ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಈ ಹಕ್ಕಿ ನಿಮ್ಮ ಬಳಿ ಬಂದರೆ ತಲೆ ತಿರುಗಿ ಬಿದ್ದುಬಿಡುತ್ತೀರಿ!

ಮೆಜಾನ್ ಜೌಗು ಅರಣ್ಯ ಪ್ರದೇಶ, ಮ್ಯಾಂಗ್ರೋವ್ ಅರಣ್ಯಗಳಲ್ಲಿ ವಾಸಿಸುವ ದಕ್ಷಿಣ ಅಮೆರಿಕಾದ ಗಯಾನಾ ರಾಷ್ಟ್ರಪಕ್ಷಿಯಾಗಿರುವ ಹೋಟ್ಜಿನ್ ನಿಮ್ಮ ಬಳಿಯೇನಾದರೂ ಬಂದುಬಿಟ್ಟರೆ, ಅದರ ಮೈಯಿಂದ ಹೊಮ್ಮುವ ವಾಸನೆ ತಾಳಲಾರದೆ ತಲೆ ಗಿರಗಿಟ್ಲೆ ಹೊಡೆದು ನೀವು ಕೆಳಗೆ ಕುಸಿದು ಬಿಡಬಹುದು. ಇಲ್ಲವೇ, ಉಸಿರಾಡೋದೇ ಕಿರಿಕಿರಿ ಅನ್ನಿಸಿ ಕೊನೆಗೆ ಪೂರ್ತಿ ಹೊಟ್ಟೆಯನ್ನೇ ತೊಳೆಸಿಕೊಳ್ಳಲೂಬಹುದು!

ನೋಡೋಕೆ ರೆಕ್ಕೆ ಪುಕ್ಕಗಳಿಂದ ಆಕರ್ಷಕವಾಗಿರುವ ಈ ಹೋಟ್ಜಿನ್ ಶುದ್ದ ಪರ್ಣಾಹಾರಿ ಹಕ್ಕಿ. ಬರೀ ಎಲೆಯನ್ನೇ ತಿಂದು ಜೀವಿಸುವ ಹಕ್ಕಿಯಿದು. ಇದು ಅಗಿದು ನುಂಗಿದ ಎಲೆಯ ಚೂರುಗಳು ನೇರವಾಗಿ ಜಠರವನ್ನು ಸೇರುವ ಬದಲು ಜೀರ್ಣಾಂಗವ್ಯೂಹದ ಒಂದು ವಿಶಿಷ್ಟ ಕೋಶವನ್ನು ಸೇರುತ್ತವೆ. ಅಲ್ಲಿರುವ ವಿಶೇಷ ಜೀರ್ಣಕಾರಿ ಬ್ಯಾಕ್ಟಿರಿಯಾಗಳು ಎಲೆಯ ಚೂರುಗಳು ಕೊಳೆಯುವಂತೆ ಮಾಡುತ್ತವೆ. ಅನಂತರ ಆ ಆಹಾರ ಜಠರಕ್ಕೆ ಸಾಗಿಸಲ್ಪಟ್ಟು ಅಲ್ಲಿ ಜೀರ್ಣವಾಗುತ್ತದೆ.

ಹೀಗೆ ಆಹಾರ ಬ್ಯಾಕ್ಟಿರಿಯಾಗಳಿಂದ ಕೊಳೆಯುವಾಗ ಹಕ್ಕಿಯ ದೇಹದಿಂದ ಬರುವ ಕೊಳೆತ ಹಸಿಸೆಗಣಿ ಗೊಬ್ಬರದ ಅಸಹ್ಯ ವಾಸನೆಯಿಂದಾಗಿ ನಾವು ಹತ್ತಿರ ನಿಲ್ಲಲಾಗೋಲ್ಲ. ಇದಕ್ಕೆಂದೇ ಈ ಹಕ್ಕಿಗೆ ಗಬ್ಬು ಹಕ್ಕಿ ಎನ್ನುವ ಹೆಸರೂ ಇದೆ. ಕೆಲ ಪ್ರಾಣಿ ಪ್ರಪಂಚವೇ ವೈಶಿಷ್ಟ್ಯತೆಯಿಂದ ಕೂಡಿರುತ್ತವೆ. ಅಂಥವುಗಳ ಬಗ್ಗೆ ಕೇಳುವಾಗೆಲ್ಲ ಕೌತುಕ ನಮ್ಮ ಬಳಿ ಸುಳಿದಾಡುತ್ತದೆ. ಅಂಥ ಭಿನ್ನ ರೀತಿಯ ಸಾಲಿನಲ್ಲಿ ಬರುವ ಚಂದದ ಹಕ್ಕಿ ಹೋಟ್ಜಿನ್.

ಹೋಟ್ಜಿನ್‌ಗೆ ರೆಪ್ಟೈಲ್ ಬರ್ಡ್, ಸ್ಕಂಕ್ ಬರ್ಡ್, ಸ್ಟಿಂಕ್‌ಬರ್ಡ್, ಅಥವಾ ಕ್ಯಾಂಜೆ ಫೆಸೆಂಟ್ ಎಂಬಿತ್ಯಾದಿ ಹೆಸರುಗಳೂ ಇವೆ. ಒಪಿಸ್ಟೊಕೊಮಸ್ ಹೊಜಿನ್ ಇದರ ವೈಜ್ಞಾನಿಕ ಹೆಸರು. ಅಮೆಜಾನ್‌ನ ಮ್ಯಾಂಗ್ರೋವೇವ್ ಕಾಡುಗಳಲ್ಲದೆ ದಕ್ಷಿಣ ಆಫ್ರಿಕಾದ ಒರಿನೊಕೊ ಬೇಸಿನ್ ಪ್ರದೇಶದಲ್ಲೂ ಹೆಚ್ಚಾಗಿ ಕಾಣಸಿಗುತ್ತದೆ. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು