ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಹರ್ಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಭರ್ಜರಿ ಜಯ

ಬೆಂಗಳೂರು: ಬೆಂಗಳೂರಿನ ಶೆರಾಟನ್ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 30) ನಡೆದ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ 42-28ರ ಭರ್ಜರಿ ಜಯ ಗಳಿಸಿದೆ. ಇದು ಬುಲ್ಸ್ ಈ ಸೀಸನ್ ನಲ್ಲಿ ದಾಖಲಿಸಿದ ಸತತ ಮೂರನೇ ಗೆಲುವು.

ಬೆಂಗಳೂರು ಬುಲ್ಸ್ ನಾಯಕ ಪವನ್ ಕುಮಾರ್ ಶೆಹ್ರಾವತ್ ಅದ್ಭುತ ಆಟದ ಜೊತೆಗೆ ಜಿಬಿ ಮೋರೆ ಮತ್ತು ಮಹೇಂದರ್ ಸಿಂಗ್ ಸಾಥ್ ತಂಡದ ಗೆಲುವಿಗೆ ಕಾರಣವಾಯ್ತು. ಪವನ್ 15 ರೈಡ್, 2 ಟ್ಯಾಕಲ್, 5 ಬೋನಸ್ ಸೇರಿ ಒಟ್ಟು 22 ಪಾಯಿಂಟ್ಸ್ ನೀಡಿದರೆ, ಸಿಂಗ್ 4, ಮೋರೆ 5 ಅಂಕಗಳ ಕೊಡುಗೆಯಿತ್ತರು. ಇನ್ನು ಅಮನ್ 3, ಸೌರಭ್ ನಂದಲ್ 2, ಮಯೂರ್ ಕದಮ್ 1, ಚಂದ್ರನ್ ರಂಜಿತ್ 1 ಅಂಕ ಸೇರಿಸಿ ತಂಡದ ಟೋಟಲ್ ಹೆಚ್ಚಿಸಿದರು.

ಹರ್ಯಾಣ ಸ್ಟೀಲರ್ ಕೂಡ ತಕ್ಕ ಮಟ್ಟಿನ ಪೈಪೋಟಿ ನೀಡಿತು. ವಿಕಾಸ್ ಖಂಡೋಲ 7, ರೋಹಿತ್ ಗುಲಿಯಾ 5, ಜೈದೀಪ್ ಕುಲದೀಪ್ 4, ಆಶಿಷ್ 4, ಮೀತು ಮಹೇಂದರ್ 3, ರವಿ ಕುಮಾರ್ 2, ಸುರೇಂದರ್ ನಡ 2, ಮೋಹಿತ್ 1 ಅಂಕ ಸೇರಿಸಿ ಸೋಲಿನ ಅಂತರ ಕಡಿಮೆ ಮಾಡಲು ನೆರವಾದರು. 

ಈ ಪಂದ್ಯದ ಬಳಿಕ ಬೆಂಗಳೂರು ಬುಲ್ಸ್ ಪಿಕೆಎಲ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಆಡಿರುವ 4 ಪಂದ್ಯಗಳಲ್ಲಿ ಬುಲ್ಸ್ 3 ಗೆಲುವುಗಳೊಂದಿಗೆ 15 ಅಂಕ ಕಲೆ ಹಾಕಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು, 1 ಡ್ರಾ ಸೇರಿ 18 ಪಾಯಿಂಟ್ಸ್ ಗಳಿಸಿದೆ. ಇನ್ನು ಮೂರನೇ ಸ್ಥಾನದಲ್ಲಿ ಯು ಮುಂಬಾ (14 ಪಾಯಿಂಟ್ಸ್), 4ನೇ ಸ್ಥಾನದಲ್ಲಿ ಗುಜರಾತ್ ಜೈಂಟ್ಸ್ (12 ಪಾಯಿಂಟ್ಸ್) ಇದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು