ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಕತ್ತಲೇಲಿ ನಾವಿದ್ದಲ್ಲಿಗೆ ಬರಲು ಸೊಳ್ಳೆಗಳು ಎಂಥಾ ಐಡಿಯಾ ಮಾಡ್ತವೆ ಗೊತ್ತಾ?!

ನೀವು ರಾತ್ರಿ ಹೊತ್ತು ಕರೆಂಟ್ ಆಫ್ ಮಾಡಿ ಕತ್ತಲೇಲಿ ರೂಮಿನ ಮೂಲೆಯಲ್ಲಿ ಅಡಗಿ ಕುಳಿತುಕೊಂಡು ನೋಡಿ; ಅದ್ಯಾವ ಮೂಲೆಯಲ್ಲಿ ನೀವು ಕದ್ದು ಕೂತಿದ್ದರೂ ಸೊಳ್ಳೆಗಳು ಮ್ಯೂಸಿಕ್ಕು ಹಾಕುತ್ತಾ ನಿಮ್ಮ ಸಮೀಪಕ್ಕೆ ಬರುತ್ತವೆ. ಕತ್ತಲಿನಲ್ಲಿ ಮನುಷ್ಯರಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ ಸೊಳ್ಳೆಗಳಿಗೆ ಬೆಳಕಿಲ್ಲದೆಯೂ ಕಾಣಿಸುತ್ತದೆಯೇನೋ ಅಂತ ನೀವಂದುಕೊಂಡಿದ್ದೀರಾ? ಹ್ಞುಂ ಹ್ಞುಂ..

ಅಸಲಿಗೆ ಸೊಳ್ಳೆಗಳಿಗೂ ನಮ್ಮಂತೆ ರಾತ್ರಿಯ ಹೊತ್ತು ಕಣ್ಣು ಕಾಣಿಸುವುದಿಲ್ಲ. ಆದರೂ ಅವು ಕತ್ತಲಿನಲ್ಲಿ ನಾವಿದ್ದೆಡೆ ಬರುತ್ತವೆ ಹೇಗೆ? ಸೊಳ್ಳೆಗಳು ಅದಕ್ಕೊಂದು ಸೂಪರ್ ಐಡಿಯಾ ಮಾಡ್ತವೆ. 

ಮನುಷ್ಯನ ದೇಹದ ಉಷ್ಣತೆ ಮತ್ತು ವಾಸನೆ ಸೊಳ್ಳೆಗಳನ್ನು ಬೇಗನೆ ಆಕರ್ಷಿಸುತ್ತವೆ. ನಾವು ಉಸಿರು ಬಿಡುವಾಗ ಹೊರ ಬರುವ ಇಂಗಾಲದ ಡೈ ಆಕ್ಸೈಡ್ ಮತ್ತು ನಮ್ಮ ದೇಹದಿಂದ ಹೊರ ಬರುವ ಬೆವರು (ಮುಖ್ಯವಾಗಿ ಬೆವರಿನಲ್ಲಿರುವ ರಾಸಾಯನಿಕ ಲ್ಯಾಕ್ಟಿಕ್ ಆಮ್ಲ) ಸೊಳ್ಳೆಗಳು ನಮ್ಮ ಸಮೀಪಕ್ಕೆ ಬರಲು ಉತ್ತೇಜನ ನೀಡುತ್ತವೆ. 

ಕತ್ತಲಿನಲ್ಲಿ ನಮಗಂತೂ ಸೊಳ್ಳೆಗಳು ಕಾಣಿಸುವುದಿಲ್ಲ. ಸೊಳ್ಳೆಗಳಿಗೂ ನಾವು ಕಾಣಿಸದಿದ್ದರೂ ಅವುಗಳಿಗೆ ನಮ್ಮನ್ನು ವಾಸನೆಯ ಮೂಲಕ ಪತ್ತೆಹಚ್ಚುವ ಉಪಾಯ ಗೊತ್ತಿದೆ ನೋಡಿ, ಹಾಗಾಗಿ ಅವು ಕತ್ತಲಿನಲ್ಲೂ ನಾವಿದ್ದ ಜಾಗಕ್ಕೆ ಹುಡುಕಿಕೊಂಡು ಬರುತ್ತವೆ. 

ಕತ್ತಲಿನಲ್ಲಿ ಸೊಳ್ಳೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೋ ಇಲ್ಲವೋ ಅಂತ ನೀವು ಬೇಕಾದರೆ ಟೆಸ್ಟ್ ಮಾಡಿ ನೋಡ್ಬೋದು; ಆದ್ರೆ ಟೆಸ್ಟಿನ ವೇಳೆ ಸೊಳ್ಳೆ ಬತ್ತಿ ಅಥವಾ ಮೊಸ್ಕ್ವಿಟೋ ಲಿಕ್ವಿಡ್ ಹಚ್ಚಿಟ್ಟಿರಬಾರ್ದಷ್ಟೇ!

-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು