ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಶೋಷಿತರ ಕತೆಯ ‘ಜೈ ಭೀಮ್’ ಸಿನಿಮಾಕ್ಕೆ ‘ಆಸ್ಕರ್ಸ್’ ಗೌರವ!

ಈಚಿನ ಭಾರತೀಯ ಸಿನಿಮಾಗಳಲ್ಲೇ ಹೊಸ ಅಲೆ ಎಬ್ಬಿಸಿದ್ದ ‘ಜೈ ಭೀಮ್’ ಸಿನಿಮಾಕ್ಕೆ ಆಸ್ಕರ್ಸ್ ಗೌರವ ಸಂದಿದೆ. ಆಸ್ಕರ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಜೈ ಭೀಮ್ ಸಿನಿಮಾದ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಆಸ್ಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆದ ಚೊಚ್ಚಲ ತಮಿಳು ಸಿನಿಮಾದ ವಿಡಿಯೋ ಎಂಬ ಗೌರವಕ್ಕೆ ‘ಜೈ ಭೀಮ್’ ಪಾತ್ರವಾಗಿದೆ.

ಬಟ್ಟೆ ತೊಡಲೇಬೇಕಲ್ಲ! (ಸುಬ್ಬಿ ಸಾಲು: ಬೋಲ್ಡ್ ಹುಡುಗಿ ಬರೆದ ಕವಿತೆ)

ತಮಿಳು ಭಾಷೆಯಲ್ಲಿ ನಿರ್ಮಾಣವಾಗಿದ್ದ ಜೈ ಭೀಮ್ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅಮೆಝಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಸಿನಿ ಪ್ರಿಯರಿಂದ ಸಿನಿಮಾಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಓವರ್ ದ ಟಾಪ್ (ಒಟಿಟಿ) ನಲ್ಲಿ ದಾಖಲೆ ಮಟ್ಟದಲ್ಲಿ ವೀಕ್ಷಣೆಯಾಗಿದ್ದ ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 9.3 ರೇಟಿಂಗ್ ಸಿಕ್ಕಿತ್ತು. ವೀಕ್ಷಕರಿಂದ 96 ಶೇಕಡಾದಷ್ಟು ಮೆಚ್ಚುಗೆಯೂ ಲಭಿಸಿತ್ತು.

ಯೂಟ್ಯೂಬ್ ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ

ಬುಡಕಟ್ಟು ಜನಾಂಗದ ಜನರ ಮೇಲಾಗುವ ದೌರ್ಜನ್ಯ, ಜಾತೀಯ ತಾರತಮ್ಯ, ಪೊಲೀಸರ ಕ್ರೌರ್ಯ ಮತ್ತು ಅನ್ಯಾಯಕ್ಕೀಡಾದವರಿಗೆ ನ್ಯಾಯ ಒದಗಿಸಲು ನಾಯಕನ ಹೋರಾಟದ ಕಥೆಯಿರುವ ಜೈ ಭೀಮ್ ಸಿನಿಮಾ ಮನಮುಟ್ಟುವಂತಿದೆ. ಜಸ್ಟೀಸ್ ಕೆ ಚಂದ್ರ ಅವರ ನೈಜ ಕಥೆಯಾಧರಿಸಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲಿಜೋಮೋಲ್ ಜೋಸ್ (ಸೆಂಗೆನಿ), ಕೆ ಮಣಿಕಂಠನ್ (ರಾಜಕನ್ನು), ರಾಜಿಶ ವಿಜಯನ್ (ಮೈತ್ರಿ) ನಟನೆ ಕೂಡ ಚಿತ್ರಕ್ಕೆ ಜೀವ ತುಂಬಿದೆ. ಟಿಜೆ ಜ್ಞಾನವೇಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪ್ಲ್ಯಾಸ್ಟಿಕ್ ಸುಟ್ಟರೆ ಬೂದಿ ಸಿಗೋದಿಲ್ಲ ಯಾಕ್ ಗೊತ್ತಾ?!

ಆಸ್ಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಲಿವುಡ್ ಸೇರಿದಂತೆ ವಿದೇಶಿ ಪ್ರಮುಖ ಚಿತ್ರಗಳ ಸಣ್ಣ ಸಣ್ಣ ವಿಡಿಯೋಗಳನ್ನು ಹಾಕಲಾಗಿದೆ. ಆದರೆ ಇದೇ ಮೊದಲ ಬಾರಿಗೆ ‘ಆಸ್ಕರ್ಸ್’ ಚಾನೆಲ್ ನಲ್ಲಿ ತಮಿಳು ಸಿನಿಮಾ ಜೈ ಭೀಮ್ ನ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಅಪ್ಲೋಡ್ ಆದ ಕೆಲವೇ ಹೊತ್ತಿನಲ್ಲಿ 272+ k ವಿಕ್ಷಣೆ ಆಗಿದೆ. 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು