆ ಸೇರಿಸಿಕೊಂಡಿದೆ. ಆರ್ಸಿಬಿ ತಂಡದಲ್ಲೀಗ 22 ಮಂದಿ ಆಟಗಾರರಿದ್ದು ಇದರಲ್ಲಿ 14 ಮಂದಿ ಭಾರತೀಯರು ಮತ್ತು 8 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಆರ್ಸಿಬಿ ಪರ್ಸ್ ನಲ್ಲೀಗ 1.55 ಕೋ.ರೂ. ಉಳಿದಿದೆ.
ಆರ್ಸಿಬಿ ತಂಡದ ಆಟಗಾರರ ಸಂಪೂರ್ಣ ಪಟ್ಟಿ
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಝಲ್ವುಡ್, ಜೇಸನ್ ಬೆಹ್ರೆನ್ಡಾರ್ಫ್, ಚಾಮ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಮಾಹಿ ಶೆಪಾಲ್ ಅಹ್ಮದ್ ರುದರ್ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ