ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಸತ್ತಾಗ ದೇಹದಿಂದ ದುರ್ನಾತ ಬರೋದ್ಯಾಕೆ?!

ಅದು ಮನುಷ್ಯನಾಗಿರಲಿ ಅಥವಾ ಪ್ರಾಣಿಗಳಾಗಿರಲಿ; ದೇಹ ನಿರ್ಜೀವ ಸ್ಥಿತಿಗೆ ಹೋದ್ಮೇಲೆ ಆ ದೇಹದಿಂದ ಸಹಿಸಲಾಗದ ವಾಸನೆ ಬರುತ್ತೆ. ಯಾವುದೇ ಜೀವಿ ಬದುಕಿದ್ದಷ್ಟು ಕಾಲ ಬಾರದ ದುರ್ಗಂಧ, ಸತ್ತಾಗ ಯಾಕೆ ದೇಹದಿಂದ ಹೊರಹೊಮ್ಮುತ್ತೆ ಅಂತ ಯೋಚಿಸಿದ್ರೆ ಕುತೂಹಲ ಹುಟ್ಟುತ್ತೆ ಅಲ್ವಾ? ನಿರ್ಜೀವ ದೇಹದಿಂದ ದುರ್ನಾತ ಬರೋದ್ಯಾಕೆ ಅನ್ನೋ ಪ್ರಶ್ನೆಗೆ ಸೈನ್ಸ್ ಲೋಕದಲ್ಲಿ ಉತ್ತರವಿದೆ.

ಮನುಷ್ಯರೂ ಸೇರಿದಂತೆ ಭೂಮಿಯ ಸಕಲ ಜೀವಿಗಳ ದೇಹದಲ್ಲಿ ಅನೇಕ ಬಗೆಯ ರಾಸಾಯನಿಕಗಳಿರುತ್ತವೆ. ಬಗೆ ಬಗೆಯ ಬ್ಯಾಕ್ಟಿರಿಯಾಗಳೂ ಇರುತ್ತವೆ. ಪರಾವಲಂಬಿ ಜೀವಿಗಳಾದ ಬ್ಯಾಕ್ಟಿರಿಯಾಗಳು ಮೃತ ದೇಹದ ಮೇಲೆ ದಾಳಿ ಮಾಡುವಾಗ ಅವು ಆ ದೇಹದಲ್ಲಿರುವ ವಿವಿಧ ರಾಸಾಯನಿಕಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ. ಹೀಗೆ ಬ್ಯಾಕ್ಟಿರಿಯಾಗಳು ವಿವಿಧ ರಾಸಾಯನಿಕಗಳನ್ನು ಮಾರ್ಪಾಡು ಮಾಡಿಕೊಳ್ಳುವಾಗ ದುರ್ಗಂಧ ಹೊಮ್ಮಿಸುವ ಗಂಧಕ, ಪಾಸ್ಪರಸ್ ಮತ್ತು ನೈಟ್ರೋಜನ್ ನಂಥ ಪದಾರ್ಥಗಳು ಬಿಡುಗಡೆಯಾಗುತ್ತವೆ. ಇವೇ ನಿರ್ಜೀವ ದೇಹದಲ್ಲಿ ದುರ್ಗಂಧ ಹೊಮ್ಮಲು ಕಾರಣವಾಗುತ್ತವೆ.

ಪ್ರಾಣ ಇರುವವರೆಗೂ ಬ್ಯಾಕ್ಟಿರಿಯಾಗಳ ದಾಳಿಯನ್ನು ತಡೆಗಟ್ಟಲು ನಮ್ಮ ದೇಹದಲ್ಲಿ ರಕ್ಷಣಾ ವ್ಯವಸ್ಥೆ ಇರುತ್ತೆ. ಸತ್ತ ಮೇಲೆ ದೇಹದ ರಕ್ಷಣಾ ವ್ಯವಸ್ಥೆ ದುರ್ಬಲವಾಗೋದ್ರಿಂದ ಆಗ ಬ್ಯಾಕ್ಟಿರಿಯಾಗಳ ಕಾರುಬಾರು ಜೋರಾಗುತ್ತೆ; ಹೀಗೆ ನಿರ್ಜೀವ ದೇಹದಿಂದ ದುರ್ನಾತ ಬರಲಾರಂಭಿಸುತ್ತೆ!

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು