ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಐಎಂಡಿಬಿಯಲ್ಲಿ ಅತೀ ಹೆಚ್ಚು ರೇಟಿಂಗ್ ಇರುವ ಪುನೀತ್ ರಾಜ್ ಕುಮಾರ್ ಚಿತ್ರ ಯಾವುದು ಗೊತ್ತಾ?!

ಕರ್ನಾಟಕ ಚಿತ್ರ ರಂಗ ಕಂಡಿರುವ ಅದ್ಭುತ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಒಬ್ಬರು. ಹೃದಯಾಘಾತದಿಂದ ಅಚಾನಕ್ ಸಾವಿಗೀಡಾಗಿರುವ ಪುನೀತ್ ಅವರನ್ನು ಅಭಿಮಾನಿ ಬಳಗ ಈಗಲೂ ಸ್ಮರಿಸಿಕೊಳ್ಳುತ್ತಿದೆ. ಒಬ್ಬ ನಟ ಸಾವನ್ನಪ್ಪಿದಾಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಬನಿ ಮಿಡಿದ ವ್ಯಕ್ತಿಗಳಲ್ಲಿ ಪುನೀತ್ ರಾಜ್ ಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ. ಪುನೀತ್ ಅವರಿದ್ದ ರೀತಿ, ಅವರ ವ್ಯಕ್ತಿತ್ವ, ಒಳ್ಳೆಯ ಗುಣಗಳು, ಸಹಾಯ ಮನೋಭಾವ, ಸೌಜನ್ಯಶೀಲ ನಡೆ ಇವೆಲ್ಲವೂ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತಿಗೆ ಕಾರಣ.

ಮಾರ್ಚ್ 17ರಂದು ಚೆನ್ನೈಯಲ್ಲಿ ಜನಿಸಿದ್ದ ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಿಧನರಾಗುವಾಗ ಪುನೀತ್ ಗೆ 46ರ ಹರೆಯ. ಕನ್ನಡದ ಹಿರಿಯ ನಟ ಡಾಕ್ಟರ್ ರಾಜ್ ಕುಮಾರ್ ಅವರ ಕೊನೇಯ ಪುತ್ರರಾಗಿದ್ದ ಪುನೀತ್ ರಾಜ್ ಅವರು ಪತ್ನಿ ಅಶ್ವಿನಿ ರೇವಂತ್ ಮತ್ತು ಇಬ್ಬರು ಪುತ್ರಿಯರಾದ ವಂದಿತಾ ರಾಜ್ ಕುಮಾರ್ ಮತ್ತು ಧೃತಿ ರಾಜ್ ಕುಮಾರ್ ಅವರನ್ನು ಅಗಲಿದ್ದಾರೆ. ಅಪ್ಪು ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಪುನೀತ್ ನಾಯಕ ನಟನಾಗಿ 29 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದಕ್ಕೂ ಮುನ್ನ ಹಲವಾರು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ್ದರು.

ಐಎಂಡಿಬಿಯಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿರುವ ಟಾಪ್ ರೇಟಿಂಗ್ ಸಿನಿಮಾಗಳ ಪಟ್ಟಿ ಇಲ್ಲಿದೆ.

1. ರಾಜಕುಮಾರ

2017ರಲ್ಲಿ ತೆರೆ ಕಂಡಿರುವ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ಐಎಂಡಿಬಿಯಲ್ಲಿ ಪುನೀತ್ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಆ್ಯಕ್ಷನ್, ಡ್ರಾಮಾ ಸಿನಿಮಾಗಳ ಸಾಲಿನಲ್ಲಿ ಬರುವ ರಾಜಕುಮಾರ ಚಿತ್ರಕ್ಕೆ ಐಎಂಡಿಬಿಯಲ್ಲಿ 8.1 ರೇಟಿಂಗ್ ಇದೆ. ಸಂತೋಷ್ ಆನಂದ್ರಾಮ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

2. ಮಿಲನ

ಪುನೀತ್ ಅಭಿನಯದ ಚಿತ್ರಗಳಲ್ಲಿ ಬಹು ಮೆಚ್ಚುಗೆ ಪಡೆದ ಚಿತ್ರವೆಂದರೆ ಅದು ಮಿಲನ ಚಿತ್ರ. ರೊಮ್ಯಾನ್ಸ್ ಸಿನಿಮಾಗಳ ಸಾಲಿನಲ್ಲಿರುವ ಈ ಸಾಂಸಾರಿಕ ಚಿತ್ರ 2007ರಲ್ಲಿ ತೆರೆ ಕಂಡಿತ್ತು. ಈ ಚಿತ್ರಕ್ಕೂ ಕೂಡ ಐಎಂಡಿಬಿಯಲ್ಲಿ 8.1 ರೇಟಿಂಗ್ ಇದೆ. ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪಾರ್ವತಿ ಮೆನನ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

3. ಅರಸು

ವಿಭಿನ್ನ ಕಥೆ ಹೊಂದಿರುವ ಅರಸು ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಮಹೇಶ್ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಮೀರಾ ಜಾಸ್ಮಿನ್, ರಮ್ಯ ನಾಯಕಿಯರಾಗಿ ನಟಿಸಿದ್ದರು. ಈ ಚಿತ್ರ ಡ್ರಾಮಾ ಸಿನಿಮಾಗಳ ಸಾಲಿನಲ್ಲಿದ್ದು, 2007ರಲ್ಲಿ ತೆರೆ ಕಂಡಿತ್ತು. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 7.5 ರೇಟಿಂಗ್ ಇದೆ.


4. ಹುಡುಗರು

ಪುನೀತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ, ಯೋಗೇಶ್ ಮತ್ತು ರಾಧಿಕಾ ಪಂಡಿತ್ ನಟಿಸಿದ್ದ ಆ್ಯಕ್ಷನ್, ಡ್ರಾಮಾ ಚಿತ್ರ ‘ಹುಡುಗರು’ ಯುವ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿತ್ತು. 2011ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಕೆ ಮಾದೇಶ್ ನಿರ್ದೇಶಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 7.5 ರೇಟಿಂಗ್ ಇದೆ.


 

5. ಚಕ್ರವ್ಯೂಹ

ಎಂ ಸರವಣನ್ ನಿರ್ದೇಶನದ ಚಿಕ್ರವ್ಯೂಹ ಚಿತ್ರ 2016ರಲ್ಲಿ ತೆರೆ ಕಂಡಿತ್ತು. ರಚಿತ ರಾಮ್ ನಾಯಕಿಯಾಗಿ ನಟಿಸಿದ್ದ ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 7.1 ರೇಟಿಂಗ್ ಇದೆ. 

6. ರಣವಿಕ್ರಮ

2015ರಲ್ಲಿ ಬಿಡುಗಡೆಯಾಗಿದ್ದ ರಣವಿಕ್ರಮ ಚಿತ್ರ ಕೂಡ ಯಶಸ್ವಿಯಾಗಿತ್ತು. ಪವನ್ ಒಡೆಯರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅದಾ ಶರ್ಮಾ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 6.6 ರೇಟಿಂಗ್ ಇದೆ. 

7. ಅಭಿ

ಬಾಲ ನಟನೆಯ ಬಳಿಕ ಬೆಳೆದ ಅಪ್ಪು ಅವರು ನಾಯಕರಾಗಿ ನಟಿಸಿದ್ದ ಎರಡನೇ ಚಿತ್ರ ಅಭಿ. 2003ರಲ್ಲಿಈ ಚಿತ್ರ ತೆರೆ ಕಂಡಿತ್ತು. ದಿನೇಶ್ ಬಾಬು ನಿರ್ದೇಶನದಲ್ಲಿರುವ ಈ ಚಿತ್ರದಲ್ಲಿ ರಮ್ಯ ಮುಖ್ಯ ನಟಿಯಾಗಿ ಅಭಿನಯಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 8.1 ರೇಟಿಂಗ್ ಇದೆ.


8. ಮೈತ್ರಿ

ಗಿರಿರಾಜ್ ಬಿಎಂ ನಿರ್ದೇಶಿಸಿರುವ ಮೈತ್ರಿ ಚಿತ್ರ 2015ರಲ್ಲಿ ತೆರೆ ಕಂಡಿತ್ತು. ಪುನೀತ್ ಇದರಲ್ಲಿ ಅತಿಥಿ ಪಾತ್ರದಲ್ಲಿ ಗಮನ ಸೆಳೆದಿದ್ದರು. ಮಲಯಾಳಂನ ಮೇರು ನಟ ಮೋಹನ್ ಲಾಲ್ ಕೂಡ ನಟಿಸಿದ್ದ ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 7.4 ರೇಟಿಂಗ್ ಇದೆ.


9. ಬೆಟ್ಟದ ಹೂವು

ಬಾಲ ನಟನಾಗಿದ್ದಾಗ ಪುನೀತ್ ಗೆ ಹೆಚ್ಚು ಹೆಸರು ತಂದುಕೊಟ್ಟಿದ್ದ ಸಿನಿಮಾ ಬೆಟ್ಟದ ಹೂವು. ಎನ್ ಲಕ್ಷ್ಮೀನಾರಾಯಣ ಅವರು ನಿರ್ದೇಶಿಸಿದ್ದ ಈ ಚಿತ್ರ 1985ರಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 8 ರೇಟಿಂಗ್ ಇದೆ.



10. ಜಾಕಿ

ಸೂರಿ ನಿರ್ದೇಶನದ ಜಾಕಿ ಚಿತ್ರ 2010ರಲ್ಲಿ ತೆರೆ ಕಂಡಿತ್ತು. ಭಾವನ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 7.2 ರೇಟಿಂಗ್ ಇದೆ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು