ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಧೋನಿ ಹೆಸರಿನಲ್ಲಿರುವ ಈ 6 ದಾಖಲೆಗಳು ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ!
ಕ್ಯಾಪ್ಟನ್ ಕೂಲ್ ಎಂದು ಕರೆಯಲಾಗುವ ಮಹೇಂದ್ರ ಸಿಂಗ್ ಧೋನಿ, ಭಾರತ ಕ್ರಿಕೆಟ್ ತಂಡ ಕಂಡ ಸಾರ್ವಕಾಲಿಕ ಅತ್ಯುತ್ತಮ ನಾಯಕರಲ್ಲೊಬ್ಬರು. ಅವರಲ್ಲಿನ ಶಾಂತ ಗುಣ ಅನೇಕ ಸಾರಿ ಒತ್ತಡದ ಸಂದರ್ಭಗಳಲ್ಲೂ ಟೀಮ್ ಇಂಡಿಯಾ ಗೆಲ್ಲಲು ನೆರವು ನೀಡಿತ್ತು. ಇಕ್ಕಟ್ಟಿನ ಸಂದರ್ಭದಲ್ಲೂ ಧೋನಿ ಶಾಂತವಾಗಿ ಇರುತ್ತಿದ್ದಿದ್ದರಿಂದ ಎದುರಾಳಿ ತಂಡ ಗಲಿಬಿಲಿಗೆ ಒಳಗಾಗಿ ಗೆಲ್ಲುವ ಪಂದ್ಯವನ್ನೂ ಸೋತಿದ್ದೂ ಇದೆ.
ಆರಂಭಿಕ ದಿನಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಗಾಗಿ ಗಮನ ಸೆಳೆದಿದ್ದ ಎಂಎಸ್ ಧೋನಿ ಅನಂತರ ಬೆಸ್ಟ್ ಫಿನಿಷರ್ ಆಗಿ ಛಾಪು ಮೂಡಿಸಿದ್ದರು. ವಿಶ್ವದಲ್ಲೇ ಬೆಸ್ಟ್ ವಿಕೆಟ್ ಕೀಪರ್ ಎನಿಸಿರುವ ಧೋನಿ ನಾಯಕತ್ವದಲ್ಲಿ ಭಾರತ ತಂಡ ಎರಡು ವಿಶ್ವಕಪ್ ಗಳಲ್ಲದೆ ದಾಖಲೆಯ ಸಂಖ್ಯೆಯಲ್ಲಿ ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.
ಧೋನಿ ಹೆಸರಿನಲ್ಲಿ ಕೆಲವು ಅಪರೂಪದ ದಾಖಲೆಗಳಿವೆ. ಈ ದಾಖಲೆಗಳನ್ನು ಅಷ್ಟು ಸುಲಭವಾಗಿ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಅಂಥ 6 ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ.
1. ನಾಯಕರಾಗಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳು
ಎಂಎಸ್ ಧೋನಿ ಅವರು ಟೀಮ್ ಇಂಡಿಯಾಕ್ಕೆ ನಾಯಕರಾಗಿ ಒಟ್ಟು 331 ಅಂತಾರಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದ ರಿಕಿ ಪಾಂಟಿಂಗ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಪಾಂಟಿಂಗ್ ನಾಯಕರಾಗಿ ಒಟ್ಟಿಗೆ 324 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
2. 3 ಕ್ರಿಕೆಟ್ ಮಾದರಿಗಳಲ್ಲೂ ಅತ್ಯಧಿಕ ಸ್ಟಂಪಿಂಗ್
ವಿಕೆಟ್ ಕೀಪಿಂಗ್ ವಿಚಾರದಲ್ಲಿ ಎಂಎಸ್ ಧೋನಿಗೆ ಸರಿಸಾಟಿ ಆಟಗಾರನೇ ಇಲ್ಲ ಎಂದು ಕ್ರಿಕೆಟ್ ಜಗತ್ತು ಮಾತನಾಡಿಕೊಳ್ಳುತ್ತಿದೆ. ಕಾರಣ, ಧೋನಿಯ ಕೀಪಿಂಗ್ ಕೌಶಲ ಅಷ್ಟರ ಮಟ್ಟಿಗೆ ಅತ್ಯುತ್ತಮವಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಧೋನಿ ಒಟ್ಟಾರೆ 195 ಸಾರಿ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 139 ಸ್ಟಂಪಿಂಗ್ ದಾಖಲೆ ಹೊಂದಿದ್ದಾರೆ.
3. 6ಕ್ಕಿಂತ ಕೆಳ ಬ್ಯಾಟಿಂಗ್ ಕ್ರಮಾಂಕದಲ್ಲಿ ಅತ್ಯಧಿಕ ರನ್
ಮಾಹಿ ಸ್ಫೋಟಕ ಬ್ಯಾಟಿಂಗ್ ಗೆ ಹೆಚ್ಚು ಗುರುತಿಸಿಕೊಂಡವರು. 6ಕ್ಕಿಂತ ಕೆಳ ಕ್ರಮಾಂಕದಲ್ಲೇ ಹೆಚ್ಚಾಗಿ ಬ್ಯಾಟಿಂಗ್ ಗೆ ಬರುತ್ತಿದ್ದ ಧೋನಿ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಗಳನ್ನು ತಂಡಕ್ಕೆ ಕೊಡುಗೆ ನೀಡುತ್ತಿದ್ದರು. 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಅತೀ ಹೆಚ್ಚು ರನ್ ಬಾರಿಸಿರುವ ದಾಖಲೆ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಧೋನಿ ಹೆಸರಿನಲ್ಲಿ ಹೀಗೆ 10,268 ರನ್ ಗಳಿದ್ದರೆ, ಈ ಸಾಧನೆ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ 9,365 ರನ್ ಬಾರಿಸಿದ್ದಾರೆ.
4. 3 ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕಮಾತ್ರ ನಾಯಕ
ವಿಶ್ವ ಕ್ರಿಕೆಟ್ ನಲ್ಲಿ ತಂಡದ ನಾಯಕರಾಗಿ ಅತೀ ಹೆಚ್ಚು ಐಸಿಸಿ ಟ್ರೋಫಿಗಳನ್ನು ತಂಡಕ್ಕೆ ಗೆದ್ದುಕೊಟ್ಟ ಏಕಮಾತ್ರ ನಾಯಕ ಎಂಬ ದಾಖಲೆ ಧೋನಿ ಹೆಸರಿನಲ್ಲಿದೆ. ಭಾರತದ ನಾಯಕರಾಗಿ ಧೋನಿ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ, 2011ರಲ್ಲಿ ಐಸಿಸಿ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೀಗೆ ಒಟ್ಟು 3 ಐಸಿಸಿ ಟ್ರೋಫಿಗಳನ್ನು ಜಯಿಸಿದ್ದಾರೆ. ತಂಡದ ನಾಯಕರಾಗಿ ಯಾವುದೇ ಆಟಗಾರ ಇಷ್ಟು ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ.
5. ಅತೀ ಹೆಚ್ಚು ಟಿ20 ವಿಶ್ವಕಪ್ ಟೂರ್ನಿಗಳಿಗೆ ನಾಯಕತ್ವ
2007ರಲ್ಲಿನ ಆರಂಭಿಕ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಧೋನಿ ಮುನ್ನಡೆಸಿದ್ದರು. ಅದಾಗಿ ಇನ್ನೂ ಐದು ಬಾರಿ ಧೋನಿ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಮುನ್ನಡೆಸಿದ್ದಾರೆ. ಈ ದಾಖಲೆಯಿರುವುದು ಧೋನಿ ಹೆಸರಿನಲ್ಲಿ ಮಾತ್ರ.
6. ಏಕದಿನದಲ್ಲಿ ಅತೀ ಹೆಚ್ಚು ಬಾರಿ ಅಜೇಯ ಆಟ
ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಾರಿ ಅಜೇಯ (ಔಟಾಗದೆ) ಆಟ ನೀಡಿದ ದಾಖಲೆ ಧೋನಿ ಹೆಸರಿನಲ್ಲಿದೆ. ಒಡಿಐನಲ್ಲಿ ಎಂ.ಎಸ್.ಡಿ. ಒಟ್ಟಿಗೆ 84 ಸಾರಿ ಅಜೇಯರಾಗಿ ಉಳಿದಿದ್ದಾರೆ. ಅಷ್ಟೇ ಅಲ್ಲ, ಧೋನಿ ಅಜೇಯರಾಗಿ ಆಡಿದ 84 ಪಂದ್ಯಗಳಲ್ಲಿ ಭಾರತ ಕೇವಲ 2 ಸಾರಿ ಮಾತ್ರ ಪಂದ್ಯ ಸೋತಿದೆ ಅಂದರೆ ಧೋನಿ ಭಾರತ ತಂಡಕ್ಕೆ ಎಷ್ಟರ ಮಟ್ಟಿಗೆ ಪ್ರಮುಖ ಆಟಗಾರರಾಗಿದ್ದರು ಅನ್ನೋದನ್ನು ಊಹಿಸಿ. ಐಪಿಎಲ್ ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಕೂಡ ಅತೀ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಕಾಮೆಂಟ್‌ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🙏🏻👍🏻
ಪ್ರತ್ಯುತ್ತರಅಳಿಸಿ