ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
ನಿಸರ್ಗದೊಳಗೂ ಒಬ್ಬ ಅದ್ಭುತ ಕಲಾಕಾರನಿದ್ದಾನೆ. ಅವನಿಗನಿಸದಾಗ ಯಾವ ಹಂಗು-ಗೊಡವೆಯೂ ಇಲ್ಲದೆ ಸುಮ್ಮನೆ ಆತ ಚಿತ್ತಾರ ಬಿಡಿಸುತ್ತಾನೆ, ತನ್ನದೇ ರೀತಿಯಲ್ಲಿ ಶಿಲ್ಪ ರಚಿಸುತ್ತಾನೆ. ಮನುಷ್ಯ ರಚಿಸೋ ಕಲೆಗಿಂತ ಕೊಂಚ ಹೆಚ್ಚೇ ಸೊಗಸು ಅನ್ನಿಸುವಂತ ಅದೆಷ್ಟೋ ಅದ್ಭುತಗಳನ್ನು ಪ್ರಕೃತಿಯೊಳಗಿನ ಕಲಾಕಾರ ಸುಮ್ಮನಾದರೂ ಆಗಾಗ ಬರೆಯುತ್ತಿರುತ್ತಾನೆ.
ಇಲ್ಲಿರೋ ಈ ಸುಂದರ ರಚನೆಗಳನ್ನು ವಿಜ್ಞಾನ ಪ್ರಪಂಚ 'ಸ್ಟಾಲಕ್ಟೈಟ್' ಮತ್ತು 'ಸ್ಟಾಲಗ್ಟೈಟ್'ಗಳೆಂದು ಕರೆಯುತ್ತದೆ. ಸ್ಟಾಲಕ್ಟೈಟ್‌ಗಳೆಂದರೆ ಗುಹೆಗಳ ಮೇಲ್ಚಾವಣಿಯಿಂದ ಕೆಳಕ್ಕೆ ನೇತಾಡುವಂತೆ ಬೆಳೆಯೋ ಒಂದು ಖನಿಜ ರಚನೆ. ಮಳೆಯ ನೀರು ಹೊತ್ತು ತರುವ ಕಾರ್ಬನ್ ಡೈ ಆಕ್ಸೈಡ್ ಮತ್ತಿತರ ಲವಣಗಳು ಕ್ಯಾಲ್ಶಿಯಂ ಕಾರ್ಬೊನೇಟ್, ಕ್ಯಾಲ್ಶಿಯಂ ಬೈ ಕಾರ್ಬೊನೇಟ್‌ಗಳಾಗಿ ಪರಿವರ್ತನೆಯಾಗಿ ಭೂಮಿಯ ಒಳಸೇರಿ, ಖಾಲಿಯಿರುವ ಗುಹೆಯಂತಹ ಜಾಗಗಳಲ್ಲಿ ಹನಿಹನಿಯಾಗಿ ಮೇಲಿನಿಂದ ಅಥವಾ ಕೆಳಗಿನಿಂದ ಜಿನುಗತೊಡಗುತ್ತವೆ. ಹಾಗೆ ಜಿನುಗುವ ಲವಣ ಮಿಶ್ರಿತ ನೀರು, ಗುಹೆಯೊಳಗಿನ ಗಾಳಿಯ ಸಂಪರ್ಕದಿಂದ ಕ್ರಮೇಣ ಗಟ್ಟಿಯಾಗುತ್ತಾ ಹೋಗುತ್ತವೆ. ಹೀಗೆ ಜಿನುಗುವಂತೆಯೇ ಗಟ್ಟಿಯಾಗೋ ಈ ಆಕೃತಿಗಳೇ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್ ರಚನೆಗಳು.
ಸ್ಟಾಲಕ್ಟೈಟ್‌ಗಳು ಗುಹೆಯ ಮೇಲ್ಚಾವಣಿಯಿಂದ ಕೆಳಮುಖವಾಗಿ ಬೆಳೆದರೆ, ಸ್ಟಾಲಗ್ಮೈಟ್‌ಗಳು ಗಿಡಗಳಂತೆ ಭೂಮಿಯಿಂದ ಮೇಲ್ಮುಖವಾಗಿ ಬೆಳೆಯುತ್ತವೆ. ಗುಹೆಗಳ ಮೇಲ್ಚಾವಣಿಯಿಂದ ಮತ್ತು ಅಡಿಯಿಂದ ರೂಪುಗೊಳ್ಳುವ ಈ ಎರಡೂ ರಚನೆಗಳ ಆಕಾರ-ಆಕೃತಿಯ ಕಾಲಂಗಳು ನೋಡುಗರಿಗೆ ಹಬ್ಬವೆನಿಸುವಷ್ಟು ಸೊಗಸಾಗಿರುತ್ತವೆ. ಗುಹೆಗಳಲ್ಲಿ ಅನೇಕ ರೀತಿಯ ಖನಿಜ ರಚನೆಗಳು ಕಂಡು ಬರುತ್ತವೆ. ಅವುಗಳ ರಚನೆ ಮತ್ತು ಬೆಳವಣಿಗೆಗಳಿಗೆ ತಕ್ಕಂತೆ ಹೆಸರುಗಳನ್ನು ಇಡಲಾಗಿದೆ. ಶವರ್ ಹೆಡ್, ಕೋನ್ ರೀತಿಯ ರಚನೆಗಳು ಮತ್ತು ಕಪ್ ಟೀಯ ಮಧ್ಯೆ ಮೇಲಿನಿಂದ ಕಲ್ಲೊಂದು ಎತ್ತಿ ಹಾಕುವಾಗ ಕಪ್ ನಲ್ಲಿದ್ದ ಟೀ ಕಲಕಿ ಚೆಲ್ಲುವಾಗ ಮೂಡುವ ಆಕೃತಿಯ ರೀತಿಯ ರಚನೆಗಳಲ್ಲಿ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ ರಚನೆಗಳು ಕಂಡು ಬರುತ್ತವೆ.
ಸಹಸ್ರಾರು ವರ್ಷಗಳಿಂದಲೂ ಗುಹೆಗಳೊಳಗೆ ದಿನನಿತ್ಯ ಬೆಳೆಯುವ ಈ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ ರಚನೆಗಳ ಬೆಳವಣಿಗೆ ಮನುಷ್ಯರ ಅಥವಾ ಪ್ರಾಣಿಗಳ ಸ್ಪರ್ಶವಾದ ಕೂಡಲೇ ನಿಂತುಬಿಡುತ್ತವೆ ಎಂದು ಅಧ್ಯಯನ ನಿರತರು ಹೇಳುತ್ತಾರೆ. ಅಮೆರಿಕಾದ ಟೆನೆಸ್ಸಿ, ಕೆಂಟಕಿ ಮತ್ತು ನ್ಯೂ ಮೆಕ್ಸಿಕೋ ರಾಜ್ಯಗಳ ಭೂಗರ್ಭದಲ್ಲಿ ಮೈಲುಗಟ್ಟಲೆ ಹಬ್ಬಿರುವ ಗುಹೆಗಳಲ್ಲಿ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಟೈಟ್ ರಚನೆಗಳಿವೆ. ಚೀನಾದ ಗುಯಿಲಿನ್ನಲ್ಲೂ ಈ ರಚನೆಗಳಿರುವ ಗುಹೆಗಳಿವೆ. ಅನೇಕ ವರ್ಷಗಳಿಂದಲೂ ಭೂಮಿಯ ಒಳಗೆ ಲೈಮ್‌ಸ್ಟೋನ್‌ನ ಕೂಡುವಿಕೆಯಿಂದಾಗಿ ರಚನೆಯಾಗಿರೋ ಇಂಥ ಗುಹೆಗಳಲ್ಲಿ ಸ್ಟಾಲಕ್ಟೈಟ್, ಸ್ಟಾಲಗ್ಟೈಟ್‌ಗಳು ಬೆಳೆಯುತ್ತಿವೆ.
ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ ರಚನೆಗಳಿರುವ ಕೆಲವು ಗುಹೆಗಳು ನೀರಿನಿಂದ ಆವೃತವಾಗಿರುತ್ತವೆ. ಇನ್ನು ಕೆಲವು ನೆಲ ಮತ್ತು ನೀರು ಎರಡರಿಂದಲೂ ಕೂಡಿರುತ್ತವೆ. ಅಮೆರಿಕಾದ ಟೆನೆಸ್ಸಿ, ಕೆಂಟಕಿಯ ಮಮ್ಮೋತ್ ಗುಹೆ, ಟೆಕ್ಸಾಸ್‌ನ ಸೋನೋರಾದ ಗುಹೆಗಳು, ಮಿನ್ನೆಸೋಟದ ನಿಯಾಗರ ಗುಹೆ, ಜಾರ್ಜಿಯಾದ ಎಲ್ಲಿಸನ್ಸ್ ಕೇವ್, ವರ್ಜೀನಿಯಾದ ಲುರಾಯ್ ಗುಹೆಗಳು, ಸೌತ್ ಡಕೋಟಾದ ಜುವೆಲ್ ಕೇವ್ಸ್ ಮತ್ತು ನ್ಯೂ ಮೆಕ್ಸಿಕೋದ ಕಾರ್ಲ್ಸ್‌ಬ್ಯಾಡ್ ಗುಹೆಗಳು ಮೊದಲಾದ ಕಡೆಗಳಲ್ಲಿ ಈ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ ರಚನೆಗಳು ಕಾಣಸಿಗುತ್ತವೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಪ್ರಚಲಿತ ಪೋಸ್ಟ್‌ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು



Nice👌🏻👌🏻👌🏻
ಪ್ರತ್ಯುತ್ತರಅಳಿಸಿ