ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಶೋಷಿತರ ಕತೆಯ ‘ಜೈ ಭೀಮ್’ ಸಿನಿಮಾಕ್ಕೆ ‘ಆಸ್ಕರ್ಸ್’ ಗೌರವ!
ಈಚಿನ ಭಾರತೀಯ ಸಿನಿಮಾಗಳಲ್ಲೇ ಹೊಸ ಅಲೆ ಎಬ್ಬಿಸಿದ್ದ ‘ಜೈ ಭೀಮ್’ ಸಿನಿಮಾಕ್ಕೆ ಆಸ್ಕರ್ಸ್ ಗೌರವ ಸಂದಿದೆ. ಆಸ್ಕರ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಜೈ ಭೀಮ್ ಸಿನಿಮಾದ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಆಸ್ಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆದ ಚೊಚ್ಚಲ ತಮಿಳು ಸಿನಿಮಾದ ವಿಡಿಯೋ ಎಂಬ ಗೌರವಕ್ಕೆ ‘ಜೈ ಭೀಮ್’ ಪಾತ್ರವಾಗಿದೆ.
ತಮಿಳು ಭಾಷೆಯಲ್ಲಿ ನಿರ್ಮಾಣವಾಗಿದ್ದ ಜೈ ಭೀಮ್ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅಮೆಝಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಸಿನಿ ಪ್ರಿಯರಿಂದ ಸಿನಿಮಾಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಓವರ್ ದ ಟಾಪ್ (ಒಟಿಟಿ) ನಲ್ಲಿ ದಾಖಲೆ ಮಟ್ಟದಲ್ಲಿ ವೀಕ್ಷಣೆಯಾಗಿದ್ದ ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 9.3 ರೇಟಿಂಗ್ ಸಿಕ್ಕಿತ್ತು. ವೀಕ್ಷಕರಿಂದ 96 ಶೇಕಡಾದಷ್ಟು ಮೆಚ್ಚುಗೆಯೂ ಲಭಿಸಿತ್ತು.
ಯೂಟ್ಯೂಬ್ ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ
ಬುಡಕಟ್ಟು ಜನಾಂಗದ ಜನರ ಮೇಲಾಗುವ ದೌರ್ಜನ್ಯ, ಜಾತೀಯ ತಾರತಮ್ಯ, ಪೊಲೀಸರ ಕ್ರೌರ್ಯ ಮತ್ತು ಅನ್ಯಾಯಕ್ಕೀಡಾದವರಿಗೆ ನ್ಯಾಯ ಒದಗಿಸಲು ನಾಯಕನ ಹೋರಾಟದ ಕಥೆಯಿರುವ ಜೈ ಭೀಮ್ ಸಿನಿಮಾ ಮನಮುಟ್ಟುವಂತಿದೆ. ಜಸ್ಟೀಸ್ ಕೆ ಚಂದ್ರ ಅವರ ನೈಜ ಕಥೆಯಾಧರಿಸಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲಿಜೋಮೋಲ್ ಜೋಸ್ (ಸೆಂಗೆನಿ), ಕೆ ಮಣಿಕಂಠನ್ (ರಾಜಕನ್ನು), ರಾಜಿಶ ವಿಜಯನ್ (ಮೈತ್ರಿ) ನಟನೆ ಕೂಡ ಚಿತ್ರಕ್ಕೆ ಜೀವ ತುಂಬಿದೆ. ಟಿಜೆ ಜ್ಞಾನವೇಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಪ್ಲ್ಯಾಸ್ಟಿಕ್ ಸುಟ್ಟರೆ ಬೂದಿ ಸಿಗೋದಿಲ್ಲ ಯಾಕ್ ಗೊತ್ತಾ?!
ಆಸ್ಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಲಿವುಡ್ ಸೇರಿದಂತೆ ವಿದೇಶಿ ಪ್ರಮುಖ ಚಿತ್ರಗಳ ಸಣ್ಣ ಸಣ್ಣ ವಿಡಿಯೋಗಳನ್ನು ಹಾಕಲಾಗಿದೆ. ಆದರೆ ಇದೇ ಮೊದಲ ಬಾರಿಗೆ ‘ಆಸ್ಕರ್ಸ್’ ಚಾನೆಲ್ ನಲ್ಲಿ ತಮಿಳು ಸಿನಿಮಾ ಜೈ ಭೀಮ್ ನ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಅಪ್ಲೋಡ್ ಆದ ಕೆಲವೇ ಹೊತ್ತಿನಲ್ಲಿ 272+ k ವಿಕ್ಷಣೆ ಆಗಿದೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್ಗಳು
ಪ್ರಚಲಿತ ಪೋಸ್ಟ್ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
👍🏻🙏🏻
ಪ್ರತ್ಯುತ್ತರಅಳಿಸಿ