ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ಮುಡಿಗೆ ಚೊಚ್ಚಲ ಚಾಂಪಿಯನ್ಸ್ ಕಿರೀಟ!

ದಬಾಂಗ್ ಡೆಲ್ಲಿ ಕೆಸಿ ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ನಲ್ಲಿ ಚಾಂಪಿಯನ್ಸ್ ಕಿರೀಟ ಮುಡಿಗೇರಿಸಿಕೊಂಡಿದೆ. ಶುಕ್ರವಾರ (ಫೆಬ್ರವರಿ 25) ಶೆರಾಟನ್ ಗ್ರ್ಯಾಂಡ್ ಬೆಂಗಳೂರು ವೈಟ್ ಫೀಲ್ಡ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಪಿಕೆಎಲ್ ಸೀಸನ್ 8ರ ಫೈನಲ್ ನಲ್ಲಿ ಮಾಜಿ ಚಾಂಪಿಯನ್ಸ್ ತಂಡ ಪಾಟ್ನಾ ಪೈರೇಟ್ಸ್ ಸೋಲಿಸಿರುವ ಡೆಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಜಯಿಸಿದೆ.

ದಬಾಂಗ್ ಡೆಲ್ಲಿ ತಂಡ ಸೀಸನ್ ನ ಅತೀ ಬಲಿಷ್ಠ ತಂಡವೆನಿಸಿದ್ದ ಪಾಟ್ನಾ ಪೈರೇಟ್ಸ್ ತಂಡವನ್ನು 37-36ರ ಅಂತರದಲ್ಲಿ ಪರಾಭವಗೊಳಿಸಿತು. ಡೆಲ್ಲಿ ಪರ 14 ರೇಡ್ ಪಾಯಿಂಟ್ಸ್ ಸೇರಿಸಿದ ವಿಜಯ್ ಮಲಿಕ್ ಮತ್ತು 13 ರೇಡ್ ಪಾಯಿಂಟ್ಸ್ ಸೇರಿಸಿದ ನವೀನ್ ಕುಮಾರ್ ಗೆಲುವಿನ ರುವಾರಿಗಳೆನಿಸಿದರು.

ಡೆಲ್ಲಿ ಪರ ಸಂದೀಪ್ ನರ್ವಾಲ್ 2, ಮನ್ಜೀತ್ ಛಿಲ್ಲರ್ 2 ಪಾಯಿಂಟ್ಸ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಪಾಟ್ನಾ ಕೂಡ ತಕ್ಕ ಪೈಪೋಟಿ ನೀಡಿದ್ದು ಕಂಡು ಬಂತು. ತಂಡದ ರೇಡರ್ ಸಚಿನ್ 10, ಗುಮಾನ್ ಸಿಂಗ್ 9, ಶಾದ್ಲುಯ್ ಚಿಯಾನೆ 5, ಮೋನು 5, ಪ್ರಶಾಂತ್ ಕುಮಾರ್ ರೈ 2, ನೀರಜ್ ಕುಮಾರ್ 1 ಮತ್ತು ಸಜಿನ್ ಚಂದ್ರಶೇಖರ್ 1 ಅಂಕ ಸೇರಿಸಿ ಪೈಪೋಟಿಗೆ ಕಾರಣರಾದರು. 

ಪಂದ್ಯದ ಆರಂಭದಲ್ಲಿ ಪಾಟ್ನಾ ಮುನ್ನಡೆಯಲ್ಲಿತ್ತು. ಪ್ರಥಮಾರ್ಧ ಮುಕ್ತಾಯದ ಹೊತ್ತಿನಲ್ಲೂ ಪಾಟ್ನಾ ಮುನ್ನಡೆ ಕಾಯ್ದಿರಿಸಿಕೊಂಡಿತ್ತು. ಆದರೆ ದ್ವಿತೀಯಾರ್ಧದ ಕೊನೇ ಕ್ಷಣದಲ್ಲಿ ಡೆಲ್ಲಿಯ ವಿಜಯ್ ಮಲಿಕ್ ಅವರ ಸೂಪರ್ ರೇಡ್ ನಿಂದಾಗಿ ಡೆಲ್ಲಿಗೆ ಹೆಚ್ಚು ಅಂಕಗಳು ಸೇರ್ಪಡೆಯಾಯಿತಲ್ಲದೆ ತಂಡ ಮುನ್ನಡೆ ಪಡೆದುಕೊಂಡಿತು. ಅಂತಿಮವಾಗಿ ರೇಡ್ ಗೆ ತೆರಳಿದ ನವೀನ್ ಪೂರ್ತಿ ಸಮಯ ಮುಕ್ತಾಯದ ಹೊತ್ತಿಗೆ ತಂಡ 1 ಅಂಕ ಮುನ್ನಡೆಯಲ್ಲಿರುವಂತೆ ನೋಡಿಕೊಂಡರು. 

ಕಳೆದ ಸಾರಿಯೂ ಡೆಲ್ಲಿ ತಂಡ ಫೈನಲ್ ಗೆ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಡೆಲ್ಲಿ ನಿರಾಸೆ ಅನುಭವಿಸಿತ್ತು. ಈ ಪಂದ್ಯದಲ್ಲಿ ನವೀನ್  200 ರೇಡ್ ಪಾಯಿಂಟ್ಸ್ ಮೈಲಿಗಲ್ಲು ಸ್ಥಾಪಿಸುವ ಮೂಲಕ ಗಮನ ಸೆಳೆದರು. ಕಳೆದ ಸೀಸನ್ ನ ಫೈನಲ್ ನಲ್ಲಿ ಸೋತಾಗ ಕಣ್ಣೀರು ಹಾಕಿ ಆಘಾತ ತೋರಿಕೊಂಡಿದ್ದ ನವೀನ್ ಈ ಬಾರಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿ ಕ್ರೀಡಾಭಿಮಾನಿಗಳ ಹೃದಯ ಗೆದ್ದರು.

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು