ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಬಣ್ಣಬಣ್ಣದ ಕನಸುಗಳೊಂದಿಗೆ ಕಲರ್‌ಫುಲ್ಲಾಗಿ ಬದುಕೋಣ..

ದಾಸೀನದ ಪರಮಾವಧಿಯೆಂದರೆ ನಿದ್ದೆಯಲ್ಲಿ ಕನಸು ಕಾಣೋದು; ಆ ಕನಸಿನೊಳಗೂ ನಿದ್ದೆ ಮಾಡೋದು! ಅಂತ ಕನಸಿನ ಬಗ್ಗೆ ಇನ್‌ಬಾಕ್ಸಿಗೆ ಬಂದು ಬಿದ್ದ ಇಂಗ್ಲೀಷು ಮೆಸೇಜೊಂದನ್ನು ನೋಡಿ ನಿಜಕ್ಕೂ ಇದು ಗಮ್ಮತ್ತಿನ ಮೆಸೇಜಪ್ಪಾ ಅನ್ನಿಸ್ತು. ನಿದ್ದೆಯೊಳಗೊಂದು ಕನಸು ಕಂಡು, ಆ ಕನಸಿನೊಳಗೂ ನಿದ್ದೆ ಮಾಡೋನು ನಿದ್ದೇಲೆ ಬಾಕಿಯಾಗುತ್ತಾನೆ; ಎಕ್ಸಲೇಟರ್ ಒತ್ತಿದ ಹಾಗೆ ಭಾರೀ ಸ್ಪೀಡಿನಲ್ಲಿರುವ ಕಾಲ ಅವನನ್ನು ಬಿಟ್ಟು ಬಲುದೂರ ಸಾಗಿಬಿಡುತ್ತೆ. ಆಮೇಲೆ ಆತ ಚಿರನಿದ್ರೆಗೆ ಜಾರೋದೇ ಲೇಸು. ಯಾಕೇಂದ್ರೆ ಉದಾಸೀನವನ್ನಪ್ಪಿಕೊಂಡು ಸಮಯವನ್ನು ಹಾಸಿಗೇಲಿ ಕಳೆಯೋನು ಯಾವುದಕ್ಕೂ ಬಾರದಷ್ಟು ವೇಸ್ಟ್‌ಬಾಡಿ ಆಗಿಹೋಗುತ್ತಾನೆ, ಕಾಲವೇ ಅವನನ್ನ ವೇಸ್ಟ್‌ಬಾಡಿಗಳ ಸಾಲಿನಲ್ಲಿ ನಿಲ್ಲಿಸಿ ವ್ಯಂಗ್ಯವಾಡುತ್ತೆ! 

ಚಿಂದಿ ಆಯುವುದರಲ್ಲಿ ಮಗ್ನನಾಗಿದ್ದ ಪುಟ್ಟಬಾಲಕನೊಬ್ಬ ಒಂದು ಕ್ಷಣ ಸದ್ದು ಮಾಡುತ್ತ ತೇಲಿ ಹೋಗ್ತಿದ್ದ ವಿಮಾನದತ್ತ ದಿಟ್ಟಿಸಿ ನುಡಿಯುತ್ತಾನೆ, 'ನಾನೂ ಒಂದಿನ ಇದ್ರಲ್ಲಿ ಹಾರ್ಬೇಕು!. ಎಂಥಾ ಚಂದದ ಕನಸಲ್ವಾ ಇದು?! ಸಾಧನೆಯೆಡೆಗೆ ಹೆಜ್ಜೆ ಕಿತ್ತಿಡಬೇಕಾದರೆ ಇಂಥದ್ದೇ ಒಂದು ಕನಸು ನಮ್ಮ ಕಣ್ಣುತುಂಬಿರಬೇಕು. ಬರೀ ಕನಸ್ಸಿದ್ದರೆ ಸಾಲದು, ಉದಾಸೀನದ ಮನಸ್ಸಿಗೆ ಲಗಾಮು ಹಾಕಿ ಕನಸ್ಸಿನ ಬೆನ್ನು ಹಿಡಿದು ಹೊರಡಬೇಕು ನಾವು; ಕಂಡ ಕನಸ್ಸನ್ನು ನನಸಾಗಿಸುವಲ್ಲಿ ಶತಶ್ರಮ ಪಡಬೇಕು!


ಕನಸುಗಳಿರಬೇಕು ಕಣ್ಣತುಂಬ; ಆದರೆ ನಿದ್ದೆಯೊಳಗೊಂದು ನಿದ್ದೆ ಮಾಡುವ ಉದಾಸೀನದ ಹಾಳು ಕನಸು ಬೇಡ ನಮಗೆ. ಯಾಕೆಂದರೆ ಸಾಧನೆಗೆ ಶಾರ್ಟ್‌ಕಪ್‌ಗಳಿಲ್ಲ, ಎತ್ತರದಲ್ಲಿ ನಿಲ್ಲೋಕೆ ಅತೀಸುಲಭದ, ಅತ್ಯುತ್ತಮ ದಾರಿಯೊಂದೆ; ಹಾರ್ಡ್‌ವರ್ಕ್! ಸೊ, ಸಾಧಿಸಿ ಬೀಗಿನಕ್ಕಂತೆ, ನಮ್ಮನ್ನು ಹೀಯಾಳಿಸಿದವರ ಮುಂದೆ ಚಂದದ ಬದುಕು ಬದುಕಿದಂತೆ ಹೊನ್ನ ಕನಸೊಂದನ್ನು ಕಾಣೋಣ. ಆ ಕನಸ್ಸನ್ನು ನನಸಾಗಿಸಲು ಸೆಣಸಾಡೋಣ. ಏನಂತೀರಿ?

-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು