ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಏಡಿಗಳಿಗಾಗಿಯೇ ಇಲ್ಲಿ ಸ್ಪೆಶಲ್ ಬ್ರಿಡ್ಜ್‌ಗಳಿವೆ, ಅಂಡರ್ ಪಾಸ್‌ಗಳಿವೆ!

ಮ್ಮಲ್ಲಿ, ಅಂದರೆ ಭಾರತದಲ್ಲಿ ಕಾಡುಗಳ ಮಧ್ಯೆ ರೋಡು ಮಾಡಿ, ರೈಲು ಕಂಬಿಗಳನ್ನು ನಿರ್ಮಿಸಿ ಸಾವಿರಾರು ಪ್ರಾಣಿಗಳ ಮಾರಣಹೋಮಕ್ಕೆ ಕಾರಣವಾಗುತ್ತಿರುವುದು ಇಂದು ನೆನ್ನೆಯ ಕತೆಯಲ್ಲ. ಕಾಡು ಪ್ರಾಣಿಗಳ ಮೀಸಲು ಪ್ರದೇಶದಲ್ಲಿ ವಾಹನಗಳ ಓಡಾಟಕ್ಕಿದ್ದ ನಿರ್ಬಂಧನ್ನು ತೆರವುಗೊಳಿಸಿ ವನ್ಯ ಮೃಗಗಳ ಸಾವು, ಆ ಮೂಕ ರೋದಕ ಕಂಡೂ ಅದಕ್ಕೆ ಮನ ಕರಗಿಕೊಳ್ಳದ ಗತಿಗೆಟ್ಟ ಆಡಳಿತ ವ್ಯವಸ್ಥೆ ನಮ್ಮದು.

ಪಶ್ಚಿಮ ಬಂಗಾಳದಲ್ಲಿ ಜಲ್’ಪೈಗುರಿಯಲ್ಲಿ ಧುಬ್ರಿ ಎಕ್ಸ್‌ಪ್ರೆಸ್ ಟ್ರೇನು ಗುದ್ದಿ, ಮೈಯಿಡೀ ಚರ್ಚ ಕಿತ್ತು ರೋದನೆ ಅನುಭವಿಸಿದ್ದ ಆನೆ ಅಸುನೀಗಿದ್ದ ಘಟನೆ ಕಳೆದ ಸೆಪ್ಟೆಂಬರ್ ಕೊನೇ ವಾರದಲ್ಲಿ ನಡೆದಿತ್ತು. ಅಲ್ಲಿ ಕಾಡ ನಡುವೆ ರೈಲು ಮಾರ್ಗ ನಿರ್ಮಿಸಿದ್ದಷ್ಟೇ ಅಲ್ಲ, ಕೇಂದ್ರ ರೈಲ್ವೇ ಇಲಾಖೆ ಆ ಕಾಡ ದಾರಿಯಲ್ಲಿ ರೈಲು ಚಲಿಸಲಿದ್ದ ವೇಗದ ಮಿತಿಯನ್ನು (ಗಂಟೆಗೆ 30 ಕಿ.ಮೀ) ತೆಗೆಸಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ರೈಲು ಚಲಿಸಲು ಆಜ್ಞೆ ಹೊರಡಿಸಿತ್ತು. ಇಂಥ ಅನಿಷ್ಟ ಆಡಳಿತ ನೀತಿಯಿಂದಲೇ ಭಾರತದಲ್ಲಿ ಕಾಡು ಪ್ರಾಣಿಗಳ ಮೂಕ ರೋದನೆಗೆ ಕೊನೆಯಿಲ್ಲವಾಗಿದೆ.

ಅದೇ ಆಸ್ಟ್ರೇಲಿಯಾದ ಕ್ರಿಸ್ಮಸ್ ಐಲೆಂಡ್‌ ಎಂಬ ಜಾಗವಿದೆ. ಇಲ್ಲಿ ಮಿಲಿಯಗಟ್ಟಲೆ ಕೆಂಪು ಏಡಿಗಳು ಸಮುದ್ರದಲ್ಲಿ ಮೊಟ್ಟೆ ಇಡಲು ಪ್ರತಿ ವರ್ಷ ಜನವರಿ ಆರರ ಸುಮಾರಿಗೆ ವಲಸೆ ಹೋಗುತ್ತವೆ. 116 ಮಿಲಿ ಮೀಟರ್ ಅಗಲವಿರುವ (4.6 ಇಂಚು) ಈ ಕೆಂಪು ಏಡಿಗಳು ವಲಸೆಗೆ ಸಹಾಯಕವಾಗಿ ಐದು ಮೀಟರ್ ಎತ್ತರದ ಸೇತುವೆ ಒಂದನ್ನು ಹಾಗು 31 ಕಡೆ ಅಂಡರ್ ಪಾಸ್‌ಗಳನ್ನು ನಿರ್ಮಿಸಲಾಗಿದೆ.


ಕೆಂಪು ಏಡಿಗಳು ಚೆಲ್ಲಾಪಿಲಿಯಾಗಿ ಎಲ್ಲಾ ದಿಕ್ಕುಗಳಲ್ಲಿ ಹರಿದಾಡುವುದು ಸಹಜ. ಅವುಗಳು ನಿರ್ದಿಷ್ಟ ಮಾರ್ಗದಲ್ಲಿ ಮಾತ್ರ ಹಾದು ಹೋಗುವಂತೆ ಮಾಡಲು ಸುಮಾರು 20 ಕಿಲೋ ಮೀಟರ್ನಷ್ಟು ಪ್ಲಾಸ್ಟಿಕ್ ತಡೆಗೋಡೆಗಳನ್ನು ಅಂಡರ್ ಪಾಸ್ ಮತ್ತು ಓವರ್ ಬ್ರಿಡ್ಜ್‌ಗಳ ಇಕ್ಕೆಲಗಳಲ್ಲಿ ಹಾಕಿ ಅನುವು ಮಾಡಿಕೊಡಲಾಗಿದೆ.


ಈ ಕ್ರಿಸ್ಮಸ್ ಐಲೆಂಡ್‌ನಲ್ಲಿ ಹಲವು ವರ್ಷಗಳ ಅಂದಾಜು 44 ಮಿಲಿಯನ್ ವಯಸ್ಕ ಕೆಂಪು ಏಡಿಗಳು ಜೀವಿಸಿದ್ದ ಬಗ್ಗೆ ದಾಖಲೆಗಳಿವೆ. ವನ್ಯ ಜೀವಿಗಳ, ಜಲಚರಗಳ, ಕಾಡುಗಳ ಅಳಿವಿಗೆ ಮಾನವನ ಕಾಣಿಕೆ ಬಹಳ ದೊಡ್ಡದಲ್ಲವೆ? ಹಾಗಾಗಿ ಇಲ್ಲೊಂದು ಕಡೆ ಜೀವಿಗಳ ಉಳಿವಿಗೆ ಹೊಸ ಐಡಿಯಾ ಮಾಡಲಾಗಿದೆ. ಒಳ್ಳೇದೇ ನೋಡಿ. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು