ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಾಣಿ ಪ್ರಪಂಚದ ಕಲಾಕಾರ ಇಂಜಿನಿಯರ್ ಜೀವಿಯಿದು!
ಪ್ರಾಣಿ ಜಗತ್ತಿನಲ್ಲೂ ಅದ್ಭುತ ಕಲಾಕಾರರಿದ್ದಾನೆ. ಸೊಗಸಾದ ಗೂಡು ನೇಯ್ದುಕೊಳ್ಳುವ ರೇಷ್ಮೆ ಹುಳುಗಳು, ಎಲೆಯನ್ನೇ ಮಡಚಿ ಮನ ಸೆಳೆಯುವ ಪುಟಾಣಿ ಮನೆ ನಿರ್ಮಿಸಿಕೊಳ್ಳುವ ಹಕ್ಕಿಗಳು, ಹಸಿಮಣ್ಣು ಎಂಜಲು ಸೇರಿಸಿ ಚೆಲುವಾದ ಹುತ್ತಗಳನ್ನು ರಚಿಸಿಕೊಳ್ಳುವ ಗೆದ್ದಲು ಹುಳುಗಳು ಹೀಗೆ ಪ್ರಾಣಿ ಪ್ರಪಂಚದಲ್ಲಿ ಹಲವು ಬಗೆಯ ಕಲಾಕಾರ ಜೀವಿಗಳಿವೆ. ಈ ಕಲಾಕಾರರಲ್ಲಿ ಬೀವರ್ ಗಳು ಮುಂಚೂಣಿಯಲ್ಲಿವೆ.
ನೋಡೋಕೆ ಇಲಿಯಂತೆ ಆದರೆ ಇಲಿಗಿಂತ ಕೊಂಚ ದೊಡ್ಡ ದೇಹ ಹೊಂದಿರುವ ಬೀವರ್ ಗಳು ವಿಶೇಷ ರೀತಿಯ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ. ಬೀವರ್ ಗಳ ಗೂಡಿನತ್ತ ಕಣ್ಣಾಯಿಸಿದರೆ ಅಲ್ಲಿ ಬೆರಗು ಹುಟ್ಟಿಸುವ ಕಲೆ, ತಂತ್ರಗಾರಿಕೆ ನಮ್ಮ ಹುಬ್ಬೇರಿಸುವಂತೆ ಮಾಡುತ್ತವೆ.
ಇಲಿಯನ್ನು ಹೋಲುವ ಒಂದು ವಿಶೇಷ ಪ್ರಬೇಧದ ಪ್ರಾಣಿ ಬೀವರ್. ಇದು ಇಲಿ ಜಾತಿಯಲ್ಲೇ ಎರಡನೇ ಅತೀದೊಡ್ಡ ಪ್ರಾಣಿಯಾಗಿದ್ದು, ಇವುಗಳಲ್ಲಿ ಕ್ಯಾಪಿಬೆರಾ ಇದಕ್ಕಿಂತ ದೊಡ್ಡ ಜಾತಿಯ ಪ್ರಾಣಿ ಎಂದು ಗುರುತಿಸಲ್ಪಟ್ಟಿದೆ. ಹರಿಯುವ ನದಿ, ಕಾಲುವೆ ಮತ್ತಿತರ ಜಲಾವೃತ ಪ್ರದೇಶಗಳಲ್ಲಿ ಬೀವರ್ ಗಳು ನೀರಿನಲ್ಲಿ ತಮ್ಮದೇ ರೀತಿಯ ಅಣೆಕಟ್ಟುಗಳನ್ನು ನಿರ್ಮಿಸಿ ತಮ್ಮ ಆವಾಸವನ್ನು ಉತ್ತಮ ತಾಂತ್ರಿಕತೆಯಿಂದ ತಯಾರು ಮಾಡಿಕೊಳ್ಳುತ್ತವೆ.
ಬೀವರ್ ಗಳು ಅಣೆಕಟ್ಟು ನಿರ್ಮಾಣಕ್ಕಾಗಿ ಪರಿಸರದಲ್ಲೇ ದೊರೆಯುವ ಮರದ ಸಣ್ಣ ತುಂಡುಗಳು, ಕಸ, ಕೆಸರನ್ನು ಬಳಸಿಕೊಳ್ಳುತ್ತವೆ. ಈ ಕಾರಣಕ್ಕಾಗಿಯೇ ಬೀವರ್ ಗಳನ್ನು ಪ್ರಾಣಿವರ್ಗದ ಇಂಜಿನಿಯರ್ ಗಳೆಂದು ಕರೆಯಲಾಗುತ್ತದೆ. ಬೀವರ್ ಗಳು ಸಾಮಾನ್ಯವಾಗಿ ನಿಶಾಚರಿಗಳಾಗಿದ್ದು, ನೀರು, ನೆಲದ ಮೇಲೆ ಸುಲಭವಾಗಿ ಓಡಾಡಬಲ್ಲವು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
👍🏻
ಪ್ರತ್ಯುತ್ತರಅಳಿಸಿ