ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಅನ್ಯಗ್ರಹ ಜೀವಿಗಳ ಮೇಲೊಂದು ಕಣ್ಣು!

ಪ್ರಪಂಚದ ಅತಿ ಉದ್ದ ಮತ್ತು ಎತ್ತರದ ಸೇತುವೆ ಸೇರಿದಂತೆ ಹತ್ತು-ಹಲವು ಇಂಜಿನಿಯರಿಂಗ್ ಸಾಹಸಗಳನ್ನು ಮಾಡಿರುವ ಚೀನ, 30 ಫುಟ್ಬಾಲ್ ಮೈದಾನದಷ್ಟು ವಿಸ್ತೀರ್ಣವಿರುವ ರೇಡಿಯೋ ದೂರದರ್ಶಕಕ್ಕೆ ಚಾಲನೆ ನೀಡಿತ್ತು. ಈ ಬೃಹತ್ ದೂರದರ್ಶಕ 4,450 ಪ್ರತಿಫಲನ ಫಲಕಗಳನ್ನು ಮತ್ತು 500 ಮೀಟರ್ ಅಗಲದ ಅಪರ್ಚರನ್ನು ಹೊಂದಿದೆ.


ವಿಶ್ವದ ಉಗಮ ಮತ್ತು ಅನ್ಯಗ್ರಹ ಜೀವಿಗಳ ಪತ್ತೆ ಉದ್ದೇಶವನ್ನು ಈ ಬೃಹತ್ ದೂರದರ್ಶಕ ಹೊಂದಿದೆ. ಚೀನಾದ ಗ್ವಿಝೋವ್ ಪ್ರದೇಶದ ಪಿಂಗ್ಟಾಂಗ್ ಗ್ರಾಮದಲ್ಲಿ ಇದರ ನಿರ್ಮಾಣ ಮಾಡಲಾಗಿದ್ದು, ಹಲವಾರು ವರ್ಷಗಳ ಹಿಂದೆಯೇ ಇದರ ಕಾಮಗಾರಿ ಆರಂಭವಾಗಿತ್ತು.


ಈ ಯೋಜನೆಗೆ 1.2 ಬಿಲಿಯನ್ ಯಾನ್ (180 ಮಿಲಿಯನ್ ಡಾಲರ್) ಹಣ ವ್ಯಯಿಸಲಾಗಿದೆ. ದೂರದರ್ಶಕ ಕಾರ್ಯ ನಿರ್ವಹಣೆಗೆ ಸುತ್ತಮುತ್ತ ನಿಶ್ಯಬ್ದ ವಾತಾವರಣವಿರುವುದು ಅವಶ್ಯ. ಅದಕ್ಕಾಗಿ ಆ ಪ್ರದೇಶದ ಎಂಟು ಸಾವಿರ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ 600 ಅಪಾರ್ಟ್‌ಮೆಂಟ್‌ಗಳನ್ನು ಚೀನಾ ಸರಕಾರ ಕಟ್ಟಿಸಿಕೊಟ್ಟಿತ್ತು. ಅಂದ್ಹಾಗೆ, ಇದು ಸದ್ಯಕ್ಕೆ ವಿಶ್ವದ ಅತೀ ದೊಡ್ಡ ದೂರದರ್ಶನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು