ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಹಾಲು ಕೊಡುವ ಗಂಡು ಹೋತ! (ಈ ಜಗ-ಸೋಜಿಗ!)

ಅಚ್ಚರಿಯ ಸಂಗತಿಗಳು ಒಮ್ಮೆ ಕೇಳಿದ್ದರೂ ಮತ್ತೆ ಮತ್ತೆ ಕೇಳೋಕೆ ಬೋರ್ ಅನ್ನಿಸುವುದಿಲ್ಲ. ಏಕೆಂದರೆ ಮೊದಲೇ ಗಮನಿಸಿರುವ ಅಚ್ಚರಿಯ ಸಂಗತಿಯೊಂದು ತಿಂಗಳು ಕಳೆದು ಮತ್ತೊಮ್ಮೆ ಕಣ್ಣಿಗೆ ಬಿದ್ದಾಗಲೂ 'ಇದ್ಹ್ಯಾಗಪ್ಪಾ ಸಾಧ್ಯ?!' ಅನ್ನೋ ಕೌತುಕವೊಂದು ನಮ್ಮನ್ನಾವರಿಸಿ ಕಾಡಲು ಶುರುಮಾಡದೆ ಇರಲಾದರು. ನೀವು ಈ ಹಿಂದೆ ಕೇಳಿರಬಹುದಾಗ, ಆದರೂ ಕೇಳುವಾಗೆಲ್ಲಾ ಚಕಿತ ಮೂಡಿಸುವ ಅಂಥದ್ದೇ ಸಂಗತಿ ಇಲ್ಲೊಂದಿದೆ ನೋಡಿ (ಚಿತ್ರಕೃಪೆ: ಪ್ರಜಾವಾಣಿ).

ರೋಗ ವಾಸಿ: ಕುರಿ ಹಾಲಿಗಾಗಿ ಮುಗಿಬಿದ್ದ ಜನ (ಇದೇ ಸ್ಟೋರಿಗೆ ಸಂಬಂಧಿಸಿ ಪ್ರಜಾವಾಣಿಯ ಕುತೂಹಲಕಾರಿ ಸುದ್ದಿ ಓದಿ)

ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಕ್ಕೂರ ಗ್ರಾಮದಲ್ಲಿ ಬಾಳು ಮಾಮ ಎಂಬವನೊಬ್ಬ ವ್ಯಕ್ತಿಯಿದ್ದ. ಅವನು ನೂರಾರು ಕುರಿಗಳನ್ನು ಸಾಕಿದ್ದ. ಎಲ್ಲ ಕುರಿಗಳೂ ಬಾಳು ಮಾಮನ ಕೇವಲ ಬಾಯಿ ಸನ್ನೆಯಿಂದ ಮಾಲೀಕನ ಹೇಳಿಕೆಗಳನ್ನು ಗುರುತಿಸುತ್ತಿದ್ದುವಂತೆ.

ಬಾಳು ಮಾಮನಿಗಿರುವ ನೂರಾರು ಕುರಿಗಳ ಹಿಂಡಿನಲ್ಲಿ ಒಂದು ಗಂಡು ಹೋತ ಇತ್ತು. ಅಚ್ಚರಿಯೆಂದರೆ ಈ ಗಂಡು ಹೋತ ದಿನಾಲೂ ಮೂರರಿಂದ ನಾಲ್ಕು ಲೀಟರ್ ಹಾಲು ಕೊಡುತ್ತಿತ್ತು. ಹಾಗಾದರೆ ಈ ಕುರಿಯ ದೈಹಿಕ ರಚನೆ ಹೇಗಿರಬಹುದು. ದೈಹಿಕವಾಗಿ ಇದು ಗಂಡಾಗಿದ್ದರೂ ಅದಕ್ಕೆ ತದ್ವಿರುದ್ದವಾಗಿ ಹಾಲು ಹೇಗೆ ಉತ್ಪತ್ತಿಯಾಗುತ್ತಿರಬಹುದು?!

ಗಂಡು ದೇಹದ, ಹೆಣ್ಣಿನ ಮನಸ್ಸಿರುವ ಮನುಷ್ಯನಾದರೂ ಔಷದೋಪಚಾರಗಳಿಂದ, ಅಂಗಾಂಗ ಶಸ್ತ್ರಚಿಕಿತ್ಸೆಯ ವಿಧಾನದಿಂದ ಮಗುವನ್ನು ಪಡೆಯಲು ಸಾಧ್ಯವಾದೀತೇನೋ. ಆದರೆ ಇಂಥ ಪ್ರಾಣಿಗಳಿಗೆ ಅಂಥದ್ದೊಂದು ಅದ್ಭುತ ಶಕ್ತಿ ಕೊಟ್ಟವರ್ಯಾರಿರಬಹುದು?! ಈ ಜಗ-ಸೋಜಿಗವಲ್ಲವೆ? 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು