ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಾಮಾನ್ಯ ಜ್ಞಾನಕ್ಕೆ ನೋಡಲೇಬೇಕಾದ 10 ಅಚ್ಚರಿಯ ಸಂಗತಿಗಳಿವು!
ನಾವೆಲ್ಲರೂ ಆಗಾಗ ಹೆಡ್ ಫೋನ್ ಗಳನ್ನು ಬಳಸಿಕೊಂಡು ಸಾಂಗು, ವಿಡಿಯೋಸ್ ನೋಡ್ತಿರ್ತೀವಿ. ಹೀಗೆ ಹೆಡ್ ಫೋನ್ ಗಳನ್ನು ಬಳಸೋದ್ರಿಂದ ಕಿವಿಯಲ್ಲಿ ಬ್ಯಾಕ್ಟಿರಿಯಾಗಳ ಸಂಖ್ಯೆ ಹೆಚ್ಚುತ್ತವೆ. ಬರೀ 1 ಗಂಟೆ ನೀವು ಹೆಡ್ ಫೋನ್ ಬಳಸಿದ್ರೂ ಸಾಕು; ನಿಮ್ಮ ಕಿವಿಯಲ್ಲಿನ ಬ್ಯಾಕ್ಟಿರಿಯಾಗಳ ಸಂಖ್ಯೆ 700 ಪಟ್ಟು ಹೆಚ್ಚುತ್ತವೆ ಅಂದ್ರೆ ನೀವು ನಂಬಲೇಬೇಕು.
2. ಒಲಿಂಪಿಕ್ ನಲ್ಲಿ ಪೇಟಿಂಗ್, ಸಂಗೀತ ಕೂಡ ಸ್ಪರ್ಧೆಯಾಗಿತ್ತು!ಸಾಮಾನ್ಯವಾಗಿ ಆಟೋಟಗಳೇ ಹೆಚ್ಚಿರುವ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸುವ ಬಗ್ಗೆ ಚರ್ಚೆಗಳಾಗ್ತಿವೆ. ಆದ್ರೆ ನಿಮಗ್ಗೊತ್ತಾ? ಒಂದು ಕಾಲದಲ್ಲಿ ಪೇಟಿಂಗ್, ಮ್ಯೂಸಿಕ್, ಶಿಲ್ಪಕಲೆ ಕೂಡ ಒಲಿಂಪಿಕ್ಸ್ ಸ್ಪರ್ಧೆಗಳ ಭಾಗವಾಗಿತ್ತು. 1912ರಿಂದ 1948ರ ವರೆಗೂ ಕಲಾವಿದರು ಪೇಟಿಂಗ್, ಮ್ಯೂಸಿಕ್, ಶಿಲ್ಪಕಲೆಗಳಿಗಾಗಿ ಪದಕಗಳನ್ನು ಗೆಲ್ಲುತ್ತಿದ್ರು.
3. ಬೇಸಗೆಯಲ್ಲಿ ಎಫಿಲ್ ಟವರ್ ಬೆಳೆಯುತ್ತೆಫ್ರಾನ್ಸ್ ನ ಪ್ಯಾರೀಸ್ ನಲ್ಲಿರುವ ವಿಶ್ವವಿಖ್ಯಾತ ಎಫಿಲ್ ಟವರು ಬೇಸಗೆಯಲ್ಲಿ ಎತ್ತರಕೇರುತ್ತದೆ. ಅಂದ್ರೆ, ಬೇಸಗೆಯಲ್ಲಿ ತಾಪಮಾನದ ಕಾರಣ ಮಾಮೂಲಿಗಿಂತ 15 ಸೆಂಟಿಮೀಟರ್ ಅಂದ್ರೆ ಸುಮಾರು 6 ಇಂಚಿನಷ್ಟು ಎಫಿಲ್ ಟವರ್ ಬೆಳೆಯುತ್ತೆ. ಉಷ್ಣತೆಯ ಹಿಗ್ಗುವಿಕೆಯ ಕಾರಣ ಬೇಸಗೆಯಲ್ಲಿ ಎಫಿಲ್ ಟವರ್ ನ ಕಬ್ಬಿಣ ಹಿಗ್ಗುವುದರಿಂದ ಟವರ್ ನ ಉದ್ದ ಹೆಚ್ಚುತ್ತೆ.
4. ಸೀಗಡಿಗಳ ಹೃದಯವಿರೋದು ತಲೆಯಲ್ಲಿ!ಹೆಚ್ಚಿನ ಪ್ರಾಣಿಗಳಿಗೆ ದೇಹದಲ್ಲಿ ಹೃದಯವಿದ್ರೆ, ಸೀಗಡಿಗಳಿಗೆ ತಲೆಯಲ್ಲಿ ಹೃದಯವಿರುತ್ತೆ. ಸೀಗಡಿಗಳು ತೇಲುವ ಜಲಚರಗಳಾಗಿರೋದ್ರಿಂದ ಅವರುಗಳಿಗೆ ಅಪದಮನಿಗಳು ಅಂದ್ರೆ ಆರ್ಟರೀಸ್ ಇರೋದಿಲ್ಲ.
5. ಡಾಲ್ಫಿನ್ ಗಿಂತ ಸ್ಲೋತ್ಸ್ ಹೆಚ್ಚು ಕಾಲ ಉಸಿರು ಬಿಗಿಹಿಡಿಯುತ್ತವೆನೀರಿನಲ್ಲಿರುವ ಡಾಲ್ಫಿನ್ ಗಳು 10 ನಿಮಿಷಗಳಿಗೊಮ್ಮೆ ನೀರಿನ ಮೇಲೆ ಬಂದು ಉಸಿರು ತೆಗೆದುಕೊಳ್ಳುತ್ತವೆ. ಅಂದ್ರೆ ಡಾಲ್ಫಿನ್ ಗಳು 10 ನಿಮಿಷಗಳ ಕಾಲ ಉಸಿರು ಹಿಡಿದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದ್ರೆ, ಮರಗಳಲ್ಲಿ ನೇತಾಡುವ ಸಾಧು ಪ್ರಾಣಿ ಸ್ಲೋತ್ಸ್ ಬರೋಬ್ಬರಿ 40 ನಿಮಿಗಳ ಕಾಲ ಉಸಿರನ್ನು ಬಿಗಿ ಹಿಡಿದುಕೊಳ್ಳಬಲ್ಲವು.
6. ಶುಕ್ರಗ್ರಹ ಮಾತ್ರ ಕ್ಲಾಕ್ ವೈಸ್ ತಿರುಗುತ್ತೆಭೂಮಿ ಸೇರಿದಂತೆ ಎಲ್ಲಾ ಗ್ರಹಗಳು ಆ್ಯಂಟಿಕ್ಲಾಸ್ ವೈಸ್ ಅಂದ್ರೆ ಗಡಿಯಾರ ತಿರುಗುವುದಕ್ಕೆ ವಿರುದ್ಧವಾಗಿ ತಿರುಗಿದ್ರೆ, ಶುಕ್ರಗ್ರಹ ಮಾತ್ರ ಕ್ಲಾಕ್ ವೈಸ್ ಅಂದ್ರೆ ಗಡಿಯಾರ ತಿರುಗುವ ರೀತಿ ತಿರುಗುತ್ತೆ.
7. ನಾಲ್ಕು ದೇಶಗಳ ರಾಷ್ಟ್ರಗೀತೆಯಲ್ಲಿ ಪದಗಳೇ ಇಲ್ಲ!ಬಹುತೇಕ ದೇಶಗಳ ರಾಷ್ಟ್ರಗೀತೆಯಲ್ಲಿ ಪದಕಗಳಿರುತ್ತವೆ. ಭಾರತದ ರಾಷ್ಟ್ರಗೀತೆಯಲ್ಲಿ ಅಧಿಕೃತ ಗೀತೆರಚನೆಯಿದೆ. ಆದ್ರೆ ಬೋಸ್ನಿಯಾ, ಹರ್ಝೆಗೊವಿನಾ, ಕೊಸೊವೊ ಮತ್ತು ಸ್ಯಾನ್ ಮಾರಿನೋ ರಾಷ್ಟ್ರಗೀತೆಗಳಿಗೆ ಅಧಿಕೃತ ಗೀತರಚನೆಯಿಲ್ಲ.
8. ಬೆಕ್ಕಿನ ಮೂತ್ರ ಬ್ಲ್ಯಾಕ್ ಲೈಟ್ ನಲ್ಲಿ ಹೊಳೆಯುತ್ತೆಪಾರ್ಟಿ, ಪಬ್ ಗಳಲ್ಲಿ ಬಳಸ್ತಾರಲ್ವಾ ಬ್ಲ್ಯಾಕ್ ಲೈಟ್, ಅದನ್ನು ತನಿಖೆಯ ವೇಳೆ ಮಾನವ ದೇಹದ ದ್ರವ ಪತ್ತೆಹಚ್ಚಲು ಬಳಸ್ತಾರೆ. ಆದ್ರೆ ಈ ಬ್ಕ್ಯಾಕ್ ಲೈಟ್ ನಲ್ಲಿ ಬೆಕ್ಕಿನ ಮೂತ್ರ ಹೆಚ್ಚು ಪ್ರಖರವಾಗಿ ಹೊಳೆಯುತ್ತೆ. ಯಾಕಂದ್ರೆ, ಬೆಕ್ಕಿನ ಮೂತ್ರದಲ್ಲಿ ಫಾಸ್ಪರಸ್ ಅಂದ್ರೆ ರಂಜಕದ ಅಂಶವಿರುತ್ತೆ.
9. ಗೂಗಲ್ ಚಿತ್ರಗಳಿಗೆ ನಟಿ ಜೆನಿಫರ್ ಲೋಪೆಝ್ ಸ್ಫೂರ್ತಿ!ನಾವೀಗ ಗೂಗಲ್ ನಲ್ಲಿ ಏನೇನೋ ಚಿತ್ರಗಳನ್ನು ಹುಡುಕ್ತಿರ್ತೀವಿ. ಆದ್ರೆ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಮೊದಲ ಬಾರಿಗೆ ಚಿತ್ರಗಳು ಬರೋದಕ್ಕೆ ಕಾರಣ ಯಾರುಗೊತ್ತ? ಅಮೆರಿಕನ್ ಸಿಂಗರ್, ನಟಿ ಜೆನಿಫರ್ ಲೋಪೆಝ್. 2000ರ ಗ್ರಾಮಿ ಸಮಾರಂಭದ ವೇಳೆ ಜೆನಿಫರ್, ವಿಭಿನ್ನ ಡ್ರೆಸ್ ಹಾಕಿದ್ರು. ಹೀಗಾಗಿ ಆಕೆಯ ಫೋಟೋಗಳಿಗಾಗಿ ಅನೇಕ ನೆಟ್ಟಿಗರು ಜಾಲತಾಣದಲ್ಲಿ ಹುಡುಕಾಟ ನಡೆಸಿದ್ರು. ಇದೇ ಗೂಗಲ್ ಇಮೇಜಸ್ ಬರಲು ಮುಂದೆ ಸ್ಫೂರ್ತಿಯಾಯ್ತು.
10. ವಾಲ್ಟ್ ಡಿಸ್ನಿಗೆ ಅತ್ಯಧಿಕ ಅಕಾಡೆಮಿ ಪ್ರಶಸ್ತಿಗಳುದ ವಾಲ್ಟ್ ಡಿಸ್ನಿ ಅಮೆರಿಕನ್ ಮಲ್ಟಿನೇಶನ್ ಮೀಡಿಯಾ ಕಂಪನಿಯಿದೆಯಲ್ಲ? ಅದರ ಸಂಸ್ಥಾಪಕ, ಅಮೆರಿಕನ್ ಫಿಲ್ಮ್ ಪ್ರೊಡ್ಯೂಸರ್ & ವಾಯ್ಸ್ ಆಕ್ಟರ್ ವಾಲ್ಟ್ ಡಿಸ್ನಿ ಅತ್ಯಧಿಕ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಅವರ ದ ಹೌಸ್ ಆಫ್ ಮೌಸ್ ಅನಿಮೇಶನ್ ಸೀರೀಸ್ 26 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿತ್ತು. ಅಲ್ಲದೆ ಬರೋಬ್ಬರಿ 59 ಬಾರಿ ಆಸ್ಕರ್ ಗೆ ನಾಮಿನೇಟ್ ಆಗಿತ್ತು.
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು











ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ