ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ನ್ಯಾನೋ ಕತೆಗಳು

ಚಳಿ  

ಜಾತ್ರೇಲಿ ಚಳಿ ಅಂತ ಆ ನಾಲ್ವರು ಅಲ್ಲೇ ಅಂಗಡಿಯಲ್ಲಿ ಬಿಸಿ ಬಿಸಿ ಮಸಾಲಪೂರಿ, ಗೋಬಿ ಮಂಚೂರಿ ಸವಿದರು. ಅಂಗಡಿಯ ಮತ್ತೊಂದು ಮೂಲೇಲಿ ಆ ಪುಟ್ಟ ಬಾಲಕ ಮಾತ್ರ ಮಾಗಿಯ ಚಳಿ ಸಹಿಸಲಾರದೆ ಸಣ್ಣಗೆ ನರಳುತ್ತ ಕಂಪಿಸುತ್ತಲೇ ಇದ್ದ.



ಪಿಂಕ್ ಲಿಫ್‌ಸ್ಟಿಕ್ ಹುಡುಗಿ

ಜಾತ್ರೆಯ ಜನಜಂಗುಳಿಯಲ್ಲಿ ಆ ಪಿಂಕ್ ಲಿಫ್ಸ್ಟಿಕ್ ಹುಡುಗಿ 7ನೇ ಬಾರಿ ಎದುರಾದಾಗ ಈ ಹುಡುಗ ಹಿರಿಹಿರಿ ಹಿಗ್ಗಿದ. ಜಿಗಿದಾಡಿ ಸಂಭ್ರಮಿಸಿದ. ಆಕೆ ಹೂನಗು ಚೆಲ್ಲಿ ಜನಸಂದಣಿಯಲ್ಲಿ ಕರಗಿಹೋದಳು. ಈತನದು ಮತ್ತೆ ಪೆಚ್ಚು ಮೋರೆ.




ಪ್ರೀತಿ

ಅಣ್ಣ ಜೋರು ಹಸಿವೆಂದ. ಜಾತ್ರೆಯಲ್ಲಿ ನಿಂತಿದ್ದ ಐಸ್ಕ್ರೀಂ ಗಾಡಿಯತ್ತ ಕೈತೋರಿಸಿ ತಂಗಿ ಕೋನ್ ತಿನ್ನೋಣ ಅಂದಳು. ಅಣ್ಣ ಕಿಸೆ ತಡಕಾಡಿ ಆಕೆಗೊಂದು ಕೋನ್(ಐಸ್ಕ್ರೀಂ) ಕೊಡಿಸಿದ. ತಂಗಿ ಒಂದು ಕ್ಷಣ ಅಣ್ಣನ ಮುಖವನ್ನೇ ದಿಟ್ಟಿಸಿದಳು. 'ಛೆ ಛೇ.. ತಮಾಷೆಗೆ ಹೇಳಿದೆ, ನಂಗೆ ನಿಜಕ್ಕೂ ಹಸಿವಿಲ್ಲ,' ಅಣ್ಣ ಪ್ರತಿಕ್ರಿಯಿಸಿದ. ತಂಗಿಯ ಕಣ್ಣಂಚು ಹನಿಗೊಂಡಿತು.


-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು