ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಚರ್ಮದ ಕ್ಯಾನ್ಸರ್‌ಗೆ ಗ್ರ್ಯಾನಿಸ್ಮಿತ್ ಮದ್ದು!


ತುಸು ಗಡಸಾದ ತೆಳ್ಳಗಿನ ಹಸಿರು ಸಿಪ್ಪೆ, ರಸಭರಿತ ತಿರುಳು, ಸಿಹಿ-ಹುಳಿ ರುಚಿಯ ಹೂರಣವಾಗಿರುವ ಗ್ರೀನ್ ಆ್ಯಪಲ್ ಬಗ್ಗೆ ಕೇಳಿರುತ್ತೀರಿ, ಒಂದೊಮ್ಮೆ ತಿಂದೂ ಇರುತ್ತೀರಿ. ಆದರೆ ಚರ್ಮದ ಕ್ಯಾನ್ಸರ್‌ ತಡೆಗಟ್ಟುವ ಅಗಾಧ ಶಕ್ತಿಯನ್ನು ತನ್ನೊಳಗೆ ಹುದುಗಿಟ್ಟುಕೊಂಡಿರುವ, ಮಜಬೂತ್ತಾದ ಹಣ್ಣು ಗ್ರ್ಯಾನಿಸ್ಮಿತ್ ಬಗ್ಗೆ ಕೇಳಿದ್ದೀರಾ? ಗಲಿಬಿಲಿಗೊಳ್ಳಬೇಡಿ; ಹಸಿರು ಬಣ್ಣದ ಅದೇ ಗ್ರೀನ್ ಆ್ಯಪಲ್‌ನ ಇನ್ನೊಂದು ಹೆಸರೇ ಗ್ರ್ಯಾನಿಸ್ಮಿತ್. ತನ್ನೊಳಗೆ ಹೇರಳವಾದ ಪೋಷಕಾಂಶಗಳನ್ನು ಅಡಗಿಸಿಟ್ಟುಕೊಂಡಿರುವ ಗ್ರ್ಯಾನಿಸ್ಮಿತ್ ಯಾ ಗ್ರೀನ್ ಆ್ಯಪಲ್ ಆರೋಗ್ಯ ವೃದ್ಧಿ ದೃಷ್ಟಿಯಲ್ಲಿ ಒಂದು ಅದ್ಭುತ ಹಣ್ಣು. ಅದೇನಪ್ಪಾ ಈ ಹಣ್ಣಿನಲ್ಲಿ ಅಂಧದ್ದೇನಿದೆ ಸ್ಪೆಶಲ್ಲು ಅಂತ ಕೇಳೋರೊಮ್ಮೆ ಇದೇ ಸಾಲಿನ ಬೆನ್ನು ಹಿಡಿದು ಬನ್ನಿ; ಗ್ರ್ಯಾನಿಸ್ಮಿತ್‌ನ ಸುತ್ತೊಂದು ಗಿರಕಿ ಹೊಡೆಯೋಣ.

ಮಾಲಸ್ ಸಿಲ್ವಸ್ಟ್ರಿಸ್ ಎಂದು ವೈಜ್ಞಾನಿಕವಾಗಿ ಹೆಸರಿಸಲಾಗುವ ಯುರೋಪ್ ಕಾಡುಗಳ ಒಂದು ಬಗೆಯ ಕಾಡು ಸೇಬಿನ ಹೈಬ್ರಿಡ್ ತಳಿಯೇ ಗ್ರ್ಯಾನಿಸ್ಮಿತ್. ಆಸ್ಟ್ರೇಲಿಯಾದ ಮರಿಯಾ ಆ್ಯನ್ ಸ್ಮಿತ್ ಎಂಬ ಕೃಷಿ ತಜ್ಞೆ ತನ್ನ ತೋಟದಲ್ಲಿ 1868ರಲ್ಲಿ ಪತ್ತೆ ಹಚ್ಚಿದ ಹಣ್ಣಿನ ಹೊಸ ತಳಿಯಿದು. ಮರಿಯಾ ಆ್ಯನ್ ಸ್ಮಿತ್ ಅವರಿಂದಲೇ ಗ್ರೀನ್ ಆ್ಯಪಲ್‌ಗೆ ಗ್ರ್ಯಾನಿಸ್ಮಿತ್ ಎಂಬ ಹೆಸರು ಬಂತು. ಸೇಬಿನ ಈ ಹೊಸ ತಳಿಯನ್ನು ಪತ್ತೆಹಚ್ಚಿ ಎರಡು ವರ್ಷದಲ್ಲಿ (1870) ಆ್ಯನ್ ಸ್ಮಿತ್ ತೀರಿಕೊಂಡರು. ಅನಂತರ ಎಡ್ವರ್ಡ್ ಗ್ಯಾಲರ್ಡ್ ಅವರು ಗ್ರೀನಿಸ್ಮಿತ್ ತಳಿಯನ್ನು ಇನ್ನೂ ಸ್ವಲ್ಪ ಅಭಿವೃದ್ಧಿಗೊಳಿಸಿ ಮಾರುಕಟ್ಟೆಗೆ ತರಲು ಸಹಕರಿಸಿದರು. 1975ರ ಹೊತ್ತಿಗೆ ಗ್ರ್ಯಾನಿಸ್ಮಿತ್ ಹೆಚ್ಚು ಜನಪ್ರಿಯಗೊಂಡು ಆಸ್ಟ್ರೇಲಿಯಾದಲ್ಲಿ ಶೇ. 40ರಷ್ಟು ಗ್ರೀನ್ಆ್ಯಪಲನ್ನು ಬೆಳೆಸಲಾಯಿತು. ಇಂದು ಫ್ರಾನ್ಸ್, ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಗ್ರ್ಯಾನಿಸ್ಮಿತ್ ಅನ್ನು ಹೇರಳವಾಗಿ ಬೆಳಸಲಾಗುತ್ತಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ನ್ಯೂ ಸೌತ್‌ವೇಲ್ಸ್‌ನ ಈಸ್ಟ್‌ವುಡ್‌ನಲ್ಲಿ ಗ್ರ್ಯಾನಿಸ್ಮಿತ್ ವಾರ್ಷಿಕ ಫೆಸ್ಟಿವಲ್ ಅನ್ನು ಆಚರಿಸಲಾಗುತ್ತದೆ.


ಪೋಷಕಾಂಶಗಳ ಹೂರಣ ಗ್ರೀನ್ಆ್ಯಪಲ್ 

ಗ್ರೀನಿಸ್ಮಿತ್ ಆ್ಯಪಲ್‌ನಲ್ಲಿ ಪೋಷಕಾಂಶಗಳು ಹೇರಳವಾಗಿದೆ. ಜೀವಸತ್ವಗಳು ಅಧಿಕಾಗಿರುವುದರಿಂದಲೇ ಗ್ರೀನ್ ಆ್ಯಪಲ್ ಆರೋಗ್ಯವೃದ್ಧಿಗೆ ಬಲು ಸಹಕಾರಿ. ಇದರಲ್ಲಿ ಶಕ್ತಿಯ ಪ್ರಮಾಣವೂ ಸಾಕಷ್ಟು ಪ್ರಮಾಣದಲ್ಲಿದ್ದು, ಶುಗರ್ (10.39 ರ), ಫೈಬರ್ (2.4 ರ), ಫ್ಯಾಟ್ (0.17 ರ), ಕಾರ್ಬೋಹೈಡ್ರೇಟ್ (13.81 ರ), ಪ್ರೋಟೀನ್ (0.26 ರ), ವಿಟಮಿನ್ ಸಿ (4.6 ರ), ಕ್ಯಾಲ್ಶಿಯಂ (6 ಟರ), ಐರನ್ (0.12ಟರ), ಮೆಗ್ನೇಷಿಯಂ (5ಟರ), ಫಾಸ್ಪರಸ್ ( 11ಟರ), ಪೊಟ್ಯಾಷಿಯಂ (107ಟರ) ಮತ್ತು ಜಿಂಕ್ (0.04ಟರ) ಸತ್ವಗಳನ್ನು ಒಳಗೊಂಡಿದೆ.


ಗ್ರೀನ್ಆ್ಯಪಲ್‌ನ ಆರೋಗ್ಯ ವರ್ಧಕ ಅಂಶಗಳು

ತಿನ್ನೋದಕ್ಕೆ ಸಾದಾ ಸೇಬಿನಷ್ಟು ರುಚಿಯನ್ನು ಹೊಂದಿರದಿದ್ದರೂ ನೀರು, ನಾರು, ಸಕ್ಕರೆ, ಎ ಜೀವಸತ್ವ, ಸಿ ಜೀವಸತ್ವದ ಅಂಶಗಳು ಹೇರಳವಾಗಿರುವ ಗ್ರೀನ್ ಆ್ಯಪಲ್ ಆರೋಗ್ಯ ವರ್ಧನೆಗೆ ಬಲು ಸಹಕಾರಿಯಾಗಿದೆ. ದಿನಕ್ಕೊಂದು ಆ್ಯಪಲ್ ತಿಂದು ಡಾಕ್ಟರನ್ನು ದೂರವಿಡಿ ಅನ್ನೋ ಮಾತೊಂದಿದೆ. ಆರೋಗ್ಯ ವಿಚಾರದಲ್ಲಿ ಗ್ರ್ಯಾನಿಸ್ಮಿತ್ ಇನ್ನೂ ಒಂದು ಹೆಜ್ಜೆ ಹೆಚ್ಚೇ ಉಪಯೋಗಿ. ಅಂದ್ಹಾಗೇ ಗ್ರೀನ್ಆ್ಯಪಲ್ ಒಳಗೊಂಡಿರುವ ಪೋಷಕಾಂಶಗಳು, ಆರೋಗ್ಯವರ್ಧಕ ಒಂದಷ್ಟು ಅಂಶಗಳು ಇಲ್ಲಿವೆ. 

1. ನಾರಿನಾಂಶ ಹೇರಳವಾಗಿದೆ

ನಾರಿನಾಂಶಗಳು ಹೆಚ್ಚಾಗಿರುವ ಹಣ್ಣು, ತಿನಿಸುಗಳು ಜೀರ್ಣಕ್ರಿಯೆಗೆ ಒಳ್ಳೇದು ಅನ್ನೋದು ಸಾಮಾನ್ಯವಾಗಿ ಗೊತ್ತಿರುವ ವಿಚ್ಫರ. ಗ್ರೀನ್ಆ್ಯಪಲ್‌ನಲ್ಲಿರುವ ಹೇರಳ ನಾರಿನಾಂಶ ಪಚನ ಕ್ರಿಯೆಯಲ್ಲಿ ಹೆಚ್ಚು ಪ್ರಯೋಜನಕಾರಿ. ಜೀರ್ಣಕ್ರಿಯೆಯಲ್ಲಿ ಗ್ರ್ಯಾನಿಸ್ಮಿತ್ ಹೆಚ್ಚಿನ ಕೊಡುಗೆ ನೀಡಬಲ್ಲದು.

2. ಅಧಿಕ ಖನಿಜಾಂಶಗಳು

ಕಬ್ಬಿಣ, ಜಿಂಕ್, ಕಾಪರ್, ಮೆಗ್ನೇಷಿಯಂ, ಪೊಟ್ಯಾಷಿಯಂ ಅಂಶಗಳನ್ನು ಒಳಗೊಂಡಿರುವ ಗ್ರ್ಯಾನಿಸ್ಮಿತ್ ಆರೋಗ್ಯ ವರ್ಧನೆಗೆ ಉಪಯೋಗಿ. ಅದರಲ್ಲೂ ಈ ಸೇಬಿನಲ್ಲಿರುವ ಕಬ್ಬಿಣಾಂಶ ದೇಹದೊಳಗೆ ಸಂಚರಿಸುವ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಬೂಸ್ಟ್ ಮಾಡುವ ಶಕ್ತಿಯನ್ನು ಹೊಂದಿದೆ. ಚೇಹದ ಚೈತನ್ಯತೆಗೆ ಆಮ್ಲಜನಕ ಎಷ್ಟು ಮಹತ್ವಪೂರ್ಣದ್ದು ಅನ್ನೋದನ್ನು ಮತ್ತಿಲ್ಲಿ ವಿವರಿಸಬೇಕಾದ ಅಗತ್ಯವಿಲ್ಲನೋಡಿ.


3. ಕಡಿಮೆ ಕೊಬ್ಬಿನಾಂಶ 

ಗ್ರ್ಯಾನಿಸ್ಮಿತ್‌ನಲ್ಲಿ ಕೊಬ್ಬನಾಂಶ ಕಡಿಮೆ. ಹಾಗಾಗಿ ಜಿಮ್‌ಗೆ ಹೋಗೋರಿಗೆ, ಬಾಡಿ ಫಿಟ್ನೆಸ್ಸನ್ನು ಬಯಸುವವರಿಗೆ ಇದು ಹೆಚ್ಚು ಪ್ರಯೋಜನಕಾರಿ. ಇದರಲ್ಲಿರುವ ಸಿಟ್ರಿಕ್ ಆಮ್ಲ ರಕ್ತ ನಾಳದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆಗೊಳಿಸಿ ಸುಗಮ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ದೇಹದಲ್ಲಿ ಕೊಬ್ಬು ಹೆಚ್ಚಾಗಿ ದೇಹದ ತೂಕ ಹೆಚ್ಚಾಗದಂತೆ ಗ್ರ್ಯಾನಿಸ್ಮಿತ್ ತಡೆಯುತ್ತದೆ. ಹೀಗಾಗಿಯೇ ಈ ಸೇಬು ತಿಂದಷ್ಟೂ ಕೊಲೆಸ್ಟರಾಲ್ ಸಮಸ್ಯೆ ಕಡಿಮೆಯಾಗುತ್ತೆ. ಹೃದಯಾಘಾತವನ್ನು ತಡೆಗಟ್ಟುವ ಸಾಮರ್ಥ್ಯವೂ ಗ್ರ್ಯಾನಿಸ್ಮಿತ್‌ನಲ್ಲಿದೆ.

4. ಚರ್ಮದ ಕ್ಯಾನ್ಸರ್‌ಗೆ ಬ್ರೇಕ್

ಗ್ರೀನ್ ಆ್ಯಪಲ್‌ನಲ್ಲಿ ವಿಟಮಿನ್ ಎ, ಬಿ, ಸಿ ಅಂಶ ಹೇರಳವಾಗಿರುವುದರಿಂದ ಇದು ಚರ್ಮದ ಕ್ಯಾನ್ಸರನ್ನು ತಡೆಗಟ್ಟುವ ಶಕ್ತಿ ಹೊಂದಿದೆ. ತ್ವಚೆಯ ರಕ್ಷಣೆಯನ್ನೂ ಮಾಡುವುದಲ್ಲದೆ ದೃಷ್ಟಿ ಸಾಮರ್ಥ್ಯವನ್ನು ಹ್ವಚ್ಚಿಸುವ ಗುಣ ಹೊಂದಿದೆ. ಇದರಲ್ಲಿರುವ ಕ್ಯಾಲ್ಶಿಯಂ ಅಂಶ ಮೂಳೆ ಬಲಗೊಳ್ಳುವುದಕ್ಕೂ ಕೊಡುಗೆ ನೀಡುತ್ತದೆ. ಇದಲ್ಲದೆ ಅಸ್ತಮಾ ಖಾಯಿಲೆಯನ್ನು ತಡೆಗಟ್ಟುವ ಪೋಷಕಾಂಶವೂ ಇದೆ. ಸುಮ್ಮನೆ ಬುರುಡೆ ಬಿಡುತ್ತಿಲ್ಲ; ಗ್ರ್ಯಾನಿಸ್ಮಿತ್ ಪಿತ್ತಜನಕಾಂಗ, ಶ್ವಾಸಕೋಶಕ್ಕೂ ಒಳ್ಳೇದು.

5. ಯೂತ್ಸ್‌ಗಿದು ಮೋರ್ ಯೂಸ್‌ಫುಲ್‌ 

ನರ ಸಮಸ್ಯೆಗಳನ್ನು ತಗ್ಗಿಸಿ ದೈಹಿಕವಾಗಿ ಚೈತನ್ಯ ತುಂಬುವ ಸಾಮರ್ಥ್ಯವಿರುವುದರಿಂದ ಗ್ರೀನ್ ಆ್ಯಪಲ್ ಮುದಿತನವನ್ನು ತಗ್ಗಿಸುತ್ತದೆ. ವಿಟಮಿನ್ ಕೆ ಅಂಶವಿರುವುದರಿಂದ ಬ್ಲಡ್‌ ಕ್ಲಾಟಿಂಗ್ ಸಮಸ್ಯೆಯನ್ನೂ ನಿವಾರಿಸುವ ಗುಣ ಈ ಸೇಬು ಹಣ್ಣಿನಲ್ಲಿದೆ. ಯುವಕರು ದಿನ ನಿತ್ಯ (ನಿಯಮಿತವಾಗಿ!) ಗ್ರೀನ್ ಆ್ಯಪಲ್ ತಿನ್ನೋದರಿಂದ ಮೊಡವೆ ಸಮಸ್ಯೆಯೂ ನಿವಾರಣೆಗೊಳ್ಳುತ್ತದೆ. ಹಣ್ಣಿನ ಮರದ ಎಲೆ ಮತ್ತು ಸಿಪ್ಪೆಯ ಪೇಸ್ಟ್ ತಲೆಹೊಟ್ಟಿಗೂ ಮದ್ದಾಗಬಲ್ಲದು. ಕೂದಲ ಬೆಳವಣಿಗೆಗೂ ಹಣ್ಣು ಸಹಕಾರಿ.


ಎಷ್ಟು ಮಂದಿ ಗ್ರೀನ್ ಆ್ಯಪಲ್ ತಿಂದಿದ್ದಾರೋ ಗೊತ್ತಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ಇದೇ ಹಣ್ಣಿನ ಹಾಗೆ ಕೊಂಚ ಸಿಹಿ, ಕೊಂಚ ಹುಳಿ ಹುಳಿಯ ರುಚಿ ಬಾಯೊಳಗೆ ಇಳಿಸುತ್ತಿದ್ದ ನಾಲ್ಕಾಣೆಯ ಗ್ರೀನ್ ಆ್ಯಪಲ್ ಚಾಕ್ಲೆಟನ್ನಾದರೂ ತಿಂದಿರುವ ನೆನಪು ಒಂದಿಬ್ಬರಿಗಾದರೂ ಬಂದರೂ ಬಂದೀತು. ಅಂದ್ಹಾಗೆ ಸಿಕ್ಕರೆ ಒಮ್ಮೆ ತಿಂದುಬಿಡಿ ಗ್ರೀನ್ಆ್ಯಪಲ್, ಅಲ್ಲಲ್ಲ ಗ್ರ್ಯಾನಿಸ್ಮಿತ್!


-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು