ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ಮುಡಿಗೆ ಚೊಚ್ಚಲ ಚಾಂಪಿಯನ್ಸ್ ಕಿರೀಟ!
ದಬಾಂಗ್ ಡೆಲ್ಲಿ ಕೆಸಿ ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ನಲ್ಲಿ ಚಾಂಪಿಯನ್ಸ್ ಕಿರೀಟ ಮುಡಿಗೇರಿಸಿಕೊಂಡಿದೆ. ಶುಕ್ರವಾರ (ಫೆಬ್ರವರಿ 25) ಶೆರಾಟನ್ ಗ್ರ್ಯಾಂಡ್ ಬೆಂಗಳೂರು ವೈಟ್ ಫೀಲ್ಡ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಪಿಕೆಎಲ್ ಸೀಸನ್ 8ರ ಫೈನಲ್ ನಲ್ಲಿ ಮಾಜಿ ಚಾಂಪಿಯನ್ಸ್ ತಂಡ ಪಾಟ್ನಾ ಪೈರೇಟ್ಸ್ ಸೋಲಿಸಿರುವ ಡೆಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಜಯಿಸಿದೆ.
ದಬಾಂಗ್ ಡೆಲ್ಲಿ ತಂಡ ಸೀಸನ್ ನ ಅತೀ ಬಲಿಷ್ಠ ತಂಡವೆನಿಸಿದ್ದ ಪಾಟ್ನಾ ಪೈರೇಟ್ಸ್ ತಂಡವನ್ನು 37-36ರ ಅಂತರದಲ್ಲಿ ಪರಾಭವಗೊಳಿಸಿತು. ಡೆಲ್ಲಿ ಪರ 14 ರೇಡ್ ಪಾಯಿಂಟ್ಸ್ ಸೇರಿಸಿದ ವಿಜಯ್ ಮಲಿಕ್ ಮತ್ತು 13 ರೇಡ್ ಪಾಯಿಂಟ್ಸ್ ಸೇರಿಸಿದ ನವೀನ್ ಕುಮಾರ್ ಗೆಲುವಿನ ರುವಾರಿಗಳೆನಿಸಿದರು.
ಡೆಲ್ಲಿ ಪರ ಸಂದೀಪ್ ನರ್ವಾಲ್ 2, ಮನ್ಜೀತ್ ಛಿಲ್ಲರ್ 2 ಪಾಯಿಂಟ್ಸ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಪಾಟ್ನಾ ಕೂಡ ತಕ್ಕ ಪೈಪೋಟಿ ನೀಡಿದ್ದು ಕಂಡು ಬಂತು. ತಂಡದ ರೇಡರ್ ಸಚಿನ್ 10, ಗುಮಾನ್ ಸಿಂಗ್ 9, ಶಾದ್ಲುಯ್ ಚಿಯಾನೆ 5, ಮೋನು 5, ಪ್ರಶಾಂತ್ ಕುಮಾರ್ ರೈ 2, ನೀರಜ್ ಕುಮಾರ್ 1 ಮತ್ತು ಸಜಿನ್ ಚಂದ್ರಶೇಖರ್ 1 ಅಂಕ ಸೇರಿಸಿ ಪೈಪೋಟಿಗೆ ಕಾರಣರಾದರು.
ಪಂದ್ಯದ ಆರಂಭದಲ್ಲಿ ಪಾಟ್ನಾ ಮುನ್ನಡೆಯಲ್ಲಿತ್ತು. ಪ್ರಥಮಾರ್ಧ ಮುಕ್ತಾಯದ ಹೊತ್ತಿನಲ್ಲೂ ಪಾಟ್ನಾ ಮುನ್ನಡೆ ಕಾಯ್ದಿರಿಸಿಕೊಂಡಿತ್ತು. ಆದರೆ ದ್ವಿತೀಯಾರ್ಧದ ಕೊನೇ ಕ್ಷಣದಲ್ಲಿ ಡೆಲ್ಲಿಯ ವಿಜಯ್ ಮಲಿಕ್ ಅವರ ಸೂಪರ್ ರೇಡ್ ನಿಂದಾಗಿ ಡೆಲ್ಲಿಗೆ ಹೆಚ್ಚು ಅಂಕಗಳು ಸೇರ್ಪಡೆಯಾಯಿತಲ್ಲದೆ ತಂಡ ಮುನ್ನಡೆ ಪಡೆದುಕೊಂಡಿತು. ಅಂತಿಮವಾಗಿ ರೇಡ್ ಗೆ ತೆರಳಿದ ನವೀನ್ ಪೂರ್ತಿ ಸಮಯ ಮುಕ್ತಾಯದ ಹೊತ್ತಿಗೆ ತಂಡ 1 ಅಂಕ ಮುನ್ನಡೆಯಲ್ಲಿರುವಂತೆ ನೋಡಿಕೊಂಡರು.
ಕಳೆದ ಸಾರಿಯೂ ಡೆಲ್ಲಿ ತಂಡ ಫೈನಲ್ ಗೆ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಡೆಲ್ಲಿ ನಿರಾಸೆ ಅನುಭವಿಸಿತ್ತು. ಈ ಪಂದ್ಯದಲ್ಲಿ ನವೀನ್ 200 ರೇಡ್ ಪಾಯಿಂಟ್ಸ್ ಮೈಲಿಗಲ್ಲು ಸ್ಥಾಪಿಸುವ ಮೂಲಕ ಗಮನ ಸೆಳೆದರು. ಕಳೆದ ಸೀಸನ್ ನ ಫೈನಲ್ ನಲ್ಲಿ ಸೋತಾಗ ಕಣ್ಣೀರು ಹಾಕಿ ಆಘಾತ ತೋರಿಕೊಂಡಿದ್ದ ನವೀನ್ ಈ ಬಾರಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿ ಕ್ರೀಡಾಭಿಮಾನಿಗಳ ಹೃದಯ ಗೆದ್ದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್ಗಳು
ಪ್ರಚಲಿತ ಪೋಸ್ಟ್ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
❤️ superb.
ಪ್ರತ್ಯುತ್ತರಅಳಿಸಿ