ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಪಿಕೆಎಲ್ 2021: ಯು ಮುಂಬಾ ವಿರುದ್ಧ ಮುಗ್ಗರಿಸಿದ ಬೆಂಗಳೂರು ಬುಲ್ಸ್!

 

ಪ್ರೊ ಕಬಡ್ಡಿ ಲೀಗ್ (ಕೆಪಿಎಲ್) 8ನೇ ಸೀಸನ್ ಆರಂಭವಾಗಿದೆ. ಆರಂಭಿಕ ಪಂದ್ಯದಲ್ಲೇ 2018ರ ಸೀಸನ್ ನ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ ಹಿನ್ನಡೆ ಅನುಭವಿಸಿದೆ. ಬುಧವಾರ (ಡಿಸೆಂಬರ್ 22) ನಡೆದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಯು ಮುಂಬಾ 46-30 ಅಂತರದ ಗೆಲುವು ದಾಖಲಿಸಿದೆ.

ಯು ಮುಂಬಾ ಪ್ರಮುಖ ಆಟಗಾರ ಅಭಿಷೇಕ್ ಸಿಂಗ್ ಅದ್ಭುತ ರೈಡ್ ಪಾಯಿಂಟ್ಸ್ ನಿಂದ ತಂಡ ಬಹಳ ಅಂತರದಿಂದ ಗೆಲುವು ಕಂಡಿದೆ. 15 ರೈಡ್, 4 ಬೋನಸ್ ಸೇರಿ ಸಿಂಗ್ ಒಬ್ಬರೇ ತಂಡಕ್ಕೆ 19 ಪಾಯಿಂಟ್ಸ್ ಗಳ ಕೊಡುಗೆ ನೀಡಿದರು. ಸಿಂಗ್ ಬಿಟ್ಟರೆ ಬಿ ಅಜಿತ್ ಕುಮಾರ್ 6, ಹರೇಂದ್ರ ಕುಮಾರ್ 4, ಆಶಿಷ್ ಕುಮಾರ್ 3, ಮೋಹ್ಸೇನ್ ಮಗ್ಸೌಡ್ಲೌ 2, ರಿಂಕು ಎಚ್.ಸಿ. 2, ಫಝಲ್ ಅತ್ರಾಚಲಿ 2 ಮತ್ತು ರಾಹುಲ್ ಸೇತ್ಪಾಲ್ 1 ಅಂಕ ಸೇರಿಸಿ ತಂಡದ ಜಯಕ್ಕೆ ಕಾರಣರಾದರು.

ಬೆಂಗಳೂರು ಬುಲ್ಸ್ ನಿಂದ ಸ್ಟಾರ್ ಆಟಗಾರ ಪವನ್ ಕುಮಾರ್ ಶೆಹ್ರಾವತ್ ಈ ಬಾರಿ ಅಷ್ಟೇನೂ ಗಮನ ಸೆಳೆಯಲಿಲ್ಲ. ಚಂದ್ರನ್ ರಂಜಿತ್ ಜೊತೆ ಪವನ್ ಕೂಡ ತಂಡದ ಪರ ಸ್ವಲ್ಪ ಮಟ್ಟಿನ ಕೊಸರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ದಾಟಿಸಲು ಇಬ್ಬರಿಂದಲೂ ಆಗಲಿಲ್ಲ. ಚಂದ್ರನ್ ರಂಜಿತ್ 13, ಪವನ್ ಕುಮಾರ್ 12, ಮಯೂರ್ ಕದಮ್ 2, ಭರತ್ 2, ಮೋರ್ ಜಿಬಿ 1 ಅಂಕ ಸೇರಿಸಿ ಬುಲ್ಸ್ ಸೋಲಿನ ಅಂತರ ಕಡಿಮೆ ಮಾಡಿಕೊಂಡರು.

ಪಂದ್ಯದ ಆರಂಭದಲ್ಲಿ ಬೆಂಗಳೂರು ಮುನ್ನಡೆಯೊಂದಿಗೆ ಕೊಂಚ ಹುರುಪಿನ ಆಟ ನೀಡಿತ್ತು. ಆದರೆ ಪಂದ್ಯದ ಫಸ್ಟ್ ಹಾಫ್ ವೇಳೆ ಮುಂಬೈ ಉತ್ತಮ ಲೀಡ್ ಪಡೆದುಕೊಂಡಿತ್ತು. ಕೊನೇ ಕ್ಷಣದಲ್ಲಿ ಬೆಂಗಳೂರು ಪೈಪೋಟಿ ನೀಡುವ ಪ್ರಯತ್ನ ಮಾಡಿತಾದರೂ ಎದುರಾಳಿ ಮುಂಬೈ ತಂಡ ಬೆಂಗಳೂರನ್ನು ಆಲ್ ಔಟ್ ಮೂಲಕ ಸೋಲಿನಂಚಿಗೆ ತಳ್ಳಿತು. ಡಿಸೆಂಬರ್ 24ಕ್ಕೆ ಮತ್ತೆ ಬೆಂಗಳೂರು ಬುಲ್ಸ್ ಮತ್ತು ತಮಿಳು ತಲೈವಾಸ್ ತಂಡಗಳು ಮುಖಾಮುಖಿಯಾಗಲಿವೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು