ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಪಂಚದ ದುಬಾರಿ ಮಾವುಗಳಿವು.. ಇದರ ಬೆಲೆಯೆಷ್ಟು ಗೊತ್ತಾ?!
ನೀವು ಮಿಯಾಝಾಕಿ ಮಾವುಗಳ ಬಗ್ಗೆ ಕೇಳಿದ್ದೀರಾ? ನೀವೊಂದು ವೇಳೆ ಸೋಷಿಯಲ್ ಮೀಡಿಯಾವನ್ನು ಹೆಚ್ಚಾಗಿ ಗಮನಿಸ್ತಿರುವವರು ಆಗಿದ್ರೆ, ನೀವು ಈ ಮಿಯಾಝಾಕಿ ಮಾವಿನ ಬಗ್ಗೆ ಕೇಳಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಂದ್ಹಾಗೆ, ಈ ಮಾವಿಗೆ ಜಗತ್ತಿನ ಅತೀ ದುಬಾರಿ ಮಾವು ಎನ್ನುವ ಖ್ಯಾತಿಯೂ ಇದೆ.
ಇತ್ತೀಚೆಗೆ ANIನಲ್ಲಿ ಹಾಕಲಾಗಿದ್ದ ಪೋಸ್ಟ್ ಒಂದರಲ್ಲಿ, ವೆಸ್ಟ್ ಬೆಂಗಾಲ್ನ ಸಿಲಿಗುರಿಯಲ್ಲಿ ನಡೆದ 7ನೇ ಮಾವಿನ ಉತ್ಸವದಲ್ಲಿ ಪ್ರದರ್ಶಿಸಲಾದ ವಿಶ್ವದ ಅತ್ಯಂತ ದುಬಾರಿ ಮಿಯಾಝಾಕಿ ಮಾವಿನ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು 2.75 ಲಕ್ಷ ರೂಪಾಯಿಯಷ್ಟಿದೆ ಅಂತ ಬರೆಯಲಾಗಿತ್ತು. ಈ ಮಿಯಾಝಾಕಿ ಮಾವಿನ ಬೆಲೆ ಅದೆಷ್ಟು ದುಬಾರಿ ಅನ್ನೋದನ್ನು ನೀವು ಇದರಲ್ಲೇ ಅರ್ಥ ಮಾಡಿಕೊಳ್ಳಬಹುದು.
.jpeg)
ಸಾಮಾನ್ಯವಾಗಿ ಜಪಾನ್ನಲ್ಲಿ ಕಾಣಸಿಗುವ ಈ ಮಿಯಾಝಾಕಿ ಮಾವಿನ ಹಣ್ಣನ್ನು ಸದ್ಯ ಭಾರತದಲ್ಲಿಯೂ ಕೆಲವೆಡೆ ಬೆಳೆಸಲಾಗ್ತಿದೆ. ವೆಸ್ಟ್ ಬೆಂಗಾಲ್ನ ದುಬ್ರಾಜ್ಪುರ್ನಲ್ಲಿ ಈ ಮಾವಿನ ತೋಟವಿದ್ದು, ಈ ತೋಟ ಪ್ರವಾಸಿಗರನ್ನು ಆಕರ್ಷಿಸ್ತಿದೆ. ಸಾಮಾನ್ಯವಾಗಿ ಏಪ್ರಿಲ್-ಆಗಸ್ಟ್ನಲ್ಲಿ ಈ ಹಣ್ಣಿನ ಇಳುವರಿ ಜಾಸ್ತಿ ಅಂತ ಹೇಳಲಾಗ್ತಿದೆ.
ಮಿಯಾಝಾಕಿ ಮಾವು ಪಕ್ವವಾಗುತ್ತಾ ಬಂದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ಹಣ್ಣು ಸುಮಾರು 350 ಗ್ರಾಮ್ ತೂಗುವ ಈ ಹಣ್ಣಿಗೆ ಭಾರತದಲ್ಲಿ ಕೆಜಿಗೆ 3 ಲಕ್ಷದವರೆಗೂ ಬೆಲೆಯಿದೆ ಅಂದರೆ ನೀವು ನಂಬಲೇಬೇಕು.
ಪ್ರಚಲಿತ ಪೋಸ್ಟ್ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
.jpeg)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ