ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಕೊರೊನಾ ವೈರಸ್ ಎಂದರೇನು? ಸೋಂಕಿನ ಲಕ್ಷಣಗಳಾವುವು? ಪರಿಹಾರಗಳೇನು?


ಚೀನಾದ ವುಹಾನ್ ಸಿಟಿ, ಹುಬೈನಲ್ಲಿ ಮೊದಲು ಕಾಣಿಸಿಕೊಂಡ ಮಾರಕ ವೈರಸ್ ಸೋಂಕು ಕೊರೊನಾ ವೈರಸ್. 2019ರ ಡಿಸೆಂಬರ್ 31 ರಂದೇ ವಿಶ್ವ ಆರೋಗ್ಯ ಸಂಸ್ಥೆ (ವರ್ಲ್ಡ್ ಹೆಲ್ತ್ ಆರ್ಗನೈಸೇಶನ್) ಈ ಬಗ್ಗೆ ಮುನ್ನೆಚ್ಚರಿಕೆ ನೀಡಿತ್ತು. ಅದಾಗಿ ಒಂದು ವಾರದ ಬಳಿಕ ಅಂದರೆ ಜನವರಿ 7ರ ವೇಳೆಗೆ ಚೀನಾದ ವೈದ್ಯಾಧಿಕಾರಿಗಳು ತಾವು ಹೊಸ ವೈರಸನ್ನು ಗುರುತಿಸಿರುವುದಾಗಿ ಹೇಳಿದ್ದರು. ಯಾಕೆಂದರೆ ಈ ಸೋಂಕಿಗೆ ಸಂಬಂಧಿಸಿದ ವೈರಸ್, ನಮಗೆ ಗೊತ್ತಿರುವ ಇನ್ನಿತರೆ ಯಾವುದೇ ವೈರಸ್‌ಗಳಿಗೆ ಹೋಲಿಕೆಯಾಗುತ್ತಿರಲಿಲ್ಲ.

ಕೊರೊನಾವೈರಸ್‌ ಎಂದು ಸದ್ಯ ಕರೆಯಲಾಗುತ್ತಿರುವ ಈ ವೈರಸ್, ಶೀತ-ಜ್ವರಕ್ಕೆ ಕಾರಣವಾಗುವ ಸಾರ್ಸ್, ಮರ್ಸ್ ಕುಟುಂಬದಲ್ಲೇ ಬರುವ ಈ ಹೊಸ ವೈರಸ್‌ಗೆ ಸದ್ಯ '2019-nCoV' ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ಖಾಯಿಲೆ ನಿಜಕ್ಕೂ ಆತಂಕಕಾರಿ ಅನ್ನಿಸೋದು ಯಾವಾಗ ಎಂದರೆ ಆ ಖಾಯಿಲೆಗೆ ಸಂಬಂಧಿಸಿ ನಿಖರ ಔಷಧಿ ಇಲ್ಲದಾಗ.


ಚೀನಾದಲ್ಲಿ ಸಾಕಷ್ಟು ಮಂದಿ ಈ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರಿಗೆ ಉಪಚಾರ ಕ್ರಮಗಳನ್ನು ಕೈಗೊಂಡಿರುವ ಚೀನಾ, ಸೋಂಕಿತರು ಹೆಚ್ಚಿರುವ ಭಾಗಗಳಿಗೆ ಜನ ತೆರಳದಂತೆ, ಬೇರೆ ದೇಶಗಳಿಂದ ಆ ಜಾಗಕ್ಕೆ ಜನ ಬರದಂತೆ ತಡೆಯುತ್ತಿದೆ. ಆತಂಕಕಾರಿ ಸಂಗತಿಯೆಂದರೆ ಕೆಲ ವ್ಯಕ್ತಿಗಳಿಗೆ ಈ ಸೋಂಕು ತಗುಲಿರೋದು ಭಾರತದಲ್ಲೂ ಪತ್ತೆಯಾಗಿದೆ. ನವದೆಹಲಿ ಮತ್ತು ರಾಜಸ್ಥಾನದಲ್ಲಿ ಕೊರೊನಾವೈರಸ್ ಸೋಂಕಿರುವುದು ಕಂಡುಬಂದಿದೆ.

ಸೋಂಕು ಹಬ್ಬುವ ಮೂಲ
ಕೊರೊನಾ ವೈರಸ್ ಸಾಮಾನ್ಯವಾಗಿ ನಾಯಿ, ಬೆಕ್ಕುಗಳು, ಹಾವು, ಬಾವಲಿ ರೀತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸಮುದ್ರದ ಆಹಾರವನ್ನು ಮಾರಾಟ ಮಾಡಲಾಗುವ ಹ್ಯೂನಾನ್ ಸಮುದ್ರ ಆಹಾರ ಮಾರುಕಟ್ಟೆಯಿಂದ ಪ್ರಸ್ತುತ ಈ ಸೋಂಕು ಹರಡುತ್ತಿದೆ ಎಂದು ಚೀನಾದ ಜನರು ನಂಬಿದ್ದಾರೆ. ಹೀಗಾಗಿ ಹೊಸ ವರ್ಷದಿಂದಲೇ ಹ್ಯೂನಾನ್ ಮಾರುಕಟ್ಟೆಯನ್ನು ರದ್ದುಗೊಳಿಸಲಾಗಿದೆ.

ರೋಗದ ಲಕ್ಷಣಗಳೇನು?
1. ಶೀತವಾದಾಗ ಆಗುವ ವಿಪರೀತ ಸಿಂಬಳ ಸುರಿಯುವಿಕೆ
2. ಪುನಾರವರ್ತಿತ ವಿಪರೀತ ಜ್ವರ
3. ಜ್ವರ ಕಾಣಿಸಿಕೊಂಡ ನಂತರ ಧೀರ್ಘ ಕಾಲ ಕಾಡುವ ಕೆಮ್ಮು
4. ಮಕ್ಕಳು ಈ ಸೋಂಕಿಗೆ ಬೇಗ ಒಳಗಾಗುತ್ತಾರೆ
5. ದೊಡ್ಡವರಲ್ಲಿ ಸುಸ್ತು, ಆಯಾಸ, ತಲೆನೋವು ಕಂಡುಬರುತ್ತದೆ.
6. ಯಾವುದೇ ರೋಗ ಪ್ರತಿರೋಧಕ ಔಷಧಿ ಮಾತ್ರೆಗಳಿಗೆ ಸ್ಪಂದಿಸದಿರುವುದು
7. ಸಾರ್ಸ್(ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಡ್ರೋಮ್) ರೋಗದ ರೀತಿ ಕೊರೊನಾ ವೈರಾಣು ಸೋಂಕಿನಲ್ಲೂ ಉಸಿರಾಟ ತೀವ್ರ ಸಮಸ್ಯೆ ಎದುರಾಗುತ್ತದೆ.

ಪರಿಹಾರ ಕ್ರಮಗಳು
1. ನೋವು ಮತ್ತು ಜ್ವರಕ್ಕೆ ತೆಗೆದುಕೊಳ್ಳುವ ಔಷಧ/ಮಾತ್ರೆ ತೆಗೆದುಕೊಳ್ಳಿ (ಎಚ್ಚರಿಕೆ: ಮಕ್ಕಳಿಗೆ ಆಸ್ಪಿರಿನ್ ನೀಡಬೇಡಿ)
2. ನೋಯುತ್ತಿರುವ ಗಂಟಲು ಮತ್ತು ಕೆಮ್ಮನ್ನು ಕಡಿಮೆ ಮಾಡಲು ಕೋಣೆಯ ಹ್ಯುಮಿಡಿಫೈರ್ ಬಳಸಿ ಅಥವಾ ಬಿಸಿ ಶವರ್ ತೆಗೆದುಕೊಳ್ಳಿ.
3. ಗಂಟಲು ಒಣಗುವುದನ್ನು ತಡೆಗಟ್ಟುವುದು ಈ ವೈರಾಣು ಹತ್ತಿರ ಬರದಂತೆ ಮಾಡುವುದು ಸರಳ ವಿಧಾನವಾಗಿದೆ. ವ್ಯಕ್ತಿಯ ಗಂಟಲಿನ ತೆಳುವಾದ ಪದರ ಒಣಗಿದ್ದಲ್ಲಿ ಈ ವೈರಾಣು 10 ನಿಮಿಷದಲ್ಲೇ ದೇಹವನ್ನು ಪ್ರವೇಶಿಸಿ ತನ್ನ ದುಷ್ಪ್ರಭಾವ ಬೀರುತ್ತದೆ. ಹೀಗಾಗಿ ಗಂಟಲು ಒಣಗಲು ಬಿಡಬಾರದು.

ಮುನ್ನೆಚ್ಚರಿಕಾ ಕ್ರಮಗಳು
1. ಗಂಟಲು ಒಣಗುವುದಕ್ಕೂ ಮುನ್ನವೇ ದೊಡ್ಡವರು 50ರಿಂದ 80 ಸಿಸಿ ಬಿಸಿ ನೀರು ಮತ್ತು ಮಕ್ಕಳು 30ರಿಂದ 50 ಸಿಸಿ ಬೆಚ್ಚನೆಯ ನೀರು ಸೇವಿಸಬೇಕು. ಗಂಟಲು ಪಸೆ ಆರಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಗಂಟಲು ಒಣಗುವುದನ್ನು ತಪ್ಪಿಸಲು ಒಟ್ಟಿಗೆ ಸಾಕಷ್ಟು ನೀರು ಕುಡಿಯುವುದರಿಂದ ಏನು ಪ್ರಯೋಜನವಿಲ್ಲ ಎಂದು ಸಲಹೆ ಮಾಡಲಾಗಿದೆ.
2. ನೀವು ಎಲ್ಲೇ ಹೋಗಲಿ ಕೈಯಲ್ಲಿ ಒಂದು ಬಾಟಲ್ ನೀರು ಇರಲಿ. ಮಾ.30ರವರೆಗೂ ಜನರು ಸಾಧ್ಯವಾದಷ್ಟು ಜನಸಂದಣಿ ಪ್ರದೇಶಗಳಿಂದ ದೂರ ಇರುವುದು ಸೂಕ್ತ.

3. ಬಸ್, ರೈಲು ಮತ್ತಿತರ ಸಾರ್ವಜನಿಕ ವಲಯಗಳಲ್ಲಿ ಹೋಗಾಬೇಕಾದರೆ ಮುಖಕ್ಕೆ ಮಾಸ್ಕ್ ಧರಿಸಬೇಕು, ಸಾಧ್ಯವಾದಷ್ಟು ಉರಿದ, ಕರಿದ ಮತ್ತು ಮಸಾಲೆ ಪದಾರ್ಥಗಳಿಂದ ದೂರ ಇರಬೇಕು. ವಿಟಮಿನ್ ಸಿ ಜೀವಸತ್ವ ಸಮೃದ್ಧವಾಗಿರುವ ಆಹಾರಗಳನ್ನು ಯಥೇಚ್ಛವಾಗಿ ಸೇವಿಸಬೇಕು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು