ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು 50+ ರನ್ ಗಳಿಸಿದವರ ದಾಖಲೆ ಪಟ್ಟಿ


ಕ್ರಿಕೆಟ್ ನಲ್ಲಿ ಚುಟುಕು ಕ್ರಿಕೆಟ್ ಎಂದು ಕರೆಯಲಾಗುವ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯಲ್ಲಿ ಹುಬ್ಬೇರಿಸುವ ದಾಖಲೆ ನಿರ್ಮಿಸಿರುವ ಅನೇಕ ಆಟಗಾರರಿದ್ದಾರೆ. ಈ ಕ್ರಿಕೆಟ್ ಮಾದರಿಯಲ್ಲಿ ಅರ್ಧ ಶತಕ ಅಥವಾ ಶತಕ ಬಾರಿಸೋದು ಸುಲಭವಲ್ಲ. ಆದರೂ ಈ ಸಾಧನೆಯಾದಿಯಲ್ಲಿ ಸೈ ಎನಿಸಿಕೊಂಡವರಿದ್ದಾರೆ. 

ಹೆಮ್ಮೆಯ ಸಂಗತಿಯೆಂದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ಹೆಚ್ಚು 50+ ರನ್ ಬಾರಿಸಿದವರ ಪಟ್ಟಿಯಲ್ಲಿ ಭಾರತೀಯರು ಅಗ್ರ ಸ್ಥಾನದಲ್ಲಿದ್ದಾರೆ. ಈ ಸಾಧನೆಗಾಗಿ ಆರಂಭಿಕ ಸ್ಥಾನದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮಾ ಇಬ್ಬರೂ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.  

ಶುಕ್ರವಾರ (ನವೆಂಬರ್ 19) ರಾಂಚಿಯ ಜೆ.ಎಸ್.ಸಿ.ಎ. ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ನಡೆದ ನ್ಯೂಜಿಲೆಂಡ್-ಭಾರತ ನಡುವಿನ ದ್ವಿತೀಯ ಟಿ20ಐ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವುದರೊಂದಿಗೆ ರೋಹಿತ್ ಶರ್ಮಾ ಅವರು ಟಿ20ಐನಲ್ಲಿ ಅತೀ ಹೆಚ್ಚು ಬಾರಿ 50+ ರನ್ ದಾಖಲೆ ಪಟ್ಟಿಯಲ್ಲಿ ಕೊಹ್ಲಿ ಜೊತೆಗೆ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ. 

ಭಾರತ ಪರ ಆರಂಭಿಕರಾಗಿ ಆಡಿದ್ದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್, ಕೇವಲ 36 ಎಸೆತಗಳಲ್ಲಿ 55 ರನ್ ಕಲೆ ಹಾಕಿದರು. ಈ ಮೂಲಕ ಶರ್ಮಾ ಟಿ20ಐನಲ್ಲಿ ಅತೀ ಹೆಚ್ಚು 50+ ರನ್ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಮತ್ತು ರೋಹಿತ್ ಇಬ್ಬರೂ 29 ಬಾರಿ 50+ ರನ್ ದಾಖಲೆ ಹೊಂದಿದ್ದಾರೆ.  

ಟಿ20ಐ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 50+ ರನ್ ಬಾರಿಸಿದವರ ಪಟ್ಟಿ 
1. ವಿರಾಟ್ ಕೊಹ್ಲಿ, ಭಾರತ, 29 ಬಾರಿ 50+ ರನ್ 
2. ರೋಹಿತ್ ಶರ್ಮಾ, ಭಾರತ, 29 ಬಾರಿ 50+ ರನ್ (4 ಬಾರಿ ಶತಕ) 
3. ಬಾಬರ್ ಅಝಾಮ್, ಪಾಕಿಸ್ತಾನ, 25 ಬಾರಿ 50+ ರನ್ (1 ಬಾರಿ ಶತಕ) 
4. ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 22 ಬಾರಿ 50+ ರನ್ (1 ಬಾರಿ ಶತಕ) 

ಶುಕ್ರವಾರ ನಡೆದ ಭಾರತ-ನ್ಯೂಜಿಲೆಂಡ್ ದ್ವಿತೀಯ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್, 20 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 153 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ, 17.2 ಓವರ್ ಗೆ 3 ವಿಕೆಟ್ ನಷ್ಟದಲ್ಲಿ 155 ರನ್ ಬಾರಿಸುವ ಮೂಲಕ ಪಂದ್ಯ ಜಯಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 2-0ಯ ಗೆಲುವು ದಾಖಲಿಸಿದೆ. ಕಿವೀಸ್ ಇನ್ನಿಂಗ್ಸ್ ನಲ್ಲಿ 25 ರನ್ ಗೆ 2 ವಿಕೆಟ್ ಉರುಳಿಸಿದ್ದ ವೇಗಿ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠರೆನಿಸಿದರು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು