ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಜಗತ್ತಿನ ಟಾಪ್ 11 ಅತೀ ಸುಂದರಿ ಮಹಿಳೆಯರಿವರು!



ನಿಸರ್ಗದ ಅದ್ಭುತ ಸೃಷ್ಠಿಗಳಲ್ಲಿ ಹೆಣ್ಣಿಗೆ ಅಗ್ರ ಸ್ಥಾನವಿದೆ. ಹೆಣ್ಣೆಂದರೆ ಹಾಗೇನೆ; ಆಕೆ ಅನುಕಂಪದ ಕಡಲು, ಮಾತೃ ಹೃದಯಿ, ಸಾಂತ್ವನಿಸುವ ಗೆಳತಿ, ಜಗ ಸೃಷ್ಠಿಯ ದೇವತೆ, ಚೆಲುವಿನ ಪ್ರತಿರೂಪ ಎಲ್ಲವೂ ಹೌದು. ಚೆಲುವಿಗೆ ಅದ್ಭುತ ಉದಾಹರಣೆಯಾಗಿ ಹೆಣ್ಣು ಕಾಣಿಸುತ್ತಾಳೆ. ಆಕೆ ಹೇಗಿದ್ದರೂ ಅದೇನೋ ಸೆಳೆತ ಅವಳಲ್ಲಿರುತ್ತದೆ.

ಜಗತ್ತಿನಲ್ಲಿ ಸಾವಿರಾರು ಸ್ಫುರದ್ರೂಪಿ ಹುಡುಗಿಯರಿದ್ದಾರೆ. ಮೋನಾಲೀಸಾ, ಕ್ಲಿಯೋಪಾತ್ರಾಳಿಂದ ಹಿಡಿದು ಐಶ್ವರ್ಯ ರೈ, ಎಮ್ಮಾ ವಾಟ್ಸನ್‌ವರೆಗೆ ಹಲವಾರು ಕಣ್ಸೆಳೆವ ಬೆಡಗಿಯರು ಜಗತ್ತಿನಲ್ಲಿದ್ದಾರೆ. ಅವರಲ್ಲಿ ಅತೀ ಸುಂದರಿ ಟಾಪ್ 11 ಮಹಿಳೆಯರ ಪಟ್ಟಿ ಇಲ್ಲಿದೆ. 2021ರಲ್ಲಿ ಜಗತ್ತಿನ ಅತೀ ಸುಂದರಿ ಮಹಿಳೆಯರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡಿ..

# ಮೆರಿಯೆಮ್ ಉಜೆರ್ಲಿ

ಈ ಸುಂದರಿ ಹೆಸರು ಮೆರಿಯೆಮ್ ಉಜೆರ್ಲಿ. ಈಕೆ ಟರ್ಕಿ ದೇಶದವಳು. ಮನ ಸೆಳೆಯುವ ಅಂದಗಾತಿ ಈಕೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಳು.

# ಸೆಲೆನಾ ಗೋಮ್ಝ್

ಈಕೆ ಸೆಲೆನಾ ಗೋಮ್ಝ್. ಅಮೆರಿಕಾದ ಜನಪ್ರಿಯ ಹಾಡುಗಾರ್ತಿ, ನಟಿ ಮತ್ತು ಬರಹಗಾರ್ತಿ ಕೂಡ. 27ರ ಹರೆಯದ ಈ ಸುಂದರಿ ಜನಿಸಿದ್ದು ಟೆಕ್ಸಾಸ್‌ನಲ್ಲಿ. ಖ್ಯಾತ ಹಾಡುಗಾರ ಜಸ್ಟಿನ್ ಬೀಬರ್ ಜೊತೆ ಡೇಟಿಂಗ್‌ ಮಾಡುತ್ತಿದ್ದ ಹೊತ್ತಿನಲ್ಲಿ ಸೆಲೆನಾ ಹೆಚ್ಚು ಗಮನ ಸೆಳೆದಿದ್ದಳು.

# ಎಮ್ಮಾ ವಾಟ್ಸನ್ 

ಈಕೆಯನ್ನು ನೀವು ಖಂಡಿತಾ ನೋಡಿರುತ್ತೀರಿ. ಯಾಕೆಂದರೆ ಈಕೆ ಇಂಗ್ಲೀಷ್‌ನ ಖ್ಯಾತ ನಟಿ. ಅಲ್ಲದೆ ಜನಪ್ರಿಯ ಹ್ಯಾರಿಪಾಟರ್ ಸಿನಿಮಾ ಸರಣಿಗಳಲ್ಲಿ ಈಕೆ ಪ್ರಮುಖ ಪಾತ್ರದಲ್ಲಿ ಮಿನುಗಿದ್ದಳು.  

# ಅಲೆಕ್ಸಾಂಡ್ರಾ ದಡಾರಿಯೋ

34ರ ಹರೆಯದ ಅಲೆಕ್ಸಾಂಡ್ರಾ ದಡಾರಿಯೋ ಅಮೆರಿಕನ್ ನಟಿ. ಪರ್ಸಿ ಜಾಕ್ಸನ್ ಸಿನಿಮಾ ಸರಣಿಗಳಲ್ಲಿ ಅನ್ನಾಬೆತ್ ಚೇಸ್ ಪಾತ್ರದಲ್ಲಿ  ಈಕೆ ಹೆಚ್ಚು ಗಮನ ಸೆಳೆದಿದ್ದಳು. 

# ಡಕಿ ಥಾಟ್

ಈ ಕೃಷ್ಣ ಸುಂದರಿ ಹೆಸರು ಡಕಿ ಥಾಟ್. ಈಕೆ ಆಸ್ಟ್ರೇಲಿಯಾದ ಮಾಡೆಲ್. ಈಕೆಯ ಚೆಲುವು ಗುರುತಿಸಲ್ಪಟ್ಟಿದ್ದು ನ್ಯೂಯಾರ್ಕ್‌ನಲ್ಲಿ. 2018ರಲ್ಲಿ ವಿಕ್ಟೋರಿಯಾದಲ್ಲಿ ನಡೆದ ಸೀಕ್ರೆಟ್ ಫ್ಯಾಷನ್ ಶೋನಲ್ಲಿ ಡಕಿ ಎಲ್ಲರ ಹುಬ್ಬೇರಿಸುವ ಪ್ರದರ್ಶನ ನೀಡಿದ್ದಳು.

# ಐಶ್ವರ್ಯ ರೈ

ಈಕೆಯಂತೂ ನಿಮಗೆ ಗೊತ್ತೇಯಿದೆ. ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯ ರೈ ಮಿಸ್ ವರ್ಲ್ಡ್1994 ಪೀಜಿಯೆಂಟ್ ಪ್ರಶಸ್ತಿ ಜಯಿಸಿದ್ದರು. ಈಕೆ ಭಾರತದ ಪ್ರಭಾವಶಾಲಿ ನಟಿ ಮಾತ್ರವಲ್ಲ ವಿಶ್ವದಲ್ಲೇ ಫೇಮಸ್ ಸುಂದರಿ.

# ದೀಪಿಕಾ ಪಡುಕೋಣೆ 

ಭಾರತದಲ್ಲಿ ಅತ್ಯಂತ ಯಶಸ್ವಿ ಮತ್ತು ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. 2018ರಲ್ಲಿ ದೀಪಿಕಾ ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈಕೆ ಹಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ.

# ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಕೂಡ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ನಟಿ. ಈಕೆ ಮಿಸ್ ವರ್ಲ್ಡ್ 2000 ಪೀಜಿಯೆಂಟ್ ಪ್ರಶಸ್ತಿ ಜಯಿಸಿದ್ದಾರೆ. ನ್ಯಾನಷನಲ್ ಫಿಲ್ಮ್ ಅವಾರ್ಡ್ ಸೇರಿ ಅನೇಕ ಪ್ರಶಸ್ತಿಗಳು ಈಕೆಗೆ ಸಿಕ್ಕಿವೆ.

# ಫ್ಯಾನ್ ಬಿಂಗ್‌ಬಿಂಗ್

ಫ್ಯಾನ್ ಬಿಂಗ್‌ಬಿಂಗ್ ಜನಿಸಿದ್ದು 1981ರಲ್ಲಿ. ಈಕೆ ಚೈನೀಸ್ ಖ್ಯಾತ ನಟಿ. 2017ರಲ್ಲಿ ಫ್ಯಾನ್ ಬಿಂಗ್‌ಬಿಂಗ್ ಟೈಮ್ ಮ್ಯಾಗಝಿನ್‌ನ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಸ್ಥಾನ ಪಡೆದುಕೊಂಡಿದ್ದರು.

# ಕ್ಯಾಂಡೀಸ್ ಸ್ವ್ಯಾನ್‌ಪೋಯೆಲ್

ಕ್ಯಾಂಡೀಸ್ ಸ್ವ್ಯಾನ್‌ಪೋಯೆಲ್ ಜನಿಸಿದ್ದು ದಕ್ಷಿಣ ಆಫ್ರಿಕಾದಲ್ಲಿ. ಈಕೆಯೊಬ್ಬಳು ಯಶಸ್ವಿ ಮಾಡೆಲ್. ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಶೋನಲ್ಲಿ ಮಿಂಚಿದ್ದವರಲ್ಲಿ ಈಕೆ ಕೂಡ ಒಬ್ಬಳು.

# ಟೇಲರ್ ಸ್ವಿಫ್ಟ್ 

ಟೇಲರ್ ಸ್ವಿಫ್ಟ್ ಅಮೆರಿಕಾದ ಜನಪ್ರಿಯ ಸಿಂಗರ್, ಸಾಂಗ್ ರೈಟರ್. ಈಕೆಗೆ ಒಟ್ಟು ಏಳು ಸಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಜಗತ್ತಿನ ಅತೀ ಸುಂದರಿಯಲ್ಲಿ ಈಕೆಗೂ ಸ್ಥಾನವಿದೆ.  

                                                                                                          -ಸದಾ ಸಕಲೇಶಪುರ.


ಕಾಮೆಂಟ್‌ಗಳು