ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಾಂಗ್ಸು ಕೇಳುವಾಗ ಹೀಗಾಗೋದ್ಯಾಕೆ?!
ಹೆಡ್ಫೋನನ್ನು ಹಾಗೇ ಕಿವೀಲಿಟ್ಕೊಂಡು ಕಣ್ಮುಚ್ಚಿದ್ರೆ ಸಾಕು; ಆಹಾ.. ಕಿವಿಯೊಳಗೆ ಸಾಂಗ್ಸು, ಮನದೊಳಗೆ ಫೀಲಿಂಗ್ಸು ಮುಂದುವರೆದು ಭಾವಗಳ ಸುರಿಮಳೆಯಲ್ಲಿ ತೊಯ್ದುಬಿಡುತ್ತೇನೆ..
ಅನ್ನಿಯನ್ ಸಿನಿಮಾದ ‘ರಂಡಕ ರಂಡಕ ರಂಡಕ’ ಸಾಂಗು ಶುರುವಾಗಾದ ನನ್ನ ಕಾಲೇಜು ಕ್ರಶ್ಶು ಸ್ಪೋರ್ಟ್ಸ್ ಕಲ್ಚರಲ್ ಪ್ರೋಗ್ರಾಮಿನ ವೇಳೆ ಕಚ್ಚೆ ಸಾರಿ ಉಟ್ಕೊಂಡು ಮೀಸೆ ಅಂಟಿಸಿಕೊಂಡಿದ್ದ ಹುಡುಗೀರ ನಡುವಿನಲ್ಲಿ ಸೊಗಸಾಗಿ ಸ್ಟೆಪ್ಪು ಹಾಕಿದ್ದ ದೃಶ್ಯ ಕಣ್ಮುಂದೆ ಬರುತ್ತೆ. ಉಯ್ಯಾಲೆ ಸಿನಿಮಾದ ‘ಹಗಲು ನಿನ್ನದೇ ಇರುಳು ನಿನ್ನದೆ’ ಸಾಂಗು, ಹಲಿಯಾಳಕ್ಕೆ ಸ್ಪೋರ್ಟ್ಸ್ ಮೀಟ್ಗೆ ಹೋಗುವಾಗ ಪದೇ ಪದೇ ಅದೇ ಸಾಂಗ್ ಕೇಳಿದ್ದನ್ನು ನೆನಪಿಸುತ್ತೆ. ಮಳೆಯಲಿ ಜೊತೆಯಲಿ ಚಿತ್ರದ ‘ಏನೊ ಹೇಳಬೇಕು ಅಂದೆ ಏನದು?’ ಸಾಂಗು ಸ್ನೇಹಿತೆ ಸವಿತಾಳನ್ನು ಕಣ್ಣಮುಂದೆ ನಿಲ್ಲಿಸುತ್ತೆ. ಕಾರಣ ಅದು ಅವಳ ಫೇವರಿಟ್ ಸಾಂಗ್ ಅಂತೆ.
Coke Studio-MTV season-3ಯ ಸುಂದರಿ ಕೋಮೊಲ ಸಾಂಗು ನನ್ನ ಪ್ರೀತಿಯ ಹುಡುಗಿಯ ಭೇಟಿಗೆ ಹೋಗುವಾಗ ದಾರೀಲಿ ಕೇಳುತ್ತಾ ಸಾಗಿದ್ದನ್ನು ನೆನಪಿಸುತ್ತೆ. ಸವಾರಿ ಚಿತ್ರದ ‘ಮರಳಿ ಮರೆಯಾಗಿ’ ಸಾಂಗ್, ಸ್ಪೋರ್ಟ್ಸ್ ಕ್ಲಬ್ ನಲ್ಲಿ ಮಳೆಯಲ್ಲಿ ನಾವೆಲ್ಲಾ ಹ್ಯಾಂಡ್ ಬಾಲ್ ಗೇಮ್ ಆಡುವಾಗ ಸ್ನೇಹಿತೆ ಮೇಘನಾ ಅದೇ ಸಾಂಗ್ ಗುನುಗಿದ್ದನ್ನು ಜ್ಞಾಪಿಸುತ್ತೆ. ‘ಹೋಗೋಣ ಬಾಬಾ ಜಾತರೆಗೆ’ ಜಾನಪದ ಗೀತೆ ಶುರುವಾದಾಗ ನನ್ನ ಹೈಸ್ಕೂಲಿನ ಪಕ್ಕದ ಸ್ಕೂಲು ಇನ್ಫೆಂಟ್ ಜೀಸಸ್ ನ ಹುಡುಗೀರು ಮನಸೆಳೆಯೋ ದಿರಿಸಿನೊಂದಿಗೆ ಪ್ರತಿಭಾ ದಿನಾಚರಣೆ ಕಾಂಪಿಟಿಶನ್ ನಲ್ಲಿ ಕೋಲಾಟ ನೃತ್ಯ ಮಾಡಿದ್ದು, ನಾನು ಪಕ್ಕದಲ್ಲಿ ನಿಂತು ಬೆರಗುಗಣ್ಣಲ್ಲಿ ಅವರತ್ತಲೇ ದಿಟ್ಟಿಸಿದ್ದು ಕಣ್ಮುಂದೆ ತರುತ್ತೆ.. ಬಂಧನ ಸಿನಿಮಾದ ‘ಅದೇ ಭೂಮಿ ಅದೇ ಬಾನು’ ಸಾಂಗು ಸಹಪಾಠಿ ಮಧುಶ್ರೀಯನ್ನು ನೆನಪಿಸುತ್ತೆ. ಯಾಕಂದ್ರೆ ಅದು ಅವಳ ವಿಷ್ಣು ಸಾರ್ ರ ನೆಚ್ಚಿನ ಸಾಂಗ್ ಅಂತೆ. ಪ್ರತೀ ಸಾಂಗ್ ಬರುವಾಗ್ಲೂ ಹೀಗೇ ಒಂದೊಂದು ಚಂದದ ನೆನಪುಗಳು ಮನಸೊಳಗೆ ಬಂದು ಮರೆಯಾಗುತ್ತೆ.
ಇವೆಲ್ಲ ನಾನು ಬೇಕೂಂತಲೇ ನೆನಪಿಸಿಕೊಳ್ಳೋದಲ್ಲ. ಗೀತೆಗಳು ಅದರ ಪಾಡಿಗೆ ಅದು ಚಲಿಸುವಾಗ ಅದ್ಯಾಕೋ ಒಂದೊಂದೇ ನೆನಪಿನೆಳೆಗಳು ಬಿಡಿಸಿಕೊಳ್ಳುತ್ತವೆ. ಅಲ್ಲಿಗೆ ಮ್ಯೂಸಿಕ್ಕಿಗೆ ಕ್ಷಣವೊಂದನ್ನು ಹಿಡಿದಿಟ್ಟುಕೊಳ್ಳುವ, ಗತಕಾಲ ನೆನಪಿಸುವ ಶಕ್ತಿಯಿದೆ ಅಂತಾಯ್ತಲ್ಲ?.
ಇವೆಲ್ಲಾ ನಂಗೆ ಮಾತ್ರ ಆಗೋದಾ? ಅಥವಾ ನಿಮಗೂ ಹೀಗಾಗೋದಿದೆಯಾ ತಿಳಿಸಿ. ಏನೇ ಹೇಳಿ; ನೆನಪುಗಳ ಮಾತು ಮಧುರ ಅಲ್ಲವೆ?
ಪ್ರೀತಿಯಿಂದ
-ಸದಾ ಸಕಲೇಶಪುರ.
ಕಾಮೆಂಟ್‌ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು

Its 100% correct sir.👌🏻👍🏻
ಪ್ರತ್ಯುತ್ತರಅಳಿಸಿThank you
ಅಳಿಸಿSuper
ಪ್ರತ್ಯುತ್ತರಅಳಿಸಿThanks..
ಅಳಿಸಿನಮಗೂ ಹೀಗಾಗುತ್ತೆ sir...
ಪ್ರತ್ಯುತ್ತರಅಳಿಸಿಓಹೋ.. ನೈಸ್..
ಅಳಿಸಿ