ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ವಿದಾಯ: ಬಿಸಿಸಿಐಗೆ ಕುಟುಕಿದ ಕವಿ ರಾಜ್!
ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವ, ಮೈದಾನದ ಹೊರಗೆ-ಅಭಿಮಾನಿಗಳ ಎದುರು ಅಷ್ಟೇ ಸೌಜನ್ಯಶೀಲ ನಡೆ, ಕ್ರಿಕೆಟ್ ವಿಚಾರದಲ್ಲಿ ಅಪ್ಪಟ ಪ್ರತಿಭಾವಂತ, ಕ್ರಿಕೆಟ್ ಜಗತ್ತು ಕಿಂಗ್ ಕೊಹ್ಲಿ ಎಂದು ಪ್ರೀತಿಯಿಂದ ಕರೆಯುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತೀ ಯಶಸ್ವಿ ನಾಯಕ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಶನಿವಾರ (ಜನವರಿ 15) ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅಲ್ಲಿಗೆ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಮಾದರಿಗಳಿಗೆ ನಾಯಕರಾಗಿದ್ದ ಕೊಹ್ಲಿ ಮೂರೂ ಮಾದರಿಗಳಿಂದ ನಾಯಕತ್ವ ತ್ಯಜಿಸಿದಂತಾಗಿದೆ.
ಕೊಹ್ಲಿ ನಾಯಕತ್ವ ವಹಿಸಿದ್ದ 68 ಟೆಸ್ಟ್ ಪಂದ್ಯಗಳಲ್ಲಿ 40ರಲ್ಲಿ ಭಾರತ ಗೆದ್ದಿದೆ. ಇದರಲ್ಲಿ 17 ಟೆಸ್ಟ್ ಪಂದ್ಯಗಳಲ್ಲಿ ಭಾರತ ಸೋತಿದೆ ಮತ್ತು 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಇದೇ ಕಾರಣಕ್ಕೆ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ವಿಶ್ವದಲ್ಲೇ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ 4ನೇ ನಾಯಕರಾಗಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ವಿದಾಯ ಹೇಳುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಸಿಸಿಐಯ ರಾಜಕೀಯ ಮತ್ತು ದುರ್ನಡೆಗೆ ಅದ್ಭುತ ನಾಯಕನೊಬ್ಬ ಬಲಿಯಾಗಿದ್ದಾನೆ. ಪ್ರತಿಭಾನ್ವಿತ ನಾಯಕನಿಗೆ ಸಿಗಬೇಕಾದ ಗೌರವವೂ ಬಿಸಿಸಿಐ ಕೊಹ್ಲಿಗೆ ನೀಡಿಲ್ಲ ಎಂದು ಅಭಿಮಾನಿಗಳು ಬೇಸರ ತೋರಿಕೊಂಡಿದ್ದಾರೆ.
ಕನ್ನಡ ಚಿತ್ರ ಸಾಹಿತಿ ಕವಿ ರಾಜ್ ಕೂಡ ಕೊಹ್ಲಿ ಬಗ್ಗೆ ಮನ ಮುಟ್ಟುವ ಹಾಗೆ ಫೇಸ್ ಬುಕ್ ಪೋಸ್ಟ್ ಹಾಕಿಕೊಂಡಿದ್ದಾರೆ. ಕ್ರೀಡಾಂಗಣದ ಒಳಗೆ ಎಂಥ ಎದುರಾಳಿಗೂ ತಲೆ ಬಾಗದ ನೀವು ಕ್ರೀಡಾಂಗಣದ ಹೊರಗೂ ಮೇಲಾಧಿಕಾರಿಗಳಿಗೆ ಸಲಾಂ ಹೊಡೆದಿಲ್ಲ ಅನ್ನಿಸುತ್ತೆ. ಇದೇ ಕಾರಣಕ್ಕೆ ನಿಮ್ಮನ್ನು ಕ್ರಿಕೆಟ್ ಬೋರ್ಡ್ ಕಡೆಗಣಿಸಿದೆ ಎಂಬರ್ಥದಲ್ಲಿ ಕವಿರಾಜ್ ಪೋಸ್ಟ್ ಹಾಕಿಕೊಂಡಿದ್ದಾರೆ. ಜೊತೆಗೆ ಕೊಹ್ಲಿ ಅಭಿಮಾನಿಗಳಿಗೆ ಸ್ಫೂರ್ತಿ ನೀಡುವಂತ ಸಾಲುಗಳೂ ಪೋಸ್ಟ್ ಜೊತೆಗಿದೆ.
“ಬಣ್ಣದ ಮಾತುಗಳು , ಕೂದಲು ಸೀಳುವ ವಿಶ್ಲೇಷಣೆಗಳು , 'ಗುಣ'ಗಾನಗಳು ಬೇಕಿಲ್ಲ .
ನಿಮ್ಮ ರೆಕಾರ್ಡ್ಸ್( ಅಂಕಿ ಅಂಶಗಳು ) ಸಾರಿ ಹೇಳುತ್ತವೆ you are the best Captain.
ಕ್ರೀಡಾಂಗಣದ ಒಳಗೆ ಎಂತೆಂಥ ಎದುರಾಳಿಗಳಿಗೆ ತಲೆಬಾಗದ ನೀವು ಖಂಡಿತವಾಗಿಯೂ ಕ್ರೀಡಾಂಗಣದ ಹೊರಗೂ ಸೋ ಕಾಲ್ಡ್ ಬಾಸ್ ಗಳಿಗೂ ಡೊಗ್ಗು ಸಲಾಂ ಹೊಡೆದಿರುವುದಿಲ್ಲ. ಕೊಹ್ಲಿ ಓವರ್ ಅಗ್ರೆಸಿವ್ ಎಂದರೆ ಕೊಹ್ಲಿ ಅದ್ವಿತೀಯ ಸಾಧನೆ ಮಾಡಿದ್ದು ಆ ಓವರ್ ಅಗ್ರೆಸಿವ್ ಗುಣದಿಂದಲೇ . Just keep it up champ. ಎಲ್ಲಾ ಕ್ಷೇತ್ರದಲ್ಲೂ ನುಸುಳಿರುವ ರಾಜಕೀಯ , ಈಗೋ , ಬಾಸಿಸಂ ನಿಮ್ಮಂತ ಅಪ್ರತಿಮ ಮಹಾರಥಿಗೆ ನಾಯಕತ್ವದಿಂದ ಗೌರವಯುತ ವಿದಾಯ ನೀಡದಿರುವುದು ವಿಷಾದನೀಯ.
ಹೋಗಲಿ ಬಿಡಿ. ಇನ್ನು ಯಾವುದೇ ಹೊರೆಯಿಲ್ಲದೆ ನಿಮ್ಮ ಬ್ಯಾಟಿಂಗ್ ವೈಭವದಲ್ಲಿ ಕವರ್ ಡ್ರೈವ್ ಗಳು ಕಾವ್ಯವಾಗುವುದನ್ನು ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಕಾತರಿಸುತ್ತೇವೆ. King is always a King” ಎಂದು ಕವಿರಾಜ್ ಎಫ್ಬಿಯಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಭಾರತ 2-1ರಿಂದ ಸೋತಿತ್ತು. ಇದರ ಬೆನ್ನಲ್ಲೇ ಟೆಸ್ಟ್ ನಾಯಕತ್ವದಲ್ಲಿ ಬದಲಾವಣೆಯಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ, ಟೆಸ್ಟ್ ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.
ಟಿ20 ಮತ್ತು ಏಕದಿನ ಕ್ರಿಕೆಟ್ ನಾಯಕತ್ವವನ್ನು ಈ ಮೊದಲೇ ಕೊಹ್ಲಿ ಬಿಟ್ಟುಕೊಟ್ಟಿದ್ದರು. ವೈಟ್ ಬಾಲ್ ಕ್ರಿಕೆಟ್ ಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಈಗ ಟೆಸ್ಟ್ ನಾಯಕತ್ವದಿಂದಲೂ ಕೊಹ್ಲಿ ದೂರ ಸರಿದಿರುವುದರಿಂದ ಟೆಸ್ಟ್ ನಾಯಕತ್ವ ಯಾರ ಪಾಲಾಗಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಟೆಸ್ಟ್ ನಾಯಕತ್ವ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಗೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆಯಾದರೂ ಬಹುತೇಕ ರೋಹಿತ್ ಗೆ ನಾಯಕತ್ವದ ಸಿಗುವ ನಿರೀಕ್ಷೆ ಹೆಚ್ಚಾಗಿದೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
👍🏻
ಪ್ರತ್ಯುತ್ತರಅಳಿಸಿ