ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ತಂಬಾಕಿನ ಹೊಗೆಗೂ ಆಕಾಶದ ಮೋಡಕ್ಕೂ ಸಂಬಂಧವುಂಟಂತೆ!?

ಮೆರಿಕಾದಲ್ಲಿ ಪ್ರಾಚೀನ ಮಾಯಾನ್ನರಿಗಿಂತ ಬಹಳ ಮೊದಲೇ ಒಲ್ಮೆಕ್ ಎಂಬ ಜನಾಂಗವೊಂದಿತ್ತು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಒಲ್ಮೆಕ್ ಜನರಲ್ಲಿ ಇದ್ದ ಒಂದು ವಿಚಿತ್ರ ನಂಬಿಕೆಯನ್ನು ಕೇಳಿದರೆ ನೀವು ಏನೆನ್ನುವಿರೋ ಏನೋ.

ಒಲ್ಮೆಕ್ ಜನರ ಕಾಲದಲ್ಲಿ ಮೆಸೋ ಅಮೆರಿಕಾದಲ್ಲಿ ತಂಬಾಕಿನ ಬೆಳೆ ಮತ್ತು ತಂಬಾಕಿನ ಉಪಯೋಗ ಇತ್ತೆನ್ನಲಾಗುತ್ತದೆ. ಅಥವಾ ಇನ್ನೂ ಕಾಡಿನ ಉತ್ಪನ್ನವಾಗಿದ್ದ ತಂಬಾಕನ್ನು ಒಲ್ಮೆಕ್ ಜನರು ತಮ್ಮ ಮೇಲೆ ಪ್ರಯೋಗಿಸಿಕೊಂಡು ನಶೆಯಲ್ಲಿ ತೇಲಾಡುವ ಅನುಭವ ಪಡೆಯುತ್ತಿದ್ದರು.

ತಂಬಾಕಿನಿಂದ ಬರುವ ಹೊಗೆಗೂ ಆಕಾಶದಲ್ಲಿ ತೇಲುವ ಮೋಡಗಳಿಗೂ ಸಂಬಂಧ ಉಂಟೆಂದು ಅವರು ನಂಬಿದ್ದರು. ತಾವು ಸೇದಿಬಿಟ್ಟ ಹೊಗೆಯೇ ಮೋಡವಾಗಿದೆಯೆಂದು ಅವರು ಭಾವಿಸುತ್ತಿದ್ದರಂತೆ. ಹಾಗಾಗಿ ಮರುಣನಲ್ಲಿ ಮಳೆ ಬರಬೇಕೆಂದು ಬೇಡಿಕೆಯನ್ನಿಡುವಾಗೆಲ್ಲಾ ಅವರು ಸಾಮೂಹಿಕವಾಗಿ ತಂಬಾಕು ಸೇವಿಸಿ ಆದಷ್ಟು ಮೋಡಗಳನ್ನು ದಟ್ಟೈಸಲು ಪ್ರಯತ್ನಿಸುತ್ತಿದ್ದರಂತೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು