ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಸ್ಕೂಬಾ ಡೈವಿಂಗ್ ಯಾಕಷ್ಟು ರೋಚಕ ಗೊತ್ತಾ?!

ಟ್ರಕ್ಕಿಂಗ್, ಡೈವಿಂಗ್, ರೋಚಕ ಸ್ಥಳಗಳಿಗೆ ಸುತ್ತಾಟ ಇಂಥ ಕ್ರೇಸ್‌ಗಳನ್ನು ಹೊಂದಿರುವ ಅನೇಕ ಮಂದಿಯಿರುತ್ತಾರೆ. ಬರೀ ಸುತ್ತಾಟ ಮನರಂಜನೆ ನೀಡಿದರೆ, ಸಾಹಸಮಯ ಚಟುವಟಿಕೆಗಳು ಕೊಂಚ ಅಪಾಯಕಾರಿಯೂ ಹೌದು. ಆದರೂ ಇಂಥ ರೋಚಕ ಕ್ಷಣಗಳನ್ನು ಇಷ್ಟ ಪಡುವವರು ಅನೇಕ ಮಂದಿಯಿರುತ್ತಾರೆ.

ಪ್ಯಾರಚೂಟ್ ಡೈವಿಂಗ್, ಅಮ್ಯೂಸ್ಮೆಂಟ್‌ ಪಾರ್ಕ್‌ಗಳಲ್ಲಿ ಅನುಭವಿಸುವ ರೋಚಕ ಕ್ಷಣಗಳನ್ನು ಬಯಸುವವರಿಗಾಗಿ ಸ್ಕೂಬಾ ಡೈವಿಂಗ್ ಕೂಡ ಖುಷಿ ನೀಡಬಹುದು. ಸ್ಕೂಬಾ ಡೈವಿಂಗ್ ಎಂದರೇನು? ಸ್ಕೂಬಾ ಡೈವಿಂಗ್ ಹೇಗೆ? ಅಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂಬಿತ್ಯಾದಿ ಸಂಗತಿಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಯಿದೆ.

ಭೂಮಿಯ ಮೇಲೆ ವಾಸಿಸುವುದಕ್ಕಿಂತ ಹೆಚು ಸಂಖ್ಯೆಯ ಜೀವಿಗಳು ಸಮುದ್ರದಲ್ಲಿ ವಾಸಿಸುತ್ತವೆ ಎಂದು ಜೀವ ಶಾಸ್ತ್ರಜ್ಞರು ತಿಳಿಸುತ್ತಾರೆ. ಸಾಗರ ಜೀವಿಗಳನ್ನು ಸಹಜ ಪರಿಸರದಲ್ಲೇ ತೋರಿಸುವ ಸ್ಕೂಬಾ ಡೈವಿಂಗ್ ರೋಚಕ ಸಾಹಸ. ಮುಖ್ಯವಾಗಿ ಸಾಗರಕ್ಕಿಳಿದು ಅಥವಾ ನೀರಿಗಿಳಿದು ಮಾಡುವ ರೋಚಕ ಸಾಹಸಕ್ಕೆ ಸ್ಕೂಬಾ ಡೈವಿಂಗ್ ಅನ್ನುತ್ತಾರೆ.

ಸಿಂಪಲ್ಲಾಗಿ ಹೇಳಬೇಕೆಂದರೆ ಸ್ಕೂಬಾ ಡೈವಿಂಗ್ ಒಂದು ನೀರಿನೊಳಗೆ ಧುಮುಕುವ ಕಲೆ. ಇಲ್ಲಿ ನೀರೊಳಗೆ ಧುಮುಕಿದವರು ಉಸಿರಾಡಲು ನೀರೊಳಗಿನ ಸ್ವಯಂಪೂರ್ಣವಾದ ಉಸಿರಾಟದ ಉಪಕರಣ (ಸ್ಕೂಬ) ವನ್ನು ಬಳಸುತ್ತಾನೆ. ಅನೇಕ ವಿಧಾನಗಳ ಡೈವಿಂಗ್‌ನಲ್ಲಿ ನೀರಿನೊಳಗೆ ಉಸಿರಾಡಲು ಉಸಿರುಗಟ್ಟಿ ಈಜುವುದು ಅಥವಾ ಒಂದು ಅನಿಲ ಪಂಪ್ ಅನ್ನು ಕಟ್ಟಿಕೊಂಡು ಮೇಲಿನಿಂದ ಅದರಲ್ಲಿ ಬರುವ ಗಾಳಿಯನ್ನು ಉಸಿರಾಡುವುದು ಎರಡು ಬಗೆ ಇದೆ. ಆದರೆ ಸ್ಕೂಬಾ ಡೈವಿಂಗ್ ನಲ್ಲಿ ಡೈವರ್ಗಳು ತಮ್ಮದೇ ಆದ ಉಸಿರಾಡುವ ಅನಿಲ, ಸಾಮಾನ್ಯವಾಗಿ ಸಂಕುಚಿತ ಗಾಳಿ ಒಳಗೊಂಡ ಉಪಕರಣ ಹೊಂದಿರುತ್ತಾರೆ, ಇದು ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ಅವಕಾಶ ಮತ್ತು ಹೆಚ್ಚು ನೀರೊಳಗೆ ಉಸಿರಾಡುವ ಸೈರಣೆ ಕೊಡುತ್ತದೆ.

ವಿದೇಶಿ ಪ್ರವಾಸಿಗರು ಪೂರ್ವ ಸಿದ್ಧತೆಯೊಡನೆ ನೆಚ್ಚಿನ ಸಮುದ್ರ ತೀರಕ್ಕೆ ರಜಾ ದಿನಗಳಲ್ಲಿ ಲಗ್ಗೆ ಹಾಕುತ್ತಾರೆ. ಪ್ರವಾಸಿಗಳಿಗಾಗಿಯೆ ಕ್ರಾಶ್ ಕೋರ್ಸ್ ನಡೆಯುತ್ತವೆ. ನಂತರ ಎದೆ ಮಟ್ಟದ ನೀರಿನಲ್ಲಿ ಮುಳುಗು ಹಾಕಿಸಿ ತರಬೇತಿ ನೀಡುವ ಕೋರ್ಸರ್‌ಗಳೂ ಇರುತ್ತವೆ. ತರಬೇತುದಾರರು ಅಂತರ್ ರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಿಂದ ಸರ್ಟಿಫಿಕೇಟ್ ಪಡೆದಿರುತ್ತಾರೆ. ಅರ ಮಾರ್ಗದರ್ಶನದಲ್ಲಿ ಸ್ಕೂಬಾ ಡೈವಿಂಗ್ ಮಾಡಲಾಗುತ್ತದೆ. ಹವ್ಯಾಸಿಗಳಿಗೆ ಪ್ರಾಥಮಿಕ ಹಂತ ಮತ್ತು ಮುಂದುವರೆದ ಹಂತಗಳಿರುತ್ತವೆ. ಎಷ್ಟು ಆಳಕ್ಕೆ ಇಳಿಯಬೇಕು ಮತ್ತು ಎಷ್ಟು ಹೊತ್ತು ನೀರಿನಡಿ ಇರಬೇಕು ಎಂಬುದರ ಬಗ್ಗೆ ನಿದರ್ಶನಗಳಿರುತ್ತವೆ. ಅವನ್ನು ಉಲ್ಲಂಘಿಸಿದರೆ ಪ್ರಾಣಾಪಾಯವಾಗುವ ಸಂಭವ ಹೆಚ್ಚಿರುತ್ತವೆ.

ಸ್ಕೂಬಾ ಡೈವಿಂಗ್ಗೆ ಬೇಕಾದ ಸ್ಕೂಬಾ ಗಿಯರ್(ಅಗತ್ಯ ವಸ್ತುಗಳು) ಕೆಲವು ರೆಸಾರ್ಟ್‌ಗಳಲ್ಲಿ ಬಾಡಿಗೆಗೆ ಸಿಗುತ್ತವೆ. ಅಗತ್ಯವಾಗಿ ಬೇಕಾದ ಆಕ್ವಾಲಂಗ್ ಸೂಟ್, ಸ್ಕೂಬಾ ವೆಟ್ ಸೂಟ್, ಹಿಮ್ಮಡಿ ಸ್ಟ್ರಾಪ್, ಜಲ ನಿರೋಧಕ ವಾಚ್, ಡೈವಿಂಗ್ ಹೆಲ್ಮೆಟ್, ಜಲ ನಿರೋಧಕ ಕನ್ನಡಕಗಳು, ಜಲಪಾದಗಳು, ಆಮ್ಲಜನಕ ಟ್ಯಾಂಕ್ ಇತ್ಯಾದಿಗಳು ದುವಾರಿ ಬೆಲೆ ಬಾಳುತ್ತವೆ.

ಕರ್ನಾಟಕದಲ್ಲಿ ಎಲ್ಲಿದೆ?
ಆಮ್ಲಜನಕ ಸಿಲಿಂಡರನ್ನು ಹೆಗಲಿಗೆ ಕಟ್ಟಿಕೊಂಡು ನೀರಿಗೆ ಧುಮುಕಿ ಕಡಲಾಳದ ಜಲಚರಗಳ ವೀಕ್ಷಣೆ ಮಾಡುವುದು ಸ್ಕೂಬಾ ಡೈವಿಂಗ್ ಆಗಿದೆ. ಮುರಡೇಶ್ವರದ ನೇತ್ರಾಣಿಯಲ್ಲಿ 2007 ರಿಂದಲೇ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ಆದರೆ, ಇದು ಪ್ರವಾಸಿಗರಿಗೆ ತೆರೆದುಕೊಂಡಿರಲಿಲ್ಲ. ಹೆಚ್ಚು ಪ್ರಚಾರವು ಆಗಿರಲಿಲ್ಲ. ಕೆಲವು ಕಡಲ ಜೀವ ವಿಜ್ಞಾನಿಗಳು ಮಾತ್ರ ಇಲ್ಲಿಗೆ ಬಂದು ಈ ಕಾರ್ಯ ನಡೆಸುತ್ತಿದ್ದರು. ಆದರೆ 2017 ರಲ್ಲಿ ಅಧಿಕೃತವಾಗಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಕೂಬಾ ಡೈವಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಮುರುಡೇಶ್ವರದಿಂದ ಪಶ್ಚಿಮ ಕರಾವಳಿಯಲ್ಲಿರುವ ನೇತ್ರಾಣಿ ದ್ವೀಪದಲ್ಲಿ ನೇತ್ರಾಣಿ ಅಡ್ವೆಂಚರ್ಸ್ ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕೆಲಿಂಗ್ ಅನ್ನು ನೀಡುತ್ತದೆ. ದೇವಾಲಯ ಪಟ್ಟಣವಾದ ಮುರುಡೇಶ್ವರದಿಂದ ಸುಮಾರು 10 ನಾಟಿಕಲ್ ಮೈಲುಗಳಷ್ಟು (19 ಕಿ.ಮೀ) ದೂರದಲ್ಲಿರುವ ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಮೇಲಿನಿಂದ ಹೃದಯ ಆಕಾರದಲ್ಲಿ ಕಾಣುತ್ತದೆ ಮತ್ತು ಅನೇಕ ಬಗೆಯ ಹವಳದ ಬಂಡೆಗಳು ಮತ್ತು ಸಮುದ್ರ ಜೀವಿಗಳನ್ನು ಹೊಂದಿದೆ. ಇದನ್ನು ‘ಭಾರತದ ಡೈವಿಂಗ್‌ನ ಹೃದಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.

ಯಾರೆಲ್ಲ ಸ್ಕೂಬಾ ಡೈವಿಂಗ್ ಮಾಡಬಹುದು?

ತೀವ್ರ ತರಹದ ಕಾಯಿಲೆ ಅಥವಾ ತೊಂದರೆ ಇರುವವರನ್ನು ಹೊರತುಪಡಿಸಿ ಉಳಿದೆಲ್ಲರೂ ಸ್ಕೂಬಾ ಡೈವಿಂಗ್ ಮಾಡಬಹುದಾಗಿದೆ. ವಯಸ್ಸಿನ ಬೇಧವಿಲ್ಲ. ನಿಮಗೆ ಈಜಲು ಬರಬೇಕೆಂದಿಲ್ಲ. ಅನುಭವಿ ತರಬೇತುದಾರರ ತಂಡ ನಮ್ಮನ್ನು ನೀರಿನಾಳಕ್ಕೆ ಕರೆದೊಯ್ದು ವಾಪಸ್ ಕರೆ ತರುತ್ತದೆ. ಇದಕ್ಕಾಗಿ ನುರಿತ ಸ್ಕೂಬಾ ತರಬೇತಿದಾರರು ಅರ್ಧ ಗಂಟೆಗಳ ಕಾಲ ಮಾಹಿತಿ ಮತ್ತು ತರಬೇತಿ ನೀಡುತ್ತಾರೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು